More

    ಹೊರನಾಡಿಗೆ ಹೋಗಲು ಹೆಬ್ಬಾಳೆ ಮುಳುಗಿದರೆ ಹಳುವಳ್ಳಿ ಮಾರ್ಗ ಬಳಸಿ

    ಕಳಸ: ಹೊರನಾಡು ಭಾಗಕ್ಕೆ ತೆರಳುವ ಗ್ರಾಮಸ್ಥರು ಹಾಗೂ ಪ್ರವಾಸಿಗರು ಹೆಬ್ಬಾಳೆ ಮಾರ್ಗದ ಬದಲಾಗಿ ಹಳುವಳ್ಳಿ ಮಾರ್ಗದ ಮೂಲಕ ತೆರಳಬೇಕು ಎಂದು ಚಿಕ್ಕಮಗಳೂರು ಉಪವಿಭಾಗಾಧಿಕಾರಿ ರಾಜೇಶ್ ತಿಳಿಸಿದ್ದಾರೆ.

    ತಾಲೂಕಿನಾದ್ಯಂತ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗುರುವಾರ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಪರಿಶೀಲಿಸಿ ಮಾತನಾಡಿದ ಅವರು, ಇನ್ನೆರಡು ದಿನ ಹೆಚ್ಚು ಮಳೆಯ ಮುನ್ಸೂಚನೆ ಇರುವುದರಿಂದ ಭದ್ರಾ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುವ ಸಾಧ್ಯತೆ ಇದ್ದು, ಸೇತುವೆ ಮುಳುಗಡೆಯಾಗುತ್ತದೆ. ಹಾಗಾಗಿ ಬದಲಿ ಮಾರ್ಗದಲ್ಲಿ ಸಂಚಾರ ಸೂಕ್ತ ಎಂದು ಹೇಳಿದ್ದಾರೆ.
    ನೀರು ಸೇತುವೆ ಮೇಲೆ ಬರಲು ಒಂದು ಅಡಿ ಬಾಕಿ ಇರುವಾಗಲೇ ಎರಡೂ ಬದಿಯಲ್ಲೂ ಬ್ಯಾರಿಕೇಡ್ ಅಳವಡಿಸಿ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗುತ್ತದೆ. ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಯಾರೂ ಕೂಡ ನೀರಿನಲ್ಲಿ ಆಟ ಆಡುವುದು, ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸ ಮಾಡಬಾರದು ಎಂದರು.
    ಕಳಸ ತಹಸೀಲ್ದಾರ್ ತನುಜಾ, ಶಿರಸ್ತೇದಾರ್ ಸುಧಾ, ಕಂದಾಯ ನಿರೀಕ್ಷಕ ಅಜ್ಜೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ, ಶರತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts