More

    ಐಐಟಿ, ಎನ್​ಐಟಿಗಳಿಂದ ಸಪ್ಟೆಂಬರ್​ನಲ್ಲಿ ನೂತನ ಶೈಕ್ಷಣಿಕ ವರ್ಷಾರಂಭ, ಜೂನ್​ 20-22ರಂದು ಜೆಇಇ ಮೇನ್​ ಸಾಧ್ಯತೆ

    ನವದೆಹಲಿ: ದೇಶದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕವಿದಿರುವ ಲಾಕ್​ಡೌನ್​ ಕಾರ್ಮೋಡ ಯಾವಾಗ ದೂರಾಗುತ್ತೆ ಎಂಬುದು ಇನ್ನೂ ಅನಿಶ್ಚಿತವಾಗಿದೆ.

    ಮೇ 3ರ ನಂತರವೂ ಲಾಕ್​ಡೌನ್​ ಮುಂದುವರಿಸಬೇಕೆಂದು ಕೆಲ ರಾಜ್ಯಗಳು ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಹೀಗಾಗಿ ಮೇ ಅಂತ್ಯದವರೆಗೆ ಶೈಕ್ಷಣಿಕ ಚಟುವಟಿಕೆಗಳು ಪುನಾರಂಭವಾಗುವ ಸಾಧ್ಯತೆಗಳಿಲ್ಲ.

    ಹೀಗಾಗಿ ಬಾಕಿವುಳಿದಿರುವ ಪರೀಕ್ಷೆಗಳು, ನೂತನ ಶೈಕ್ಷಣಿಕ ವರ್ಷಾರಂಭದ ವೇಳಾಪಟ್ಟಿ ನಿಗದಿ ಸವಾಲಾಗಿ ಪರಿಣಮಿಸಿದೆ. ಯುಜಿಸಿ ನೇಮಿಸಿದ ಸಮಿತಿ ಸೆಪ್ಟಂಬರ್​ನಲ್ಲಿ ಕಾಲೇಜುಗಳ ಪುನಾರಂಭಕ್ಕೆ ಶಿಫಾರಸು ಮಾಡಿದೆ.

    ಇದೀಗ ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ (ಇಂಡಿಯನ್​ ಇನ್​​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ) ಹಾಗೂ ಎನ್​ಐಟಿಗಳು (ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ) ಸೆಪ್ಟಂಬರ್​ನಲ್ಲಿ ನೂತನ ಶೈಕ್ಷಣಿಕ ವರ್ಷಾರಂಭಿಸುವ ಸಾಧ್ಯತೆಗಳಿವೆ.

    ಏಕೆಂದರೆ, ಜೆಇಇ (ಮೇನ್​) ಜೂನ್​ 20-22ರವರೆಗೆ ನಡೆಸುವ ಉದ್ದೇಶ ಹೊಂದಲಾಗಿದೆ. ಇದರ ಫಲಿತಾಂಶ ಪ್ರಕಟಗೊಂಡ ಬಳಿಕ ಕೆಲ ದಿನಗಳಾದರೂ ಸಮಯ ನೀಡಿ ಜೆಇಇ (ಅಡ್ವಾನ್ಸ್​) ನಡೆಸಬೇಕಿದೆ. ಇದನ್ನು ಜುಲೈ 12ರಂದು ನಡೆಸುವ ಯೋಜನೆಯಿದೆ ಎಂದು ಜೆಇಇ (ಅಡ್ವಾನ್ಸ್​) ಸಂಘಟನಾ ಮುಖ್ಯಸ್ಥ ಸಿದ್ಧಾರ್ಥ ಪಾಂಡೆ ತಿಳಿಸಿದ್ದಾರೆ.

    ಇದಾದ ಬಳಿಕ ಐಐಟಿ ಹಾಗೂ ಎನ್​ಐಟಿಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಬೇಕಿದೆ. ಹೀಗಾಗಿ ಸೆಪ್ಟೆಂಬರ್​ ವೇಳೆಗಷ್ಟೇ ನೂತನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಆರಂಭಕ್ಕೆ ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿದೇಶಿಗರಿಗೆ ಕ್ವಾರಂಟೈನ್​ ಕಡ್ಡಾಯ: ಐಐಟಿ ಹಾಗೂ ಎನ್​ಐಟಿಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದೇಶಿ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳು ಮುಂಚಿತವಾಗಿ ಆಗಮಿಸುವಂತೆ ತಿಳಿಸಲಾಗುತ್ತದೆ. ಏಕೆಂದರೆ, ಕಾಲೇಜುಗಳಿಗೆ ಹಾಜರಾಗುವ ಮುನ್ನ ಅವರು ಕ್ವಾರಂಟೈನ್​ ಅವಧಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗುತ್ತದೆ.

    ಲಾಕ್​ಡೌನ್​ ನಡುವೆಯೇ ವಿವಿಧ ಇಲಾಖೆಯ 210 ಹುದ್ದೆಗಳ ನೇಮಕಾತಿಗೆ ಆಯ್ಕೆ ಪಟ್ಟಿ ಪ್ರಕಟಿಸಿದ ಕೆಪಿಎಸ್​ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts