More

    ವಾರಿಯರ್ಸ್‌ಗೆ ಪುಷ್ಪಾರ್ಚನೆಗೈದ ಜನತೆ

    ಇಳಕಲ್ಲ: ಕರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಕಳೆದ 25 ದಿನಗಳಿಂದ ಶ್ರಮಿಸುತ್ತಿರುವ ಪೊಲೀಸರು, ಪೌರ ಕಾರ್ಮಿಕರು ನಗರದಲ್ಲಿ ಇನ್ನುಷ್ಟು ಜಾಗೃತಿ ಮೂಡಿಸುವ ಸಲುವಾಗಿ ಶನಿವಾರ ಹಮ್ಮಿಕೊಂಡಿದ್ದ ಪಥ ಸಂಚಲನಕ್ಕೆ ನಗರದ ಜನತೆ ಪುಷ್ಪಾರ್ಚನೆ ಮಾಡುವ ಮೂಲಕ ‘ನಿಮಗಾಗಿ ನಾವು-ನಮಗಾಗಿ ನೀವು’ ಎಂಬುದನ್ನು ಸಾಕ್ಷಿಕರಿಸಿದರು.

    ಶಹರ ಪೊಲೀಸ್ ಠಾಣೆ, ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಕಂಠಿ ವೃತ್ತದಿಂದ ಆರಂಭಗೊಂಡ ಕರೊನಾ ತಡೆಗಟ್ಟುವ ಅಭಿಯಾನದ ಪಥಸಂಚಲನ ನಗರಸಭೆ, ಸುಭಾಷ ರಸ್ತೆ, ಹಳೇ ಪೊಲೀಸ್ ಗ್ರೌಂಡ್, ಬನ್ನಿಕಟ್ಟಿ, ಕೊಪ್ಪರದ ಪೇಟೆ, ಪಶು ಆಸ್ಪತ್ರೆ, ಮೇನ್ ಬಜಾರ್, ಸಾಲಪೇಟೆ, ಗುಬ್ಬಿ ಪೇಟೆ ಮತ್ತಿತರ ಕಡೆ ಸಂಚರಿಸಿ ಅಂಬೇಡ್ಕರ್ ವೃತ್ತ ಮಾರ್ಗವಾಗಿ ಪೊಲೀಸ್ ಠಾಣೆಗೆ ಬಂದು ಮುಟ್ಟಿತ್ತು.

    ಪಥಸಂಚನದ ಸಮಯದಲ್ಲಿ ಭಾಗಿಯಾದ ಪೊಲೀಸರಿಗೆ, ಪೌರ ಕಾರ್ಮಿಕರಿಗೆ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಾಗೂ ಮಾಸ್ಕ್ ಧರಿಸಿ ಪುಷ್ಪಗಳ ಸುರಿಮಳೆಗೈದರು.

    6 ರಿಂದ 7 ಕಿ.ಮೀ. ವರೆಗೆ ನಡೆದ ಪೊಲೀಸ್ ಪಥಸಂಚಲನದಲ್ಲಿ ಬಾಲಕಿ ಸ್ಫೂರ್ತಿ ಅರವಿಂದ ಗೌಡರ ಕರೊನಾ ವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಹಾಡು ಹಾಡಿ ಸಾರ್ವಜನಿಕರ, ಅಧಿಕಾರಿಗಳ, ನೌಕರರ ಗಮನ ಸೆಳೆದಳು.

    ಸಿಪಿಐ ಅಯ್ಯನಗೌಡ ಪಾಟೀಲ, ಶಹರ ಪೊಲೀಸ್ ಠಾಣೆ ಪಿಎಸ್‌ಐ ಆರ್.ವೈ. ಜಲಗೇರಿ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಬಿ.ವಿ. ನ್ಯಾಮಗೌಡ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ತಹಸೀಲ್ದಾರ್ ವೇದ್ಯವಾಸ ಮುತಾಲಿಕ, ಶಿರಸ್ತೆದಾರ್ ಈಶ್ವರ ಗಡ್ಡಿ ಸೇರಿ ಪೊಲೀಸ್ ಪೇದೆಗಳು, ನಗರಸಭೆ ನೌಕರರು, ಪೌರಕಾರ್ಮಿಕರು ವಿನೂತವಾದ ಸಮವಸದೊಂದಿಗೆ ಭಾಗಿಯಾಗಿ ಗಮನ ಸೆಳೆದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts