More

    video/ ಶವವನ್ನು ದರದರನೆ ಎಳೆತಂದು ಗುಂಡಿಗೆ ಎಸೆಯುತ್ತಾರೆ… ಕರ್ನಾಟಕದಲ್ಲಿ ಮಣ್ಣಾಯ್ತಾ ಮಾನವೀಯತೆ?

    ಯಾದಗಿರಿ: ಕರೊನಾ ಸೋಂಕಿತ ವ್ಯಕ್ತಿ ಮೃತಪಟ್ಟರೆ ಶವಸಂಸ್ಕಾರವನ್ನು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ಶಿಷ್ಟಾಚಾರದಂತೆ ಮಾಡಬೇಕು ಎಂಬ ನಿಯಮವಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ನಿಯಮಕ್ಕೀಗ ಕವಡೆಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ.

    ಹೌದು, ಈ ಮಾತಿಗೆ ಅಕ್ಷರಶಃ ಪುಷ್ಟಿ ನೀಡುತ್ತಿವೆ ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ವೇಳೆ ಸಂಭವಿಸುತ್ತಿರುವ ಲೋಪಗಳು. ಬಳ್ಳಾರಿಯಲ್ಲಿ ಕರೊನಾ ವೈರಸ್​ನಿಂದ ಮೃತಪಟ್ಟ 9 ಜನರ ಶವವನ್ನು ಒಂದೇ ಗುಂಡಿಗೆ ಎಸೆದು ಮುಚ್ಚಿದ ದೃಶ್ಯ ಇಡೀ ದೇಶದ ಜನರನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಅಂತಹದ್ದೇ ಮತ್ತೊಂದು ಅಮಾನವೀಯ ಘಟನೆ ಯಾದಗಿರಿಯ ಹೊನಗೇರಾದಲ್ಲಿ ಸಂಭವಿಸಿದೆ. ಕರೊನಾ ಸೋಂಕಿತನ ಶವವನ್ನು ದರದರನೆ ಎಳೆದು ತಂದ ಸಿಬ್ಬಂದಿ ಗುಂಡಿಗೆ ಎಸೆದು ಮುಚ್ಚಿದ ದೃಶ್ಯ ವೈರಲ್​ ಆಗಿದೆ. ಇದನ್ನೂ ಓದಿರಿ ಸ್ಮಶಾನದಲ್ಲೇ ಎಸೆದರು ಪಿಪಿಇ ಕಿಟ್​, ಸ್ಥಳೀಯರಲ್ಲಿ ಆತಂಕ 

    ರಾಯಚೂರು ಜಿಲ್ಲೆ ಸಿರವಾರದಲ್ಲಿ ಭಾನುವಾರ ಮಗಳ ಮದುವೆ ಮಾಡಿ ಖುಷಿಯಲ್ಲಿದ್ದ ಹೊನಗೇರಾ ಗ್ರಾಮದ 45 ವರ್ಷದ ವ್ಯಕ್ತಿಯೊಬ್ಬರು ಆರೋಗ್ಯದಲ್ಲಿ ಏರುಪೇರಾಗಿ ರಿಮ್ಸ್​ನಲ್ಲಿ ಕೊನೆಯುಸಿರೆಳೆದಿದ್ದರು. ಇವರ ಸಾವಿನ ಬಳಿಕ ಬಂದ ವರದಿಯಲ್ಲಿ ಕರೊನಾ ಸೋಂಕು ಇರುವುದು ಗೊತ್ತಾಯಿತು. ಮಂಗಳವಾರ ಹೊನಗೇರಾಕ್ಕೆ ಶವ ತಂದಿದ್ದು, ಮೃತನ ಸಹೋದರನ ಜಮೀನಿನಲ್ಲಿ ಸತ್ತ ಪ್ರಾಣಿಗಳಿಗಿಂತ ಹೀನಾಯವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.

    ಶವವನ್ನು ಆಂಬುಲೆನ್ಸ್​ನಿಂದ ಕೆಳಗಿಳಿಸಿದ ಸಿಬ್ಬಂದಿ, ದರದರನೆ ಎಳೆದು ಗುಂಡಿಗೆ ಎಸೆದರು. ಜೆಸಿಬಿಯಿಂದ ಗುಂಡಿ ಮುಚ್ಚಿದರು. ಜಿಲ್ಲೆಯಲ್ಲಿ ಸೋಂಕಿತರ ಶವಸಂಸ್ಕಾರಕ್ಕೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿರಿ ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

    ಇಂತಹ ಅಮಾನವೀಯ ಘಟನೆ ನಡೆದಿರುವುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎಸ್​. ಪಾಟೀಲ್​ ಅವರಿಗೇ ಗೊತ್ತೇ ಇಲ್ಲವಂತೆ! ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪಾಟೀಲ್​, ಮಂಗಳವಾರ ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಹೊನಗೇರಾದಲ್ಲಿ ಈ ರೀತಿಯ ಘಟನೆ ನಡೆದಿರುವುದು ಗಮನಕ್ಕೆ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವೆ ಎಂದಿದ್ದಾರೆ.

    ಕರೊನಾದಿಂದ ಸತ್ತವರ ಶವವನ್ನು ಎಸೆದರು!

    ಕರೊನಾ ಸೋಂಕಿನಿಂದ ಸತ್ತವರ ಶವವನ್ನು ಎಸೆದರು!ಈ ವಿಡಿಯೋ ನೋಡಿದ್ರೆ ಅಕ್ಷರಶಃ ಕಾರ್ನಾಟಕದಲ್ಲಿ ಮಾನವೀಯತೆ ಮಣ್ಣಾಯ್ತಾ? ಎಂಬ ಪ್ರಶ್ನೆ ಮೂಡದೆ ಇರದು. ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಧರಧರನೆ ಎಳೆತಂದು ಗುಂಡಿಗೆ ಹೇಗೆ ಎಸೆಯುತ್ತಾರೆ ನೋಡಿ. ಇದು ಯಾದಗಿರಿಯ ಹೊನಗೇರಾದಲ್ಲಿ ಮಂಗಳವಾರ ಸಂಭವಿಸಿದ ಅಮಾನವೀಯ ಘಟನೆ.#Funeral #Inhumanity #Dead #Corona

    Posted by Vijayavani on Wednesday, July 1, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts