More

    ಜಿಲ್ಲೆ ಇಬ್ಬಾಗಿಸಿದರೆ ಸಿಂದಗಿಗೆ ಆದ್ಯತೆ ನೀಡಿ

    ಸಿಂದಗಿ: ಜಿಲ್ಲೆಯನ್ನು ಇಬ್ಭಾಗಿಸುವುದಾದರೆ ಸಿಂದಗಿ ತಾಲೂಕು ಜಿಲ್ಲೆ ಮಾಡಲು ಪ್ರಥಮ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಸಿಂದಗಿ ಜಿಲ್ಲಾ ಹೋರಾಟ ಸಮಿತಿಯಿಂದ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

    ಹೋರಾಟ ಸಮಿತಿಯ ಅಹವಾಲು ಸ್ವೀಕರಿಸಿದ ಸಚಿವ ಡಾ. ಎಂ.ಬಿ. ಪಾಟೀಲರು ಜಿಲ್ಲೆಯನ್ನು ಇಬ್ಭಾಗಿಸುವ ಇರಾದೆ ಸರ್ಕಾರದ ಮುಂದಿಲ್ಲ. ಸದ್ಯ ಲೋಕಸಭೆ ಚುನಾವಣೆ ಹತ್ತಿರದಲ್ಲಿಯೇ ಇರುವುದರಿಂದ ಈ ಬಗ್ಗೆ ಯಾವ ಪ್ರಸ್ತಾವನೆಗಳಿಗೂ ಆದ್ಯತೆ ಸಿಗದು. ಚುನಾವಣೆ ಮುಗಿದ ನಂತರದಲ್ಲಿ ನಿಮ್ಮ ಅಹವಾಲಿನ ಅನುಸಾರ ಜಿಲ್ಲೆಯನ್ನು ವಿಭಜಿಸುವುದಾದರೆ ಸಿಂದಗಿಯನ್ನು ಆದ್ಯತೆ ಮೇರೆಗೆ ಪರಿಗಣಿಸುವುದಾಗಿ ಭರವಸೆ ನೀಡಿದರು.

    ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ ಮಾತನಾಡಿ, ಜಿಲ್ಲೆಯನ್ನು ಮಾಡುವ ರಾಜಕೀಯ ನಮಗೆ ಬೇಡ. ಜಿಲ್ಲೆಯನ್ನು ಇಬ್ಭಾಗಿಸಲು ಸರ್ಕಾರ ಮುಂದಾದರೆ ಸಿಂದಗಿಗೆ ಜಿಲ್ಲೆಯಾಗುವ ಅರ್ಹತೆಗಳಿದ್ದು, ಪಕ್ಕದ ಮೂರ‌್ನಾಲ್ಕು ತಾಲೂಕುಗಳಿಗೆ ಕೇವಲ 20ರಿಂದ 40ಕಿಮೀ ಅಂತರದಲ್ಲಿರುವ ಸಿಂದಗಿಯನ್ನು ಜಿಲ್ಲೆ ಮಾಡುವುದು ಸೂಕ್ತವಾಗಿದೆ. ನಮ್ಮೆಲ್ಲರ ಒತ್ತಾಯ ಮತ್ತು ಕ್ಷೇತ್ರದ ಜನರ ಬೇಡಿಕೆಯಂತೆ ತಮಗೆ ಮನವಿ ಸಲ್ಲಿಸಿದ್ದು, ಮುಂದಿನ ಹಂತದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತಾವು ನೇತೃತ್ವ ವಹಿಸಬೇಕು ಎಂದು ಮನವಿ ಮಾಡಿದರು.

    ಅಶೋಕ ಅಲ್ಲಾಪೂರ, ಅಶೋಕ ವಾರದ, ಚಂದ್ರಶೇಖರ ನಾಗೂರ, ಯಶವಂತ್ರಾಯಗೌಡ ರೂಗಿ, ದಸ್ತಗೀರಸಾಬ ನದಾಫ, ಆನಂದ ಶಾಬಾದಿ, ಎಂ.ಎ. ಖತೀಬ, ಎಚ್.ಕೆ. ನದಾಫ್, ಶಾಂತಪ್ಪ ರಾಣಾಗೋಳ, ಸಾಯಬಣ್ಣ ದೇವರಮನಿ, ಸಂತೋಷ ಮಣಗಿರಿ, ಭೀಮಾಶಂಕರ ನೆಲ್ಲಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಸಾಯಬಣ್ಣ ದೇವರಮನಿ, ಮಹಾಂತೇಶ ನೂಲಾನವರ, ಮೋದಿನ್ ಜಮಾದಾರ, ಅಶೀಫ್ ಅಂದೇಲಿ, ಸಲಿಂ ನದಾಫ್, ಶೈಲಜಾ ಸ್ಥಾವರಮಠ, ಮಹಾದೇವಿ ಬಮ್ಮಣ್ಣಿ, ಮಹಾದೇವಿ ಹಿರೇಮಠ, ಸುನಂದ ಯಂಪೂರೆ, ಪ್ರತಿಭಾ ಚಳ್ಳಗಿ, ಶ್ರೀಧರ ಬಮ್ಮಣ್ಣಿ, ಬಸು ಕಾಂಬಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts