More

    ಶಿಕ್ಷಕರ ಸನ್ಮಾರ್ಗದಲ್ಲಿ ನಡೆದರೆ ಜೀವನ ಸಫಲ

    ಹನುಮಸಾಗರ: ಒಳ್ಳೆಯ ಶಿಕ್ಷಕರ ಸನ್ಮಾರ್ಗದಲ್ಲಿ ನಡೆದರೆ ಜೀವನ ಸಫಲವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಷಣ್ಮುಖಯ್ಯ ಹಿರೇಮಠ ಹೇಳಿದರು.

    ಇದನ್ನೂ ಓದಿ: ಗೊಡ್ಡು ಸಂಪ್ರದಾಯ ಬಿಟ್ಟು ಸನ್ಮಾರ್ಗದಲ್ಲಿ ಸಾಗಿ

    ಪಟ್ಟಣದ ಕುರಬಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 2003-04ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಭೂಮಿ ತಾಯಿ, ವಿದ್ಯ ಕೊಟ್ಟ ಗುರು, ಜನ್ಮ ನೀಡಿದ ತಾಯಿಯನ್ನು ಮರೆಯಲು ಎಂದು ಸಾಧ್ಯವಿಲ್ಲ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಉತ್ತಮವಾಗಿ ಅಭ್ಯಾಸ ಮಾಡುವಂತೆ ಮಾಡುವುದು ಶಿಕ್ಷರ ಕರ್ತವ್ಯ. ಶಿಕ್ಷಕರ ಸನ್ಮಾರ್ಗದಲ್ಲಿ ನಡೆದರೆ ವಿದ್ಯಾರ್ಥಿಗಳ ಜೀವನ ಸಫಲ.

    ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಮಾಡುವುದು ಗುರುಗಳ ಕರ್ತವ್ಯವಾಗಿದೆ. ಗುರು ಅಜ್ಞಾನದಿಂದ ಜ್ಞಾನದೆಡೆಗೆ ವಿದ್ಯಾರ್ಥಿಯನ್ನು ಕೊಂಡೊಯುತ್ತಾನೆ.
    ಶಿಕ್ಷಕ ಅಮರೇಶ ತಮ್ಮಣ್ಣನವರ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಆದರ್ಶವನ್ನು ಇಟ್ಟುಕೊಳ್ಳಬೇಕು.

    ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವದು ಶ್ಲಾಘನೀಯ ವಿಷಯ. ಸಮಾಜದಲ್ಲಿ ಉತ್ತಮನಾಗಿ ಬೆಳೆಯಲಿಕ್ಕೆ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ, ಸರಿಯಾಗಿ ಅಭ್ಯಾಸ ಮಾಡಬೇಕು ಎಂದರು.

    ಮುಖ್ಯ ಶಿಕ್ಷಕ ಹನುಮಂತಯ್ಯ ಮಾನಸಿಹಾಳ, ಶಿಕ್ಷಕರಾದ ಅಮರೇಶ ತಮ್ಮಣನವರ, ನರಸಿಂಹಾಚಾರ್ಯ ಮಠದ, ನಳಿನಾ ಕುಲಕರ್ಣಿ, ಮುದಕಪ್ಪ ಹುಣಶ್ಯಾಳ, ಲೆಂಕಪ್ಪ ವಾಲಿಕಾರ, ಮ್ಯಾಗ್ಡಲಿನಾ ಜೋಸೆಫ, ವಿದ್ಯಾ ಮಾವಿನಕಟ್ಟಿ, ಮಲ್ಲಮ್ಮ ಮಾಲಿಪಾಟೀಲ, ನಸಿಯಾಬೆಗಂ ದೊಡ್ಡಮನಿ, ಭರಮಪ್ಪ ಕಂಡೇಕಾರ, ವಿಜಯಕುಮಾರ ಜಾಲಿಹಾಳ, ದೀಪಾ ಸಾಲೋಟಗಿ, ಕಲ್ಪನಾ ಹಂಡೆಗಾರ, ಜರಿನಾಬೇಗಂ ಜಮಖಾನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts