More

    ಕರೊನಾ ವಿಚಾರದಲ್ಲಿ ದಾಖಲೆ ಬರೆದ ಕೇರಳ! ಒಂದೇ ದಿನ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢ

    ತಿರುವನಂತಪುರಂ: ಭಾರತದ ಬಹುತೇಕ ರಾಜ್ಯಗಳಲ್ಲಿ ಕರೊನಾ ಇಳಿಮುಖ ಕಾಣುತ್ತಿದೆ. ಆದರೆ ದಕ್ಷಿಣ ಭಾರತದ ಕೇರಳದಲ್ಲಿ ಮಾತ್ರ ಸೋಂಕಿನ ಪ್ರಮಾಣ ಭಾರೀ ಏರಿಕೆ ಕಾಣಲಾರಂಭಿಸಿದೆ. ಒಂದೇ ದಿನದಲ್ಲಿ ರಾಜ್ಯದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢವಾಗಿದೆ. ಕಳೆದ 50 ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಏಕದಿನ ಏರಿಕೆ ದಾಖಲು ಮಾಡಿದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.

    ಮಂಗಳವಾರ ಪತ್ತೆಯಾದ 22,129 ಪ್ರಕರಣಗಳೊಂದಿಗೆ ರಾಜ್ಯದ ಒಟ್ಟಾರೆ ಪ್ರಕರಣಗಳ ಸಂಖ್ಯೆ 33 ಲಕ್ಷ ದಾಟಿದೆ. ರಾಜ್ಯದ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 12.35ರಷ್ಟಿದೆ. 1.45 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಒಂದೇ ದಿನದಲ್ಲಿ 156 ಸೋಂಕಿತರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 85 ಸಾವಿರ ಹಾಗೂ ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 22 ಸಾವಿರ ಸಕ್ರಿಯ ಪ್ರಕರಣಗಳು ಬಾಕಿಯಿವೆ.

    ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೂ ಅದನ್ನು ಪರಿಗಣಿಸದ ರಾಜ್ಯ ಸರ್ಕಾರ, ಬಕ್ರೀದ್ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಲಾಕ್​ಡೌನ್ ಸಡಿಲಿಕೆ ಮಾಡಿತ್ತು. ಈ ರೀತಿ ಮಾಡುವುದರಿಂದ ಕರೊನಾ ಹಿಡಿತ ತಪ್ಪಬಹುದು ಎಂದು ಸುಪ್ರೀಂ ಕೋರ್ಟ್ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಎಚ್ಚರಿಸಿತ್ತು. ಲಾಕ್​ಡೌನ್ ಸಡಿಲಿಕೆಯಿಂದಾಗಿ ಸೋಂಕು ಇನ್ನಷ್ಟು ಹೆಚ್ಚಿರುವ ಸಾಧ್ಯತೆಯಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸೋಂಕಿತರು ವರದಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. (ಏಜೆನ್ಸೀಸ್)

    ‘ನನ್ನ ಫೋನ್ ಹ್ಯಾಕ್ ಆಗಿದೆ, ಇದು ಎಮೆರ್ಜೆನ್ಸಿಗಿಂತ ಅತಿ ಕೆಟ್ಟ ಪರಿಸ್ಥಿತಿ’

    ‘ಪ್ರಧಾನಿ ಸ್ಥಾನಕ್ಕೆ ಮಮತಾ ಬ್ಯಾನರ್ಜಿಯವರೇ ಬೆಸ್ಟ್!’ ದೀದಿಯನ್ನು ಹಾಡಿ ಹೊಗಳಿದ ಸಂಸದ

    ಗ್ರಾಹಕರಿಗೆ ಶಾಕ್ ಕೊಟ್ಟ ಏರ್​ಟೆಲ್! ಅಗ್ಗದ ರಿಚಾರ್ಜ್ ಪ್ಲಾನ್ ಕಿತ್ತು ಹಾಕಿದ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts