More

    ತಮಿಳುನಾಡಿನಿಂದ ಅಕ್ರಮ ಒಂಟೆ ಸಾಗಾಣಿಕೆ ಕುರಿತು ಟ್ವಿಟ್ಟರ್​ ದೂರಿನಲ್ಲೆ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ!

    ಆನೇಕಲ್: ಕರ್ನಾಟಕಕ್ಕೆ ಅಕ್ರಮವಾಗಿ ಒಂಟೆಗಳನ್ನು ಸಾಗಿಸುತ್ತಿರುವ ಬಗ್ಗೆ ಟ್ವಿಟ್ಟರ್​ ಮೂಲಕ ದೂರು ಸ್ವೀಕರಿಸಿರುವ ಜಿಲ್ಲಾಧಿಕಾರಿಗಳು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

    ತಮಿಳುನಾಡಿನಿಂದ ಅಕ್ರಮವಾಗಿ ಒಂಟೆಗಳನ್ನು ಸಾಗಿಸಲು ಯತ್ನ ಮಾಡಲಾಗುತ್ತಿದ್ದು, ಇದಕ್ಕಾಗಿ ಹೊಸೂರಿನಲ್ಲಿ ಒಂಟೆಗಳನ್ನು ಒಂದೆಡೆ ಸೇರಿಸಲಾಗಿದೆ. ಈ ಬಗ್ಗೆ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಟ್ವೀಟ್​ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

    ತಮಿಳುನಾಡಿನಿಂದ ಅಕ್ರಮ ಒಂಟೆ ಸಾಗಾಣಿಕೆ ಕುರಿತು ಟ್ವಿಟ್ಟರ್​ ದೂರಿನಲ್ಲೆ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ!

    ಇದೇ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ಅತ್ತಿಬೆಲೆಯಲ್ಲಿ ಬರುವ ಪ್ರತಿಯೊಂದು ವಾಹನಗಳ ತಪಾಸಣೆ ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ.ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರು ಆನೇಕಲ್​ ಉಪವಿಭಾಗ ಪೊಲೀಸರಿಗೆ ಸೂಚನೆ ನೀಡಿದ್ದು, ಗಡಿಭಾಗದ ಚೆಕ್​ಪೋಸ್ಟ್​ಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

    ಹಾಗೆಯೇ ಒಂಟೆಗಳು ಸಾಗಾಣಿಕೆ ಮಾಡುತ್ತಿರುವ ವಾಹನಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದ್ದು, ಸಾರ್ವಜನಿಕರು ಒಂಟೆ ಸಾಗಾಣಿಕೆ ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.ಒಂಟೆ ಸಾಗಾಣಿಕೆ ಮಾಡುವುದು ಕಾನೂನಿನ ಅನ್ವಯ ಅಪರಾಧವಾಗಿದ್ದು, ಮಾಂಸಕ್ಕಾಗಿ ಒಂಟೆಗಳನ್ನು ಸಾಗಿಸುತ್ತಿರುವ ಮಾಹಿತಿ ಹಿನ್ನೆಲೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ.  (ದಿಗ್ವಿಜಯ ನ್ಯೂಸ್​)

    ಗಾಂಜಾ ಸೇವಿಸುತ್ತಿದ್ದಾಗಲೇ ಸಿಕ್ಕಿ ಬಿದ್ದ ಯುವಕರು ಈಗ ಪೊಲೀಸರ ವಶಕ್ಕೆ

    ನಾವಂತು ಯಾವ ಆಪರೇಷನ್ ಮಾಡ್ತಿಲ್ಲ, ಕರ್ನಾಟಕ ಇಬ್ಭಾಗ ಆಗಲು ಬಿಡೋದಿಲ್ಲ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts