More

    ಐಐಟಿ ಮದ್ರಾಸ್​ನ ತಂಡದಿಂದ ನೂತನ ಡ್ರೋನ್​ ಆವಿಷ್ಕಾರ; ಇಂಟರ್​ನೆಟ್​ನಿಂದ ನಿಯಂತ್ರಿಸುವಂತಹ ಆಧುನಿಕ ಸೌಲಭ್ಯ

    ಚೆನ್ನೈ: ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ (ಐಐಎಂ) ಮದ್ರಾಸ್​ನ ಸಂಶೋಧಕರು ವಿನೂತನ ಡ್ರೋನ್ ಅವಿಷ್ಕರಿಸಿದ್ದು ಇದಕ್ಕೆ ದೊಡ್ಡ ದೊಡ್ಡ ಡ್ರೋನ್​ಗಳನ್ನು ಉರುಳಿಸುವ ಶಕ್ತಿ ಇದೆ.

    ಸೇನಾ ಪಡೆ, ಕಾನೂನು ಜಾರಿ ಸಂಸ್ಥೆಗಳು, ಭದ್ರತಾ ಸೇವೆಗಳು ಮತ್ತು ಸಶಸ್ತ್ರ ಪಡೆಗಳಿಗೆ ಈ ಆಧುನಿಕ ವ್ಯವಸ್ಥೆಯ ಡ್ರೋನ್​ ಅಮೂಲ್ಯ ಸಹಾಯವಾಗಬಹುದು ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಇದು ರಾಕ್ಷಸ ಡ್ರೋನ್‌ಗಳನ್ನು ಪತ್ತೆಹಚ್ಚುತ್ತದೆ. ಅಲ್ಲದೆ ಅವುಗಳ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್‌ನ್ನು ಹ್ಯಾಕ್ ಮಾಡುವ ಶಕ್ತಿ ಹೊಂದಿದೆ. ಅಲ್ಲದೆ ಎದುರಾಳಿ ಡ್ರೋನ್ ಹಾರಾಟದ ಹಾದಿಯನ್ನು ಬದಲಾಯಿಸುವಂತೆ ಮಾಡುತ್ತದೆ ಎಂದು ಹೇಳಿಕೆ ತಿಳಿಸಿದೆ.

    ಏರೋಸ್ಪೇಸ್​ ವಿಭಾಗದ ಬಿ.ಟೆಕ್​ ವಿದ್ಯಾರ್ಥಿ ವಾಸು ಗುಪ್ತಾ, ಏರೋಸ್ಪೇಸ್​ ಇಂಜಿನಿಯರಿಂಗ್​ ವಿಭಾಗದ ರಿಷಬ್​ ವಶಿಷ್ಟ ಅವರ ತಂಡ ಡ್ರೋನ್​ವನ್ನು ಅಭಿವೃದ್ಧಿಪಡಿಸಿದೆ. ಐಐಟಿ ಏರೊಸ್ಪೇಸ್​ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಂಜಿತ್​ ಮೋಹನ್​ ಅವರು ತಂಡದ ಮುಖ್ಯಸ್ಥರಾಗಿ ಮೇಲುಸ್ತುವಾರಿ ನಿಭಾಯಿಸಿದ್ದರು.

    ನಮ್ಮ ಈ ಮಾದರಿಯು ವಸ್ತುಗಳನ್ನು ಪತ್ತೆಹಚ್ಚಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ನಿಖರವಾಗಿ ಇಳಿಯಲು ಮತ್ತು ಇಂಟರ್ನೆಟ್ ಮೂಲಕ ಹಾರಲು ಇದು ಸಮರ್ಥವಾಗಿದೆ. ಇದರ ಮುಖ್ಯ ಪ್ರಯೋಜನ ಎಂದರೆ ಇದು ಇಂಟರ್​ನೆಟ್​ನಿಂದ ನಿಯಂತ್ರಿಸಬಹುದು. ಈಗ ಅಸ್ತಿತ್ವದಲ್ಲಿರುವ ಹೆಚ್ಚಿನ ಡ್ರೋನ್‌ಗಳಿಗೆ ಹೋಲಿಸಿದರೆ ಇದರ ನಿಯಂತ್ರಣ ಸುಲಭ. ಆದರೆ ಇದು ಆಪರೇಟರ್ ಕಣ್ಣಳತೆಯಲ್ಲಿದ್ದರೆ ಉತ್ತಮ ಎಂದು ಡಾ. ರಂಜಿತ್​ ಮೋಹನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts