More

    2.5 ಲಕ್ಷ ಮೌಲ್ಯದ ಬೀಟೆ ನಾಟ ವಶ

    ಕುಮಟಾ:ತಾಲೂಕಿನ ಮೂಡ್ನಳ್ಳಿ ಅರಣ್ಯದಲ್ಲಿ ಬೀಟೆ ನಾಟ ಕಡಿದ ನಾಲ್ವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

    ಸೊಪ್ಪಿನಹೊಸಳ್ಳಿಯ ಮೇದಿನಿ ಗ್ರಾಮದ ನಿವಾಸಿಗಳಾದ ಚಂದ್ರಶೇಖರ ನಾರಾಯಣ ಗೌಡ, ಈಶ್ವರ ರಾಮಾ ಗೌಡ, ನಾಗರಾಜ ತಿಮ್ಮು ಗೌಡ, ಹೊನ್ನಾವರ ತಾಲೂಕಿನ ಮುಟ್ಟಾದ ಹಿರೇಬೈಲ್ ನಿವಾಸಿ ಗಣಪತಿ ರಾಮಾ ನಾಯ್ಕ,‌ಹಾಗೂ ಸಿದ್ದಾಪುರದ ಬೀರಲಮಕ್ಕಿ ಸನಿಹದ ನೆರಗೋಡ ನಿವಾಸಿ ಮಂಜುನಾಥ ಗೋಪಾಲ ನಾಯ್ಕ ಬಂಧಿತರು.

    ಮೂಡ್ನಳ್ಳಿ ಸರ್ವೇ ನಂ. 24 ರ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಅಕ್ರಮವಾಗಿ ಬೀಟೆ ಮರ ಕಡಿದು ಅದನ್ನು ಜಲಾವು ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದುರ್ಗಮ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆಯವರು ಆರೋಪಿಗಳನ್ನು ಮಾಲು ಸಮೇತ ಹಿಡಿದುಹಾಕಿದ್ದಾರೆ.

    ಸ್ಥಳದಲ್ಲಿದ್ದ ಅಂದಾಜು 2.5 ಲಕ್ಷರೂ ಮೌಲ್ಯದ ಬೀಟೆ ಮರದ ತುಂಡುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

    ಇದನ್ನೂ ಓದಿ:ಬೈಕ್ ಕಳ್ಳರಿಬ್ಬರ ಬಂಧನ

    ಡಿಎಫ್‌ಒ ರವಿಶಂಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಎಫ್ ಜಿ.ಲೋಹಿತ್, ಆರ್‌ಎಫ್‌ಒ ಎಸ್. ಟಿ.ಪಟಗಾರ, ಡಿಆರ್‌ಎಫ್‌ಒಗಳಾದ ರವಿ ಮಾದನಗೇರಿ, ರಾಜೆಶ ಕೊಚರೇಕರ, ರಾಘವೇಂದ್ರ ನಾಯ್ಕ, ಹೂವಣ್ಣ ಗೌಡ, ಅರಣ್ಯ ಸಿಬ್ಬಂದಿ ನಯನಕುಮಾರಿ, ಶಂಕರ ಅಜ್ಜಪ್ಪನವರ, ಮಹೇಶ ಗೌಡ, ಕನಕಪ್ಪ ತಳವಾರ, ರಾಘವೇಂದ್ರ ನಾಯ್ಕ, ನರಸಿಂಹ ಪಟಗಾರ, ದತ್ತಾತ್ರಯ ನಾಯ್ಕ, ನಾಗೇಶ ಭಂಡಾರಿ, ಕಮಲಾಕರ ಭಂಡಾರಿ, ನಾಗೇಶ ನಾಯ್ಕ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts