More

  ಕನ್ನಡಕ್ಕಾಗಿ ಹೋರಾಡಿದರೆ ಜೈಲಿಗಟ್ಟುವ ಸ್ಥಿತಿ ಸರಿಯಲ್ಲ

  ಭದ್ರಾವತಿ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಬಿಡುಗಡೆಗೆ ಆಗ್ರಹಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ಮಹಿಳಾ ಘಟಕದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.
  ಕನ್ನಡ ನಾಡು ನುಡಿಗೆ ಧಕ್ಕೆ ಬಂದಾಗ ದಿಟ್ಟತನದಿಂದ ಹೋರಾಟಗಳನ್ನು ಮಾಡುತ್ತಿರುವ ನಾರಾಯಣ ಗೌಡರನ್ನು ಡಿ.೨೭ರಂದು ಬಂಽಸಲಾಗಿದೆ. ಬೆಂಗಳೂರಿನಲ್ಲಿ ಅನ್ಯಭಾಷೆಯ ನಾಮ-Àಲಕಗಳನ್ನು ತೆರವುಗೊಳಿಸುವ ವಿಚಾರವಾಗಿ ಅವರು ನಡೆಸಲು ಮುಂದಾದ ಹೋರಾಟ ಸಮರ್ಪಕವಾಗಿದ್ದರೂ ಅವರನ್ನು ಬಂಽಸಿ ಜೈಲಿಗಟ್ಟಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
  ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಕೊಟ್ಟು ಕನ್ನಡತನಕ್ಕೆ ಕೈ ಎತ್ತಿದರೆ ಜೈಲಿಗಟ್ಟುವ ಸ್ಥಿತಿ ಬಂದಿರುವುದು ಅತ್ಯಂತ ದುರಂತದ ಸಂಗತಿ. ಸರ್ಕಾರ ಈ ಕೂಡಲೆ ನಾರಾಯಣಗೌಡ ಹಾಗೂ ಕರವೆ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ಇನ್ನು ಮುಂದೆ ಉದ್ದಿಮೆಗಳಿಗೆ ಪರವಾನಗಿ ಕೊಡುವಾಗ ಕಡ್ಡಾಯವಾಗಿ ಶೇ.೬೦ ಕನ್ನಡದಲ್ಲಿ ನಾಮ-Àಲಕಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಮಹೇಶ್ವರಿ, ಎನ್.ನಾಗರತ್ನಾ, ಎಚ್.ಡಿ.ಸುಶ್ಮಿತಾ ಇತರರಿದ್ದರು.

  See also  ಸದಾಶಿವ ಆಯೋಗದ ವರದಿ ಮರಣ ಶಾಸನ: ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಆತಂಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts