More

    ಹಲ್ಲಿನ ರೂಟ್ ಕೆನಾಲ್ ಬಳಿಕ ಪ್ರಾಣ ಬಿಟ್ಟ ಬಾಲಕ; ವೈದ್ಯಕೀಯ ನಿರ್ಲಕ್ಷ್ಯವೆಂದ ಕುಟುಂಬಸ್ಥರು

    ಕೇರಳ: ಖಾಸಗಿ ಆಸ್ಪತ್ರೆಯಲ್ಲಿ ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆಗೆ ಒಳಗಾಗಿದ್ದ ಪುಟ್ಟ ಮಗು ಮಂಗಳವಾರ ದಾರುಣವಾಗಿ ಸಾವನ್ನಪ್ಪಿದ್ದು, ಕುನ್ನಂಕುಲಂನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

    4 ವರ್ಷದ ಬಾಲಕ ಮೃತನಾಗಿದ್ದಾನೆ. ಬಾಲಕನನ್ನು ಕಳೆದುಕೊಂಡ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯ ಆರೋಪದ ಮೇಲೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

    ನಡೆದಿದ್ದೇನು?: ರೂಟ್ ಕೆನಾಲ್​ಗೆಂದು ಕುಟುಂಬಸ್ಥರು ಬಾಲಕನನ್ನು ಕುನ್ನಂಕುಲಂನಲ್ಲಿ ಖಾಸಗಿ ಆಸ್ಪತ್ರೆಗೆ ಕಡೆದುಕೊಂಡು ಬಂದಿದ್ದಾರೆ. ವೈದ್ಯರು ಮೊದಲು ಬಾಲಕನಿಗೆ ಅರಿವಳಿಕೆ ನೀಡಿ ರೂಟ್ ಕೆನಾಲ್ ಮಾಡಿದ್ದಾರೆ.

    ಆದರೆ, ರೂಟ್ ಕೆನಾಲ್​ ನಂತರ ಮಗುವಿಗೆ ಪ್ರಜ್ಞೆ ಬಂದಾಗ ತೀವ್ರ ಅಸ್ವಸ್ಥತೆಯನ್ನು ಅನುಭವಿಸಿದೆ, ರಕ್ತದೊತ್ತಡ ಕಡಿಮೆಯಾಗಿತ್ತು. ಬಳಿಕ 4 ವರ್ಷದ ಪುಟ್ಟ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದೆ. ರೂಟ್ ಕೆನಾಲ್​ಗೆಂದು ಆಸ್ಪತ್ರೆಗೆ ಬಂದಿದ್ದ ಮಗ ಇನ್ನಿಲ್ಲ ಎನ್ನುವ ಸುದ್ದಿ ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ. ಪೋಷಕರ ದೂರಿನ ಮೇರೆಗೆ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​: ನೀವು ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts