More

    ಮಾಸ್ಕ್ ಧರಿಸಿಯೇ ಇದ್ದರೆ ನಿಮ್ಮ ಕಣ್ಣಿಗೂ ಅಪಾಯ… ಜೋಕೆ!

    ಬೆಂಗಳೂರು: ಮಾಸ್ಕ್ ಧರಿಸಿ ಓಡಾಡುವುದು ಈಗ ರೂಢಿಯಾಗಿದೆ ನಿಜ. ಆದರೆ ಪ್ರತಿ ಬಾರಿ ಮಾಸ್ಕ್ ತೊಟ್ಟಾಗಲೂ ಆಗುವ ಹಿಂಸೆ ಅಷ್ಟಿಷ್ಟಲ್ಲ. ಮುಖದ ಚರ್ಮ ಉರಿಯುವುದು, ಕೆಂಪಾಗುವುದು, ಕಿವಿ ನೋಯುವುದು… ಒಂದೇ ಎರಡೇ. ಈ ಸಮಸ್ಯೆಗಳ ಸಾಲಿಗೆ ಕಣ್ಣು ಒಣಗುವುದೂ ಸೇರಿದೆ. ದೀರ್ಘಕಾಲ ಮಾಸ್ಕ್ ಧರಿಸುವವರಿಗೆ ಕಣ್ಣಿನಲ್ಲಿ ಉರಿ ಉಂಟಾಗುವುದು, ಕಣ್ಣು ಒಣಗುವುದು ಸಾಮಾನ್ಯವಾದ ಲಕ್ಷಣವಾಗಿಬಿಟ್ಟಿದೆ ಎನ್ನುತ್ತಾರೆ ನೇತ್ರತಜ್ಞರು. ಇದಕ್ಕೆ ಮಾಸ್ಕ್ ಅಸೋಸಿಯೇಟೆಡ್ ಡ್ರೈ ಐ (ಮಾಸ್ಕ್ ಸಂಬಂಧಿ ಒಣನೇತ್ರ ಸಮಸ್ಯೆ) ಎಂದು ವೈದ್ಯರು ನಾಮಕರಣ ಮಾಡಿದ್ದಾರೆ.

    ಮಾಸ್ಕ್ ಧರಿಸಿದಾಗ ನಾವು ಹೊರಬಿಡುವ ಗಾಳಿಯು ಮೇಲಕ್ಕೆ ಚಲಿಸಿ ಕಣ್ಣಿಗೆ ನಾಟುತ್ತದೆ. ಹೀಗೆ ಬಿಸಿಗಾಳಿ ಕಣ್ಣಿಗೆ ನಾಟುವುದರಿಂದ ಕಣ್ಣುಉರಿ ಇಲ್ಲವೆ ಕಣ್ಣು ಒಣಗುವ ಸಮಸ್ಯೆ ಶುರುಆಗುತ್ತೆ. ಮಾಸ್ಕ್ ಧರಿಸಿಯೇ ದಿನ ಕಳೆಯುತ್ತಿರುವ ವೈದ್ಯಕೀಯ ಸಿಬ್ಬಂದಿ, ರೋಗಿಗಳು, ಅಗತ್ಯ ಸೇವೆಗಳಲ್ಲಿ ನಿರತರಾಗಿರುವವರು ಈ ಸಮಸ್ಯೆಗೆ ಹೆಚ್ಚಾಗಿ ಗುರಿಯಾಗಿದ್ದಾರೆ. ಹಾಗಂತ ಮಾಸ್ಕ್ ತೆಗೆದುಹಾಕಲು ಸಾಧ್ಯವಿಲ್ಲ. ಕರೊನಾ ಲಸಿಕೆ ಬಂದಿದ್ದರೂ ಇನ್ನೂ ಕರೊನಾ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಲೇಬೇಕಿದೆ.

    ಒಂದು ಪರಿಹಾರವೆಂದರೆ ಮೂಗಿನ ಮೇಲೆ ಬಿಗಿಯಾಗಿ ಒತ್ತಿಕೊಂಡಂತೆ ವೈರ್ ಹೊಂದಿರುವ ಮಾಸ್ಕ್ ಧರಿಸುವುದು. ಇದರಿಂದ ನಾವು ಹೊರಹಾಕುವ ಗಾಳಿ ಕಣ್ಣಿನ ಕಡೆಗೆ ಸಂಚರಿಸುವುದು ಕಡಿಮೆ ಆಗುತ್ತದೆ. ಮಾಸ್ಕನ್ನು ಮೂಗಿನ ಮೇಲೆ ಟೇಪ್ ಮಾಡಿಕೊಂಡು ಕೂಡ ಕೆಳಗಿನಿಂದ ಉಸಿರು ಹೊರಹೋಗುವಂತೆ ಮಾಡಿಕೊಳ್ಳಬಹುದು. ಇದರಿಂದ ಸಮಸ್ಯೆ ಕಡಿಮೆ ಆಗಬಹುದು. ಜೊತೆಗೆ ಕೆಲಸದ ವೇಳೆ ಮಾಸ್ಕ್ ಧರಿಸುವ ಅನಿವಾರ್ಯತೆ ಇದ್ದರೆ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊತ್ತು ಮಾಸ್ಕ್ ತೆಗೆಯಿರಿ. ಕಣ್ಣಿನ ಸ್ಥಿತಿ ಸುಧಾರಿಸಿದ ಮೇಲೆ ಮತ್ತೆ ಹಾಕಿಕೊಳ್ಳಿ. ನೇತ್ರತಜ್ಞರ ಸಲಹೆ ಪಡೆದು ಕಣ್ಣಿನ ಡ್ರಾಪ್ಸ್ ಕೂಡ ಬಳಸಬಹುದು. ಹೆಚ್ಚಾಗಿ ಕಣ್ಣು ಮಿಟುಕಿಸುವ ಅಭ್ಯಾಸ ಕೂಡ ಒಳ್ಳೆಯದು.

    ಸ್ನೇಹಿತರ ಜತೆ ಸೇರಿ ಹೆಂಡತಿಯ ಮೇಲೇ ಗ್ಯಾಂಗ್​ ರೇಪ್​ ಮಾಡಿದ ಗಂಡ!

    ಪಕ್ಕದ ಮನೆಯ ಹೆಂಗಸಿಗೆ ಸಾಲ ಕೊಟ್ಟಾಕೆ ಹೆಣವಾದಳು! ಕೊಳ್ಳೆಗಾಲದಲ್ಲಿ ಬೆಚ್ಚಿ ಬೀಳಿಸುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts