More

    ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದ ಜನತೆ

    ಇಳಕಲ್ಲ: ಕರೊನಾ ಎರಡನೇ ಅಲೆ ಅಬ್ಬರದಿಂದ ಭಯಗೊಂಡಿರುವ ಜನತೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಲಸಿಕೆ ಹಾಕಿಸಿಕೊಳ್ಳಲು ಮುಗಿ ಬಿದ್ದಿದ್ದರು.

    ಕಳೆದ ಮೂರು ದಿನಗಳಿಂದ ಲಸಿಕೆ ಪೂರೈಕೆಯಿದ್ದಿಲ್ಲ. ಬುಧವಾರ ಲಸಿಕೆ ಬಂದ ನಂತರ ಹಾಗೂ ಗುರುವಾರ ಇಡೀ ದಿನ ಲಸಿಕೆ ಹಾಕಿಸಿಕೊಳ್ಳಲು ನಗರ ಹಾಗೂ ತಾಲೂಕಿನ ಜನತೆ ಲಗ್ಗೆ ಇಟ್ಟಿದ್ದರು.

    ಪರಸ್ಪರ ಅಂತರದಿಂದ ಸರದಿಯಲ್ಲಿ ನಿಲ್ಲುವಂತೆ ನಗರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿ ಆಗಾಗ ಮನವಿ ಮಾಡುತ್ತಿದ್ದರೂ ಯಾರೂ ಕಿವಿಗೆ ಹಾಕಿಕೊಳ್ಳದೆ ನಮಗೇನು ಸಂಬಂಧವಿಲ್ಲದಂತೆ ಗುಂಪು ಗುಂಪಾಗಿ ಸೇರಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದರು.

    ಜನರನ್ನು ನಿಯಂತ್ರಿಸಲು ನಗರಸಭೆ, ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಸಾಕಷ್ಟು ಹರಸಾಹಸ ಪಡುವಂತಾಯಿತು. ಬುಧವಾರ ಮಧ್ಯಾಹ್ನ 250, ಗುರುವಾರ ಬೆಳಗ್ಗೆ 310 ಜನರಿಗೆ ಲಸಿಕೆ ಹಾಕಲಾಯಿತು.

    ಡಾ. ಚೇತನಾ ಶ್ಯಾವಿ, ಡಾ. ನವೀನ ಬಿರಾದಾರ, ನಗರಸಭೆ ವ್ಯವಸ್ಥಾಪಕ ನಬಿಸಾಬ ಕಂದಗಲ್ಲ, ಸಿಬ್ಬಂದಿ ಮುರಾರಿಯಪ್ಪ ಅಮರಾವತಿ, ಸುರೇಶ ಮಾಮನಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts