More

    ಬೆಳೆಗಳಿಗೆ ನೀರು ಹೆಚ್ಚಾದರೆ ರೋಗ ಉಲ್ಬಣ

    ತರೀಕೆರೆ: ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಪೂರೈಸಿದಲ್ಲಿ ರೋಗಕ್ಕೆ ಆಹ್ವಾನ ನೀಡಿದಂತಾಗಲಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿ.ಜೆ.ಶ್ರೀಧರ್ ಮುನ್ನೆಚ್ಚರಿಕೆ ನೀಡಿದರು.

    ಮಂಗಳವಾರ ಬೇಲೇನಹಳ್ಳಿ ಶ್ರೀ ಬೂದಿ ಬಸವೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಹಾಗೂ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬೇಸಿಗೆಯಲ್ಲಿ ನೀರಿನ ನಿರ್ವಹಣೆ ಅತ್ಯಂತ ಶ್ರಮದಾಯಕವಾಗಿದೆ. ರೈತರು ನೀರಿನ ಸಮರ್ಪಕ ಬಳಕೆಗೆ ಮಣ್ಣಿನ ಪರೀಕ್ಷೆ ಮಾತ್ರವಲ್ಲ, ತೇವಾಂಶವನ್ನೂ ತಿಳಿದುಕೊಳ್ಳಬೇಕು. ತೇವಾಂಶ ಶೇ.20ಕ್ಕಿಂತ ಕಡಿಮೆ ಇದ್ದಲ್ಲಿ ಹೆಚ್ಚುವರಿ ನೀರು, ಹೆಚ್ಚಿದ್ದಲ್ಲಿ ಶೇ.20ಕ್ಕಿಂತ ಕಮ್ಮಿ ಪ್ರಮಾಣದ ನೀರು ಒದಗಿಸಬೇಕು.
    ಅಡಕೆ ತೋಟದಲ್ಲಿ ಹನಿ ಅಥವಾ ತುಂತುರು ನೀರಾವರಿ ಪದ್ಧತಿ ಅಳವಡಿಸಿ ನೀರಿನ ಸಮರ್ಪಕ ಬಳಕೆ ಮಾಡಬೇಕು. ನೀರಾವರಿ ಸೇರಿ ಅರೆ ನೀರಾವರಿ ಪ್ರದೇಶದಲ್ಲಿ ಶ್ರೀ ಪದ್ಧತಿ ಅಥವಾ ಏರೋಬಿಕ್ ಪದ್ಧತಿಯಲ್ಲಿ ಭತ್ತ ಬೆಳೆಯುವುದರಿಂದ ನೀರಿನ ನಿರ್ವಹಣೆ ಉತ್ತಮಗೊಳ್ಳಲಿದೆ ಎಂದು ತಿಳಿಸಿದರು.
    ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಅನುವಂಶೀಯ ಹಾಗೂ ತಳಿ ಅಭಿವೃದ್ಧಿ ಶಾಸ್ತ್ರದ ಮುಖ್ಯಸ್ಥ ಡಾ. ಡಿ.ಲಕ್ಷ್ಮಣ, ವಿದ್ಯಾರ್ಥಿನಿಯರಾದ ಡಿ.ಆರ್.ಪ್ರಿಯಾಂಕಾ, ಕೆ.ನಿಸರ್ಗಾ, ಕೆ.ಡಿ.ಅಮೃತಾ, ಡಿ.ಚೈತನ್ಯಾ, ಜಿ.ಪಿ.ಚಂದನಾ, ಜಿ.ಎಸ್.ಪೂರ್ಣಿಮಾ, ಪನ್ನಗಾ ಭೋಗಾರ್, ಪಾರ್ವತಿ ಭೀಮಾ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts