More

    ಯುವತಿಯರು ಸೀರೆಯಲ್ಲೇ ಬರಬೇಕು!; ವಿವಾದ ನಂತರ ಸ್ಪಷ್ಟನೆ ನೀಡಿದ ಐಐಟಿ

    ಕೋಲ್ಕೊತಾ: ಪಶ್ಚಿಮ ಬಂಗಾಳದ ಖರಗ್‌ಪುರ ಐಐಟಿಯು ಘಟಿಕೋತ್ಸವಕ್ಕೂ ವಿದ್ಯಾರ್ಥಿಗಳು ಇಂತಹ ದಿರಸನ್ನೇ ಧರಿಸಿ ಬರಬೇಕು ಎಂದು ಸುತ್ತೋಲೆ ಹೊರಡಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿತ್ತು. ತಕ್ಷಣ ಎಚ್ಚರಿತುಕೊಂಡ ಕಾಲೇಜು ಈ ಸುತ್ತೋಲೆ ಕುರಿತಾಗಿ ಸ್ಪಷ್ಟನೆ ನೀಡಿದೆ.

    2023ರ ಘಟಿಕೋತ್ಸವಕ್ಕೆ ವಿದ್ಯಾರ್ಥಿನಿಯರು ಬಿಳಿ ಕಾಟನ್‌ ಸೀರೆ ಹಾಗೂ ವಿದ್ಯಾರ್ಥಿಗಳು ಬಿಳಿ ಕುರ್ತಾ ಧರಿಸಿ ಬರಬೇಕು ಎಂದು ಐಐಟಿ ಅಧಿಸೂಚನೆ ಹೊರಡಿಸಿದೆ.

    ವಿದ್ಯಾರ್ಥಿಗಳು ಪೂರ್ತಿ ತೋಳಿನ, ಮೊಳಕಾಲಿನವರೆಗೆ ಬರುವ, ಕಾಟನ್‌ ಕುರ್ತಾವನ್ನು ಘಟಿಕೋತ್ಸವ ಸಮಾರಂಭಕ್ಕೆ ಧರಿಸಿ ಬರಬೇಕು. ಕಾಟನ್‌ ಪೈಜಾಮಾ ಕೂಡ ಧರಿಸಿ ಬರಬೇಕು. ವಿದ್ಯಾರ್ಥಿನಿಯರು ಬಂಗಾರದ ಬಣ್ಣದ ಬಾರ್ಡರ್‌ ಇರುವ ಕಾಟನ್‌ ಸೀರೆ ಧರಿಸಿ ಆಗಮಿಸಬೇಕು. ಮಾರ್ಗಸೂಚಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ಘಟಿಕೋತ್ಸವಕ್ಕೆ ಯಾವ ರೀತಿಯ ಪಾದರಕ್ಷೆಗಳು ಮತ್ತು ಪರಿಕರಗಳನ್ನು ಧರಿಸಬೇಕು ಎಂದು ಉಲ್ಲೇಖಿಸಲಾಗಿದೆ.

    ಶಿಕ್ಷಣ ಸಂಸ್ಥೆಯು ನಾವು ಧರಿಸುವ ಬಟ್ಟೆಯ ಆಯ್ಕೆಯನ್ನು ಕಸಿದುಕೊಳ್ಳುತ್ತಿದೆ ಎಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕೆಲವು ಪ್ರೊಫೆಸರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಡ್ರೆಸ್ ಕೋಡ್ ಕಡ್ಡಾಯವಲ್ಲ: ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಉಡುಪಿನ ಬಗ್ಗೆ ನೀಡಲಾದ ಮೇಲ್ ಅನ್ನು 69ನೇ ಘಟಿಕೋತ್ಸವದ ವಿಷಯದ ಕಾರಣದಿಂದ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಮಾರ್ಗಸೂಚಿಯಾಗಿದೆ ಆದ್ದರಿಂದ ಅವರ ವಿಶೇಷ ದಿನದಂದು ಭಾಗವನ್ನು ಅರ್ಥಮಾಡಿಕೊಳ್ಳಲು ಮತ್ತು ನೋಡಲು ಅವರಿಗೆ ಸುಲಭವಾಗುತ್ತದೆ ಮತ್ತು ಕಡ್ಡಾಯ ಅವಶ್ಯಕತೆಗಳ ಅಡಿಯಲ್ಲಿ ಬರುವುದಿಲ್ಲ  ಎಂದು ಸ್ಪಷ್ಟನೆ ನೀಡಿದೆ.

    ಹಲ್ಲಿನ ರೂಟ್ ಕೆನಾಲ್ ಬಳಿಕ ಪ್ರಾಣ ಬಿಟ್ಟ ಬಾಲಕ; ವೈದ್ಯಕೀಯ ನಿರ್ಲಕ್ಷ್ಯವೆಂದ ಕುಟುಂಬಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts