More

    PHOTOS| ಮತ್ತೆ ಹಾಟ್​ ಬಿಕಿನಿ ಫೋಟೋಗಳನ್ನು ಹರಿಬಿಟ್ಟ ಪ್ರವಾಸ ಪ್ರಿಯೆ ಇಲಿಯಾನಾ!

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ನಟಿ ಇಲಿಯಾನಾ ಡಿಕ್ರೂಜ್ ಮತ್ತೊಮ್ಮೆ ತಮ್ಮ ಮೊಬೈಲ್​ನಿಂದ ಇನ್​ಸ್ಟಾಗ್ರಾಂ ಖಾತೆಗೆ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸದಾ ಹಾಟ್​ ಆ್ಯಂಡ್​ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಇಲಿಯಾನಾ ಈ ಬಾರಿಯು ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.

    ಪ್ರವಾಸ ಪ್ರಿಯೆ ಆಗಿರುವ ಇಲಿಯಾನಾ ಶೂಟಿಂಗ್​ ವಿರಾಮದ ವೇಳೆ ತಮ್ಮ ಕನಸಿನ ತಾಣಗಳಿಗೆ ಆಗಾಗ ಭೇಟಿ ನೀಡುವ ಮೂಲಕ ಸಖತ್​ ಎಂಜಾಯ್​ ಮಾಡುತ್ತಾರೆ. ಅಲ್ಲದೆ, ಈ ವೇಳೆ ತಾವು ಸೆರೆಹಿಡಿದಂತಹ ಫೋಟೋಗಳನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಅಂದರೆಂತೆಯೇ ಇತ್ತೀಚೆಗಷ್ಟೇ ಅಂಡಮಾನ್​ ನಿಕೋಬಾರ್​ನ ಮುಂಜೋಹ್​ ಓಶಿಯನ್​ ರೆಸಾರ್ಟ್​ಗೆ ಭೇಟಿ ನೀಡಿದ್ದ ವೇಳೆ ಸೆರೆಹಿಡಿದಂತಹ ಮಾದಕ ಫೋಟೋಗಳನ್ನು ಹರಿಬಿಟ್ಟಿದ್ದಾರೆ..

    ಫೋಟೋದಲ್ಲಿ ಕಪ್ಪು ಬಣ್ಣದ ಬಿಕಿನಿ ಹಾಗೂ ಟೋಪಿಯನ್ನು ಧರಿಸಿ ಸೊಂಟಕ್ಕೆ ಟವೆಲ್​ ಸುತ್ತಿಕೊಂಡಿರುವ ಇಲಿಯಾನಾ ತಮ್ಮದೇ ಸ್ಟೈಲ್​ನಲ್ಲಿ ತುಂಬಾ ಬೋಲ್ಡ್​ ಆಗಿ ಫೋಸ್​ ನೀಡಿದ್ದಾರೆ. ಸಖತ್​ ವೈರಲ್​ ಆಗಿರುವ ಫೋಟೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ, ಲೈಕ್ಸ್​ಗಳ ಸುರಿಮಳೆ ಹರಿಸಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಇಲಿಯಾನಾ ತಮ್ಮ ಮುಂದಿ ಬಿಗ್​ ಬುಲ್​ ಚಿತ್ರದಲ್ಲಿ ಅಭಿಷೇಕ್​ ಬಚ್ಚನ್​ರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕೊಕೈ ಗುಲಾತಿ ಅವರು ನಿರ್ದೇಶನ ಮಾಡುತ್ತಿದ್ದು, ನಟ ಅಜಯ್​ ದೇವಗನ್​ ಬಂಡವಾಳ ಹೂಡಿದ್ದಾರೆ. ಇತ್ತೀಚೆಗಷ್ಟೇ ಪ್ರೀತಿ ಮುರಿದುಕೊಂಡ ವಿಚಾರದಲ್ಲೂ ಇಲಿಯಾನಾ ಭಾರಿ ಸುದ್ದಿಯಾಗಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts