More

    ಗ್ಯಾರಂಟಿ ನೀಡಿದ ಪಕ್ಷಕ್ಕೆ ಮತದಾರರ ಮನ್ನಣೆ

    ಚಿಕ್ಕಮಗಳೂರು: ಭಾವನೆ ಮತ್ತು ಜನರ ಬದುಕಿನ ಮಧ್ಯೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಭಾವನೆ ವಿಚಾರದಲ್ಲೂ, ಕಾಂಗ್ರೆಸ್ ಬದುಕಿನ ವಿಚಾರದಲ್ಲಿ ಜನರ ಮುಂದೆ ಬಂದಿವೆ. ಬದುಕಿನ ಗ್ಯಾರಂಟಿ ನೀಡಿರುವ ಕಾಂಗ್ರೆಸ್‌ಗೆ ಮತದಾರರು ಮನ್ನಣೆ ನೀಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಶಿವಾನಂದಸ್ವಾಮಿ ತಿಳಿಸಿದರು.
    ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಹಾಗೂ 18ನೇ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿರುವ ಭರವಸೆ ಗ್ಯಾರಂಟಿಗಳು ಜನರ ಬದುಕಿನ ಗ್ಯಾರಂಟಿಗಳಾಗಿವೆ. ಇವುಗಳು ಕಾಂಗ್ರೆಸ್ ಗೆಲ್ಲಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಬಿಜೆಪಿ ಧರ್ಮ, ಮಂದಿರ ಮತ್ತು ಹಸಿ ಸುಳ್ಳುಗಳನ್ನು ಹೇಳುತ್ತಾ ಹೊರಟಿದ್ದು, ಇವೆಲ್ಲ ಅವರಿಗೆ ಜಯ ತಂದುಕೊಡುವುದಿಲ್ಲ. ಕಾಂಗ್ರೆಸ್‌ಗೆ ನಿರೀಕ್ಷೆಗೂ ಮೀರಿದ ಜಯ ಸಿಗಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಭಾರಿ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
    ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳು ರಾಷ್ಟ್ರಕ್ಕೆ ಮಾದರಿಯಾಗಿವೆ ಎಂಬುದನ್ನು ಬಿಜೆಪಿಯೇ ಒಪ್ಪಿಕೊಳ್ಳುವ ಸ್ಥಿತಿ ಬಂದಿದೆ. ಅವರೂ ಕೂಡ ಮೋದಿ ಗ್ಯಾರಂಟಿ ಎಂಬ ಪದ ಬಳಕೆ ಮಾಡುವಲ್ಲಿಗೆ ಮುಟ್ಟಿದ್ದಾರೆ. ರಾಜ್ಯದ 1.20 ಕೋಟಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ಗೃಹಲಕ್ಷ್ಮೀ ಯೋಜನೆ, ಜಿಲ್ಲೆಯಲ್ಲಿ 2.63 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಸುಮಾರು 4 ಕೋಟಿ ರೂ.ಜನರ ಬೆಳಕಿನ ಬಾಗಿಲು ತೆರೆದಿದೆ. ಜಿಲ್ಲೆಯಲ್ಲಿ ಇದರ ಲಾಭ 3 ಲಕ್ಷ ಮನೆಗಳಿಗೆ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು.
    ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಜಿಲ್ಲಾ ಸಮಿತಿ ನಿರ್ದೇಶಕರಾದ ಜೇಮ್ಸ್ ಡಿಸೋಜಾ, ಅನ್ಸರ್ ಅಲಿ, ರೋಹಿತ್, ಪುನೀತ್, ನಾಗೇಶ್ ಅರಸ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts