More

    ಒಂದು ವೇಳೆ ಪಾಕ್​ ಟಿ20 ವಿಶ್ವಕಪ್​​ ಗೆದ್ದರೆ… ಬಾಬರ್​ ಅಜಾಮ್​ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಗವಾಸ್ಕರ್​

    ಸಿಡ್ನಿ: ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಭಾನುವಾರ (ನ.13) ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022)​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಬಾಬರ್​ ಅಜಾಮ್ (Babar Azam)​ ನೇತೃತ್ವದ ಪಾಕಿಸ್ತಾನ ತಂಡ ಕ್ರಿಕೆಟ್​ ಜನಕ ಇಂಗ್ಲೆಂಡ್ (England)​ ತಂಡವನ್ನು ಎದುರಿಸಲಿದೆ. ಪ್ರಸ್ತುತ ಟೂರ್ನಿಗೂ ಮತ್ತು ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದಲ್ಲಿ ಗೆಲುವು ಸಾಧಿಸಿದ 1992ರಲ್ಲಿ ಏಕದಿನ ವಿಶ್ವಕಪ್​ ಟೂರ್ನಿಗೂ ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಮೀಮ್ಸ್​ ಮತ್ತು ಜೋಕ್ಸ್​ಗಳು ಹರಿದಾಡುತ್ತಿವೆ. ಇದರ ನಡುವೆ ಟೀಮ್​ ಇಂಡಿಯಾ ಮಾಜಿ ನಾಯಕ ಸುನಿಲ್​ ಗವಾಸ್ಕರ್​ (Sunil Gavaskar) ಮಾಡಿರುವ ಕಾಮೆಂಟ್​ ಎಲ್ಲರ ಹುಬ್ಬೇರಿಸಿದೆ.

    ಇಂಗ್ಲೆಂಡ್​ ಮತ್ತು ಭಾರತ ನಡುವಿನ ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಅಡಿಲೇಡ್​ ಓವಲ್​ ಮೈದಾನದಲ್ಲಿ ಗವಾಸ್ಕರ್​ ಮಾತನಾಡಿ, ಒಂದು ವೇಳೆ ಈ ವಿಶ್ವಕಪ್​ ಟೂರ್ನಿಯನ್ನು ಗೆದ್ದರೆ, ಬಾಬರ್​ ಅಜಾಮ್​ ಅವರು 2048ರಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಗವಾಸ್ಕರ್​ ಅವರ ಈ ಮಾತನ್ನು ಕೇಳಿದ ಮೈಕೆಲ್ ಅಥರ್ಟನ್ ಮತ್ತು ಶೇನ್ ವ್ಯಾಟ್ಸನ್ ಒಂದು ಕ್ಷಣ ಹುಬ್ಬೇರಿಸಿದರು.

    ಸದ್ಯದ ಟೂರ್ನಿಗೂ 1992 ವಿಶ್ವಕಪ್​ ಟೂರ್ನಿಗೂ ಹೋಲಿಕೆ ಮಾಡಲು ಕಾರಣವೇನೆಂದರೆ, ಒಂದಕ್ಕೊಂದು ಒಂದು ಸಾಮ್ಯತೆ ಇದೆ. 1992ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಇಮ್ರಾನ್​ ಖಾನ್ (Imran Khan)​ ನೇತೃತ್ವದ ಪಾಕ್​ ತಂಡ ವಿಶ್ವಕಪ್​ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಕಾಕತಾಳೀಯ ಏನೆಂದರೆ, ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಫೈನಲ್​ನಲ್ಲಿ ಪಾಕ್ ಎದುರಾಳಿಯಾಗಿರುವು ಅದೇ ಇಂಗ್ಲೆಂಡ್​ ತಂಡ. ಆದರೆ, ಆಟಗಾರರು ಬೇರೆ ಬೇರೆ ಮತ್ತು ಆಟದ ಮಾದರಿ ಕೂಡ ಬೇರೆ.

    ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಬಾಬರ್​ ಅಜಾಮ್​ ಅವರನ್ನು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅಜಾಮ್​, ಖಂಡಿತವಾಗಿಯೂ ಸಾಮ್ಯತೆಗಳಿವೆ. ನಾವು ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತೇವೆ. ಈ ತಂಡವನ್ನು ಮತ್ತು ವಿಶೇಷವಾಗಿ ಈ ದೊಡ್ಡ ಮೈದಾನದಲ್ಲಿ ಮುನ್ನಡೆಸುವುದು ನನಗೆ ದೊರೆತ ದೊಡ್ಡ ಗೌರವವಾಗಿದೆ. ನಾವು ನಮ್ಮ ಶೇ. 100 ರಷ್ಟು ಶ್ರಮವಹಿಸಿ ಗೆಲ್ಲಲು ಪ್ರಯತ್ನಿಸುತ್ತೇವೆ. ನಮ್ಮ ಆರಂಭ ಉತ್ತಮವಾಗಿರಲಿಲ್ಲ. ಆದರೆ, ತಂಡವು ಹುಲಿಗಳಂತೆ ಪುಟಿದೇಳಿದ ರೀತಿ ಮಾತ್ರ ಅದ್ಭುತವಾಗಿದೆ. ನಾವು ಇಲ್ಲಿಂದ ಮುನ್ನುಗ್ಗಲು ಎದುರು ನೋಡುತ್ತೇವೆ ಮತ್ತು ಅತ್ಯುತ್ತಮವಾದದ್ದನ್ನು ನೀಡಲು ಬಯಸುತ್ತೇವೆ ಎಂದು ಹೇಳಿದರು. (ಏಜೆನ್ಸೀಸ್​)

    ಚಂದ್ರುಗೂ, ವಿನಯ್ ಗುರೂಜಿಗೂ ಏನ್ರೀ ಸಂಬಂಧ?: ಭಕ್ತರ ಪ್ರಶ್ನೆ, ಪ್ರತಿಭಟನೆಗೆ ನಿರ್ಧಾರ

    ಶೋಯಿಬ್​​ ಮೊದಲ ಪತ್ನಿಯು ಸಹ ಭಾರತೀಯಳೇ! ಆಯೇಶಾ ಬಳಿಕ ಇದೀಗ ಸಾನಿಯಾ ಸರದಿ

    ಯೂಟ್ಯೂಬ್​ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್​ ಮಾಡಿ ಕುಡಿದ ವ್ಯಕ್ತಿ ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts