More

    ಬೆಂಗಳೂರು, ಮೈಸೂರಿನ ಜೆಎಸ್​ಎಸ್​ನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು: ಜೆಎಸ್​ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್​ನ (ಜೆಎಸ್​ಎಸ್​ಎಟಿಇ) ಬೆಂಗಳೂರು, ಮೈಸೂರು ಹಾಗೂ ನೋಯ್ಡಾದಲ್ಲಿರುವ ಜೆಎಸ್​ಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳ ವೃತ್ತಿ ಅನುಭವ, ಶೈಕ್ಷಣಿಕ ಅರ್ಹತೆ ಆಧರಿಸಿ ವೇತನ ನಿಗದಿಪಡಿಸಲಾಗುವುದು. ಅಲ್ಲದೆ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ನಿಯಮಾನುಸಾರ ವಿದ್ಯಾರ್ಹತೆ ಹೊಂದಿರಬೇಕು ಎಂದು ಸೂಚಿಸಲಾಗಿದೆ.

    ಹುದ್ದೆ ವಿವರ
    ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ನಗರವಾರು, ವಿಭಾಗ ಹಾಗೂ ವಿಷಯ ಆಧಾರಿತ ವಿವರ ಇಲ್ಲಿ ನೀಡಲಾಗಿದೆ.

    ಜೆಎಸ್​ಎಸ್​ಎಸ್​ಟಿ, ಮೈಸೂರು: ಸಿವಿಲ್/ಸಿಟಿಎಂ, ಮೆಕಾನಿಕಲ್/ಐಪಿ, ಸಿಎಸ್​ಇ/ಐಎಸ್​ಇ, ಇ ಆಂಡ್ ಸಿ/ ಇ ಆ್ಯಂಡ್ ಐಇ, ಪಾಲಿಮರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಫಿಜಿಕ್ಸ್, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್, ಬಯೋಟೆಕ್ನಾಲಜಿ ಆ್ಯಂಡ್ ಎಂಸಿಎ ವಿಭಾಗ.

    ಜೆಎಸ್​ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ (ಜೆಎಸ್​ಎಸ್​ಎಟಿಇ), ಬೆಂಗಳೂರು: ಸಿವಿಲ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್(ಸಿಎಸ್​ಇ)/ ಇನ್​ಫಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ (ಐಎಸ್​ಇ), ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ (ಇ ಆಂಡ್ ಸಿ) /ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್​ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ (ಇ ಆಂಡ್ ಐಇ) ವಿಭಾಗ.

    ಜೆಎಸ್​ಎಸ್​ಎಟಿಇ, ನೋಯ್ಡಾ: ಸಿವಿಲ್, ಮೆಕಾನಿಕಲ್, ಸಿಎಸ್​ಇ, ಇ ಆಂಡ್ ಸಿ, ಇಇ, ಎಂಬಿಎ, ಎಂಸಿಎ, ಮ್ಯಾಥಮೆಟಿಕ್ಸ್, ಫಿಜಿಕ್ಸ್ ಆ್ಯಂಡ್ ಕೆಮಿಸ್ಟ್ರಿ ವಿಭಾಗ.

    ಅರ್ಜಿ ಸಲ್ಲಿಕೆ ವಿಧಾನ: ಪ್ರತಿ ನಗರದ ಹುದ್ದೆಗಳಿಗೂ ಪ್ರತ್ಯೇಕ ಅರ್ಜಿ ಸಲ್ಲಿಕೆ ಕೊಂಡಿ ನೀಡಲಾಗಿದ್ದು, ಅಭ್ಯರ್ಥಿಗಳು ಆ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು.
    ಬೆಂಗಳೂರಿನ ಹುದ್ದೆಗೆ https://forms.gle/yQNSF9QN623KBE1J6
    ಮೈಸೂರಿನ ಹುದ್ದೆಗೆ https://forms.gle/Ggcn64rAf4TM7HiG9
    ನೋಯ್ಡಾದ ಹುದ್ದೆಗೆ https://forms.gle/EqhCoog8GFA3BQY67 ಮೂಲಕ ಅರ್ಜಿ ಸಲ್ಲಿಸಬೇಕು.

    ನಂತರ ಅದರ ಪ್ರತಿ ಡೌನ್​ಲೋಡ್ ಮಾಡಿಕೊಂಡು Director, Technical Education Division-JSS MVP, JSS Technical Institutions Campus, Mysuru570006 ವಿಳಾಸಕ್ಕೆ ಕಳುಹಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 10.9.2021
    ಅಧಿಸೂಚನೆಗೆ: https://bit.ly/3jCOOcK
    ಮಾಹಿತಿಗೆ: https://jssateb.ac.in/

    ನರೇಗಾ ಯೋಜನೆಯಡಿ ಆಡಳಿತ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts