More

    ಅತಿಕ್ರಮಣದಾರರಿಗೆ ತೊಂದರೆ ಕೊಟ್ಟರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ-ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ

    ಹೊನ್ನಾವರ: ಕಾಂಗ್ರೆಸ್ ಸರ್ಕಾರವು ಬಡವರ ಮತ್ತು ರೈತರ ವಿರೋಧಿ ಸರ್ಕಾರವಾಗಿದೆ. ಅರಣ್ಯದಲ್ಲಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡವರಿಗೆ ತೊಂದರೆ ನೀಡಿದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.

    ತಾಲೂಕಿನ ಹೊಸಗೋಡದಲ್ಲಿ ರೈತರು ಬೆಳೆಸಿದ ಅಡಕೆ, ಬಾಳೆಗಿಡಗಳನ್ನು ಅರಣ್ಯಾಧಿಕಾರಿಗಳು ಕಡಿದು ಹಾನಿ ಮಾಡಿರುವ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 60 ಸಾವಿರದಷ್ಟು ಅತಿಕ್ರಮಣದಾರರಿದ್ದು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾರಿಗೂ ತೊಂದರೆ ನೀಡಿಲ್ಲ. ಇಂದಿನ ಸರ್ಕಾರ ಜನವಿರೋಧಿಯಾಗಿದ್ದು ಬಡವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

    ಶಾಸಕ ಸುನೀಲ್ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಹೊನ್ನಾವರ ಮಂಡಲದ ಅಧ್ಯಕ್ಷ ರಾಜೇಶ ಭಂಡಾರಿ, ಎನ್.ಎಸ್.ಹೆಗಡೆ, ಮಂಜುನಾಥ ನಾಯ್ಕ, ಎಂ.ಎಸ್.ಹೆಗಡೆ, ಸುರೇಶ ಹರಿಕಾಂತ, ಗ್ರಾ.ಪಂ.ಅಧ್ಯಕ್ಷೆ ಶ್ಯಾಮಲಾ ನಾಯ್ಕ, ಸದಸ್ಯರು ಉಪಸ್ಥಿತರಿದ್ದರು.

    ಇದನ್ನೂ ಓದಿ:ಕುಂದಾಪುರ ಕಮರ್ಷಿಯಲ್‌ ಟ್ಯಾಕ್ಸ್‌ ಸಹಾಯಕ ಆಯುಕ್ತರ ಬೇಲೆಕೇರಿ ಮನೆಯ ಮೇಲೆ ಲೋಕಾಯುಕ್ತ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts