More

    ಮಳೆಗಾಗಿ ಚಂದಮಾಮನ ಮದುವೆ

    ಕಿಕ್ಕೇರಿ: ಹೋಬಳಿಯ ಮಾದಾಪುರ ಗ್ರಾಮದಲ್ಲಿ ಸೋಮವಾರ ರೈತರು ಮಳೆಗಾಗಿ ಚಂದಮಾಮನ ಮದುವೆ ನೆರವೇರಿಸಿದರು.

    ಜಾನಪದ ನಂಬುಗೆಯಂತೆ ಮಳೆಗಾಗಿ ಪ್ರಾರ್ಥಿಸಿ ಚಂದಮಾಮನ ಮದುವೆಯನ್ನು ಮಕ್ಕಳ ಮೂಲಕ ಗ್ರಾಮಸ್ಥರು ನಡೆಸಿದರು. ಗ್ರಾಮದಲ್ಲಿನ ಮಕ್ಕಳನ್ನು ಒಂದೆಡೆ ಕಲೆ ಹಾಕಿ ಮದುವೆ ಶಾಸ್ತ್ರ ಮಾಡಲು ಸಜ್ಜಾದರು. ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರನ್ನು ಗಂಡು ಮಕ್ಕಳನ್ನೇ ಆಯ್ಕೆ ಮಾಡಲಾಯಿತು. ಕಾರ್ತಿಕ್ ಮದುಮಗನಾದರೆ, ಚಿರಾಗ್ ಮದುಮಗಳಾಗಿ ಸಜ್ಜಾದರು. ಚಿರಾಗ್‌ಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಸಿಂಗರಿಸಿದರು.

    ಮನೆ ಮನೆಗಳಿಂದ ಮಕ್ಕಳು ರೊಟ್ಟಿ ಹಿಟ್ಟನ್ನು ತಂದು ಒಂದೆಡೆ ಸೇರಿಸಿ ರೊಟ್ಟಿ ತಯಾರಿಸಲು ಸಜ್ಜಾದರು. 9ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ದಿನಕ್ಕೊಂದು ರೊಟ್ಟಿಯಂತೆ 9ರೊಟ್ಟಿ ಹಾಗೂ 9ಸಿಹಿ ಹೋಳಿಗೆ ತಯಾರಿಸಲಾಯಿತು. ರೊಟ್ಟಿಯ ಮೇಲೆ ಚಂದಿರನ ಚಿತ್ರ ಬಿಡಿಸಿದರು. ಪರಸ್ಪರ ರೊಟ್ಟಿ ಕಸಿಯಲು ಯತ್ನಿಸಿದರು. ಅಂತಿಮವಾಗಿ ಒಂದೆಡೆ ಕಲೆತು ಮಳೆರಾಯನ ಕುರಿತು ಹಾಡಿದರು. ನೃತ್ಯ ಮಾಡಿ ಬಾರೋ ಮಳೆರಾಯ ಎಂದು ಕರೆದರು. ಪರಸ್ಪರ ನೀರು ಎರಚಾಡಿ ಸಂಭ್ರಮಿಸಿದರು. ಊರಿನ ಗ್ರಾಮಸ್ಥರು ಇದಕ್ಕೆ ಸಾಥ್ ನೀಡಿದರು.

    ಗ್ರಾಮದಲ್ಲಿ ಮದುವೆ ಸಮಾರಂಭದಂತೆ ವಿವಿಧ ಶಾಸ್ತ್ರ, ತಾಳಿ ಶಾಸ್ತ್ರ ಎಲ್ಲವನ್ನು ಮಾಡಿ ಖುಷಿಪಡಲಾಯಿತು. ಗ್ರಾಮದ ಮುಖಂಡರಾದ ಪುಟ್ಟಕ್ಕ, ಕಾಳಮ್ಮ, ಭಾಗ್ಯ, ನಿರ್ಮಲಾ, ಶಾಂತಲಾ, ಸವಿತಾ, ಲಕ್ಷ್ಮೀ, ಸುರೇಶ್, ಶಿವಶಂಕರ್, ನಾಗೇಗೌಡ, ಯೋಗೇಶ್, ನಿತೀಶ್ ಇದ್ದರು. ಟೈಲರ್ ರಘು ಮದುವೆ ಪೌರೋಹಿತ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts