More

    ಅಕ್ರಮ ಆಸ್ತಿ ಖರೀದಿ ನೋಂದಣಿ

    ಕಿಕ್ಕೇರಿ: ಸತ್ತ ವ್ಯಕ್ತಿಯನ್ನು ಬದುಕಿದ್ದಾರೆ ಎಂದು ಜಮೀನು ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.

    ಸುಮಾರು 34ವರ್ಷಗಳ ಹಿಂದೆ(25-11-1990) ಕಿಕ್ಕೇರಿ ಗ್ರಾಮದ ದೊಳ್ಳಶೆಟ್ಟಿ(ಹನುಮಂತಶೆಟ್ಟಿ) ಎನ್ನುವ ವ್ಯಕ್ತಿ ಮೃತರಾಗಿದ್ದರು. ಇವರ ಹೆಸರಿನಲ್ಲಿರುವ ಜಮೀನು ಲಪಟಾಯಿಸಲು ಜೀವಂತ ಇರುವಂತೆ ದಾಖಲೆ ಸೃಷ್ಟಿಸಿಕೊಂಡು ನೋಂದಣಿ ಮೂಲಕ ಕ್ರಯ ಮಾಡಿಕೊಳ್ಳಲಾಗಿದೆ. ಮೃತನ ಕುಟುಂಬದವರು ಪೌತಿ ಖಾತೆ ಮಾಡಿಸಿಕೊಳ್ಳಲು ಇತ್ತೀಚೆಗೆ ಕಂದಾಯ ಇಲಾಖೆಗೆ ಹೋಗಿದ್ದಾಗ ತಮ್ಮ ತಂದೆ ಹೆಸರಿನ ಆಸ್ತಿ ಬೇರೆ ವ್ಯಕ್ತಿ ಹೆಸರಿಗೆ ಕ್ರಯದ ಮೂಲಕ ವರ್ಗಾವಣೆ ಆಗಿರುವ ಪ್ರಕರಣ ಬಯಲಾಗಿದೆ.

    ಮೃತ ಹನುಮಂತಶೆಟ್ಟಿ ಹೆಸರಿನಲ್ಲಿ ಹೋಬಳಿಯ ಜುಜ್ಜಲಕ್ಯಾತನಹಳ್ಳಿ ಗ್ರಾಮದ ಸರ್ವೆ ನಂ.8/ಡಿ. 08.8 ಗುಂಟೆ ಜಮೀನು ಇದೆ. ಈ ಆಸ್ತಿಯನ್ನು ಇದೇ ಜುಜ್ಜಲಕ್ಯಾತನಹಳ್ಳಿ ಗ್ರಾಮದ ಲೇಟ್ ಕೃಷ್ಣೇಗೌಡರ ಮಗ ರಂಗೇಗೌಡ 2023 ಮಾ.20ರಂದು ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ನಂಜೇಗೌಡ ಎನ್ನುವವರನ್ನು ದೊಳ್ಳಶೆಟ್ಟಿ ಎಂದು ಬಿಂಬಿಸಿ ಇವರ ಆಧಾರ್ ಕಾರ್ಡು ನಮೂದಿಸಿ(ನಂ.632744522581) ಕೆ.ಆರ್. ಪೇಟೆಗೆ ಕರೆದುಕೊಂಡು ಹೋಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶುದ್ಧ್ದಕ್ರಯವನ್ನು ಮಾಡಿಸಿಕೊಂಡಿದ್ದಾರೆ.

    ಬರೆದುಕೊಟ್ಟ ವ್ಯಕ್ತಿಯ ಬಳಿ ಇರುವ ಆಧಾರ್ ಕಾರ್ಡಿಗೂ, ಆರ್.ಟಿ.ಸಿ.ಯಲ್ಲಿರುವ ದೊಳ್ಳಶೆಟ್ಟಿಗೆ ಯಾವುದೇ ಹೊಂದಾಣಿಕೆ ಇಲ್ಲ. ದೊಳ್ಳಶೆಟ್ಟಿ ಮೃತಪಟ್ಟು 34 ವರ್ಷಗಳಾಗಿವೆ. ದೊಳ್ಳಶೆಟ್ಟಿ ಕುರುಹಿನಶೆಟ್ಟಿ ಜನಾಂಗದವರಾದರೆ, ನಂಜೇಗೌಡ ಒಕ್ಕಲಿಗ ಸಮುದಾಯದವರಾಗಿದ್ದಾರೆ.
    ಉಪನೋಂದಣಾಧಿಕಾರಿ, ದಸ್ತಾವೇಜು ಬರಹಗಾರರು, ಸರ್ವೇ ಅಧಿಕಾರಿಗಳು ಶಾಮೀಲಾಗಿ ಸುಳ್ಳು ದಾಖಲೆ ಸೃಷ್ಟಿಸಿ, ಮೃತ ವ್ಯಕ್ತಿಯ ಕುಟುಂಬಕ್ಕೆ ಸೇರಬೇಕಾದ ಸ್ವತ್ತನ್ನು ಬೇರೊಬ್ಬರಿಗೆ ಕ್ರಯ ಪತ್ರ ಮಾಡಿಕೊಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮೃತ ದೊಳ್ಳಶೆಟ್ಟಿ ಪುತ್ರ ಕೆ.ಎಚ್. ಕೃಷ್ಣಮೂರ್ತಿ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಜತೆಗೆ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts