More

    video/ ಕರೊನಾ ಸೋಂಕಿನಿಂದ ಸತ್ತವನನ್ನು ಚೀಲದಲ್ಲಿ ಮುಚ್ಚಿದ್ರು!

    ತುಮಕೂರು: ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಅಂತ್ಯಸಂಸ್ಕಾರ ಮಾಡಿರುವ ವಿಡಿಯೋ ವೈರಲ್​ ಆಗಿದೆ.

    ಕುಣಿಗಲ್ ತಾಲೂಕಿನ ತಿಮ್ಮೇಗೌಡನ ಪಾಳ್ಯದಲ್ಲಿ ಈ ಘಟನೆ ಸಂಭವಿಸಿದೆ. ಮನೆಯಲ್ಲೇ 60 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಮೃತರ ಗಂಟಲು ದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಇದನ್ನೂ ಓದಿರಿ video/ ಮರದ ಮೇಲೆ ಶವ ಇದೆಯೆಂದು ಬಂದ ಪೊಲೀಸರಿಗೆ ಕಾದಿತ್ತೊಂದು ಅಚ್ಚರಿ!

    ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿಯು ವೃದ್ಧನ ಶವವನ್ನು ಪ್ಲಾಸ್ಟಿಕ್​ ಚೀಲಗಳಿಂದ ಮೃತದೇಹವನ್ನು ಪ್ಯಾಕ್ ಮಾಡಿದರು. ಯಾವುದೇ ಅಂತಿಮ ವಿಧಿವಿಧಾನವಿಲ್ಲದೆ ಅಂತ್ಯಸಂಸ್ಕಾರ‌ ನೆರವೇರಿತು. ಸಂಬಂಧಿಕರು ಸ್ವಲ್ಪ ದೂರದಲ್ಲೇ ನಿಂತಿದ್ದರು. ಕೆಲವರು ಶವದ ಬಳಿಯೂ ಬಂದು ಹೋದರು.

    ಒಟ್ಟಿನಲ್ಲಿ ಕೋವಿಡ್​ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮೃತರ ಅಂತ್ಯಸಂಸ್ಕಾರದ ರೀತಿ-ನೀತಿಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಒಂದೇ ಗುಂಡಿಯಲ್ಲಿ 9 ಶವಗಳನ್ನು ಎಸೆದು ಮಣ್ಣು ಮಾಡಿದ್ದು, ಯಾದಗಿರಿಯಲ್ಲೂ ಶವವೊಂದನ್ನು ದರದರನೆ ಎಳೆತಂದು ಗುಂಡಿಗೆ ಬಿಸಾಕಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು.

    ಪ್ರಾಣಿಗಿಂತ ಕಡೆಯಾಗಿ ಕರೊನಾ ಸೋಂಕಿತರ ಶವಸಂಸ್ಕಾರ ನಡೆಯುತ್ತಿರುವುದನ್ನ ಕಂಡ ಜನತೆ ಆತಂಕಗೊಂಡಿದ್ದಾರೆ. ಈಗ ಇಂತಹದ್ದೇ ಸಾಲಿಗೆ ತಿಮ್ಮೇಗೌಡನ ಪಾಳ್ಯದ ವೃದ್ಧನ ಶವಸಂಸ್ಕಾರವೂ ಸೇರಿದೆ. ಚೀಲಗಳಿಂದ ಶವ ಮುಚ್ಚಿದ ಪರಿ ಕಂಡು ಕುಟುಂಬಸ್ಥರಾದಿಯಾಗಿ, ಸ್ಥಳೀಯರೂ ಮರುಕಪಟ್ಟಿದ್ದಾರೆ.

    ಚೀಲದಲ್ಲಿ ಶವ ಮುಚ್ಚಿದ್ರು!

    ಚೀಲದಲ್ಲಿ ಶವ ಮುಚ್ಚಿದ್ರು!ಇಲ್ನೋಡಿ ವೃದ್ಧನ ಶವವನ್ನು ಪ್ಲಾಸ್ಟಿಕ್​ ಚೀಲಗಳಿಂದ ಹೇಗೆ ಮುಚ್ಚುತ್ತಿದ್ದಾರೆಂದು. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ತಿಮ್ಮೇಗೌಡನ ಪಾಳ್ಯದಲ್ಲಿ ವೃದ್ಧರೊಬ್ಬರು ಕರೊನಾ ಸೋಂಕಿಗೆ ಬಲಿಯಾಗಿದ್ದು, ಶವವನ್ನು ಚೀಲಗಳಿಂದ ಮುಚ್ಚಿ ಅಂತ್ಯಸಂಸ್ಕಾರ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಇನ್ನೂ ಆ ಊರಿನ ಜನರು, ಮೃತನ ಕುಟುಂಬಸ್ಥರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಸಮೀಪದಲ್ಲೇ ಜಮಾಯಿಸಿದ್ದರು. #Funeral #Inhumanity #Dead #Corona

    Posted by Vijayavani on Thursday, July 2, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts