More

    ಗೊಡ್ಡು ಸಂಪ್ರದಾಯ ಬಿಟ್ಟು ಸನ್ಮಾರ್ಗದಲ್ಲಿ ಸಾಗಿ

    ವಿಜಯಪುರ: ಭಾರತ ದೇಶ ಬಸವ ಭಾರತವಾಗಬೇಕು. ಇದರಿಂದ ಅನಿಷ್ಠ ಪದ್ಧತಿಗಳು, ಕೆಟ್ಟ ಸಂಪ್ರದಾಯಗಳು, ಶೋಷಣೆಗಳು, ಮೇಲು-ಕೀಳುಗಳೆಂಬ ವ್ಯತ್ಯಾಸಗಳು ನಿರ್ಮೂಲನೆಯಾಗಿ ಸಮೃದ್ಧ, ಶಾಂತ ಮತ್ತು ಸಮಾನತೆಯ ಭಾರತವಾಗಲು ಸಾಧ್ಯ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.

    ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಭಾನುವಾರ ಸಂಗಮೇಶ್ವರ ದೇವಸ್ಥಾನ ಅಭಿವೃದ್ಧಿ ಮಂಡಳಿ ಹಾಗೂ ಮಾತೋಶ್ರೀ ಈರಮ್ಮ ಶರಣಮ್ಮನವರ ಅಕ್ಕನ ಬಳಗ ಆಯೋಜಿಸಿದ್ದ ವರದಾನೇಶ್ವರಿ ಮಹಾತ್ಮೆ ಪುರಾಣ ಮಹಾಮಂಗಲೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವರದಾನೇಶ್ವರಿ ಗ್ರಂಥ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಬಸವಾದಿ ಶರಣರು ಜಾತ್ಯತೀತ ಮತ್ತು ಸಮಾನತೆ ಸಿದ್ದಾಂತದ ಮೇಲೆ 12ನೇ ಶತಮಾನದಲ್ಲಿ ಸ್ಥಾಪಿಸಿದರು. ಬಸವಾದಿ ಶರಣರು ಅನುಭವ ಮಂಟಪ ಸ್ಥಾಪಿಸಿ ಅದರಲ್ಲಿ ಎಲ್ಲ ಕಾಯಕ ಸಮುದಾಯದ ಪ್ರತಿನಿಧಿಗಳಿಗೆ ಅವಕಾಶ ನೀಡಿ ಇಷ್ಟಲಿಂಗದ ಪರಿಕಲ್ಪನೆಯನ್ನು ಪ್ರಾರಂಭಿಸಿದರು. ಈ ಮೂಲಕ ಸರ್ವರಿಗೂ ಸಮಬಾಳು ತತ್ವದಡಿ ಕಾಯಕದ ಮಹತ್ವವನ್ನು ಸಾರಿದರು. ಈಗ ಈ ಶರಣರು ಸ್ಥಾಪಿಸಿದ ಬಸವ ಧರ್ಮ ಜಾಗತಿಕ ಧರ್ಮವಾಗಬೇಕು. ಬಸವ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಾಗಬೇಕು. ಭಾರತ ದೇಶ ಬಸವ ಭಾರತವಾಗಬೇಕು ಎಂದು ಹೇಳಿದರು.

    ಆಧ್ಯಾತ್ಮಿಕ ವಿಚಾರದಲ್ಲಿ ಇಡೀ ವಿಶ್ವ ಭಾರತದತ್ತ ನೋಡುತ್ತದೆ. ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಬೆಳಕನ್ನು ವಿಶ್ವದಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದಲ್ಲಿ ಹಂಪಿ, ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು, ಅಜಂತಾ, ಎಲ್ಲೂರು ಪ್ರಾಚೀನ ಸ್ಮಾರಕಗಳು ಕಾಯಕ ವರ್ಗದವರು ಜಗತ್ತಿಗೆ ನೀಡಿರುವ ಕೊಡುಗೆ ತಿಳಿಯುತ್ತದೆ ಎಂದು ಹೇಳಿದರು.

    ಜಾತಿ ಹೊಟ್ಟೆ ತುಂಬಿಸುವುದಿಲ್ಲ. ನಾವು ನೀರಿನ ಜಾತಿಯವರು, ನಾವು ರೈತರ ಜಾತಿಯವರು. ನಾವು ಅಭಿವೃದ್ಧಿ ಜಾತಿಯವರು. ನಾವು ಒಳ್ಳೆಯ ಜಾತಿಯವರು ಎಂಬುದು ನಮ್ಮ ನಿಲುವಾಗಬೇಕು. ಇದೇ ಬಸವ ಧರ್ಮದ ಸಾರವಾಗಿದೆ. ನಮ್ಮ ಭಾರತ ದೇಶ ಬಸವ ಭಾರತನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

    ಗುಡ್ಡಾಪುರದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳು, ತೆಲಸಂಗದ ವಿರೇಶ ದೇವರು ಹಿರೇಮಠ, ಹೊನವಾಡದ ಶ್ರೀ ನಚಿಕೇತ ಹಿರೇಮಠ, ಬಾಬುರಾಯ ಮಹಾರಾಜರು, ಪ್ರಶಾಂತ ತಳಕೇರಿ, ಶಂಕರ ತಿಪ್ಪಾರ ಶಾಸ್ತ್ರಿಗಳು, ಗೌರಿಶಂಕರ ಹಿರೇಮಠ, ಮನಗೂಳಿಯ ಭೀಮಾಶಂಕರ ಶರಣರು, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ ಮುಂತಾದವರು ಉಪಸ್ಥಿತರಿದ್ದರು.


    ಬೊಗಸೆ ನೀರು ಕೊಟ್ಟಿದ್ದೇನೆ
    ಸಿದ್ದೇಶ್ವರ ಸ್ವಾಮೀಜಿ ಆಶಯದಂತೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಬೊಗಸೆ ನೀರು ಕೊಟ್ಟಿದ್ದೇನೆ. ಅದರ ಪರಿಣಾಮವಾಗಿ ಮರೆಯಾಗಿದ್ದ ಹೊನವಾಡ ಗ್ರಾಮದ ಹಿರಿಮೆ ಈಗ ಮತ್ತೆ ಗತವೈಭವಕ್ಕೆ ಮರಳಿದೆ. ಗ್ರಾಮದಲ್ಲಿ ಮುಂದಿನ ತಲೆಮಾರು ಕೂಡ ಉತ್ತಮ ಜೀವನ ಸಾಗಿಸಲು ಅನುಕೂಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts