More

    ಜೆಇಇ ಮೈನ್​ : ಏಪ್ರಿಲ್ ಪರೀಕ್ಷೆಗಳ ಮುಂದೂಡಿಕೆ

    ನವದೆಹಲಿ : ಏಪ್ರಿಲ್ 27 ರಿಂದ 30 ರವರೆಗೆ ನಡೆಯಬೇಕಿದ್ದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ, ಜೆಇಇ ಮೇನ್ 2021 ರ ಮೂರನೇ ಹಂತದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉಲ್ಬಣಿಸುತ್ತಿರುವ ಕರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವರಾದ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

    ರಾಷ್ಟ್ರದ ಪ್ರತಿಷ್ಠಿತ ಟೆಕ್ನಾಲಜಿ ಇನ್​ಸ್ಟಿಟ್ಯೂಟ್​ಗಳಿಗೆ ಪ್ರವೇಶ ನೀಡುವ 2021 ರ ಜಾಯಿಂಟ್ ಎಂಟ್ರೆನ್ಸ್ ಮೇನ್ ಎಕ್ಸಾಂ (ಜೆಇಇ ಮೇನ್)ನ ಎರಡು ಹಂತಗಳ ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಮೂರನೇ ಹಂತದ ಪರೀಕ್ಷೆಯು ಏಪ್ರಿಲ್ 27 ರಿಂದ 30 ರವರೆಗೆ ನಿಗದಿಯಾಗಿತ್ತು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಪರೀಕ್ಷೆಗಳನ್ನು ಮುಂದೂಡಲು ಜೆಇಇ ಆಯೋಯಕ ಸಂಸ್ಥೆ ನಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ)ಗೆ ಸಲಹೆ ನೀಡಿದ್ದೇನೆ. ಅದರಂತೆ ಸಂಸ್ಥೆಯು ಪರೀಕ್ಷೆಗಳನ್ನು ಮುಂದೂಡಿದೆ ಎಂದು ನಿಶಾಂಕ್ ಅವರು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕತೆ ಏನು ? ಶಿಕ್ಷಣ ಸಚಿವ ಸುರೇಶ್​​ಕುಮಾರ್ ಹೇಳಿದ್ದು ಹೀಗೆ…

    “ವಿದ್ಯಾರ್ಥಿಗಳ ಮತ್ತು ಪರೀಕ್ಷೆ ನಡೆಸುವ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಏಪ್ರಿಲ್ ಸೆಷನ್​ಅನ್ನು ಮುಂದೂಡಲಾಗಿದೆ. ಹೊಸ ಪರೀಕ್ಷಾ ದಿನಾಂಕಗಳನ್ನು ನಂತರದಲ್ಲಿ, ಪರೀಕ್ಷೆ ನಡೆಯುವ 15 ದಿನಗಳಿಗೆ ಮುಂಚಿತವಾಗಿ, ಘೋಷಿಸಲಾಗುವುದು. ಅಭ್ಯರ್ಥಿಗಳು ಈ ಹೆಚ್ಚುವರಿ ಸಮಯವನ್ನು ಇನ್ನೂ ಉತ್ತಮ ತಯಾರಿ ನಡೆಸಲು ಬಳಸಿಕೊಳ್ಳಬಹುದು. ಎನ್​ಟಿಎ ಅಭ್ಯಾಸ್ ಆ್ಯಪ್​ನಲ್ಲಿ ಪ್ರ್ಯಾಕ್ಟೀಸ್ ಟೆಸ್ಟ್​ಗಳನ್ನು ತೆಗೆದುಕೊಳ್ಳಬಹುದಾಗಿದೆ” ಎಂದು ಎನ್​ಟಿಎ ಹೇಳಿಕೆ ನೀಡಿದೆ. (ಏಜೆನ್ಸೀಸ್)

    ‘ಮನೆಮನೆಯಲ್ಲಿ ರಾಮಾಯಣ’ ಯೋಜನೆ ! ನಿತ್ಯ ಪಾರಾಯಣ ಮಾಡಲು ಇಲ್ಲಿದೆ ವಿವರ

    ನೀಟ್-ಪಿಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts