More

    ಸನಾತನ ಧರ್ಮ ನಾಶವಾದರೆ ಪಂಜುರ್ಲಿ, ದೈವ, ಕಂಬಳ ಇರಲ್ಲ: ಸಿ.ಟಿ. ರವಿ

    ಬೆಂಗಳೂರು ಸನಾತನ ಧರ್ಮದಿಂದಲೇ ದೈವ, ನಾಗರಾಧನೆ, ಪಂಜುರ್ಲಿ, ಕಂಬಳದಂತಹ ಶ್ರೇಷ್ಠ ಸಂಸ್ಕೃತಿ ಬೆಳೆದು ಬಂದಿದೆ. ಆದರೆ, ಕೆಲವರು ಬಯಸುತ್ತಿರುವಂತೆ ಸನಾತನ ಧರ್ಮ ನಾಶವಾದರೆ, ದೈವ, ನಾಗರಾಧನೆ, ಪಂಜುರ್ಲಿ ಇರುವುದಿಲ್ಲ. ಹೀಗೆ ನಾಶ ಪಡಿಸಲು ಜನರು ಬಿಡುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

    ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನಗಳ ಬೆಂಗಳೂರು ಕಂಬಳದ ಭಾನುವಾರದ ಸಂಜೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ತುಳುನಾಡಿನ ಸಂಸ್ಕೃತಿ ಅಂತ್ಯಂತ ಶ್ರೀಮಂತ ಸಂಸ್ಕೃತಿಯಲ್ಲಿ ಒಂದಾಗಿದೆ. ಸನಾತನ ಸಂಸ್ಕೃತಿಯು ಇಂತಹ ಸಾವಿರಾರು ಉನ್ನತ ಸಂಸ್ಕೃತಿಗೆ ಕಾರಣವಾಗಿದೆ. ಸನಾತನ ಧರ್ಮವು ಸಾವಿರಾರು ಭಾಷೆ, ವೈವಿಧ್ಯಮಯ ಸಂಸ್ಕೃತಿ ಬೆಳೆಯಲು ಕಾರಣವಾಗಿದೆ ಎಂದರು.

    ಕಂಬಳ, ಜಲ್ಲಿಕಟ್ಟು, ಜೋಡೆತ್ತಿನ ಬಂಡಿ ಓಟ ಮಣ್ಣಿನ ಮಕ್ಕಳ ಆಚರಣೆಯಾಗಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿ ಪಿತೂರಿಯಿಂದ ನಮ್ಮ ಕರುಳಬಳ್ಳಿಯ ಸಂಸ್ಕೃತಿಯನ್ನು ನಾಶ ಪಡಿಸಲು ಪ್ರಯತ್ನ ಮಾಡಿದರು. ಆದರೆ, ನಾಶ ಪಡಿಸಲು ಹೊರಟವರೇ ನಾಶವಾದರು. ಕಂಬಳ ತುಳುನಾಡಿನಿಂದ ಬೆಂಗಳೂರಿಗೆ ಬಂತು ಎಂದರು.

    ಚಲನಚಿತ್ರ ಮಾಧ್ಯಮ ಮೂಲಕ ಈ ಹಿಂದೆ ನಕಾರಾತ್ಮಕ ಸಂದೇಶ ನೀಡಲಾಗುತ್ತಿತ್ತು.ಆದರೆ, ಈಗ ಕಾಲ ಬದಲಾಗಿದೆ. ಸಕಾರಾತ್ಮಕ ಸಂದೇಶ ನೀಡಲಾಗುತ್ತಿದೆ. ರಿಷಭ್ ಶೆಟ್ಟಿ ಕಂಬಳವನ್ನು ಜಗತ್ತಿಗೆ ಪರಿಚಯಿಸಿದ ಕೆಲಸ ಮಾಡಿದರು. ಇದನ್ನು ಪ್ರಧಾನಮಂತ್ರಿಯಾಗಿ ಎಲ್ಲರೂ ಅಭಿನಂದಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts