More

    ಯಾರೂ ಮುಂದೆ ಬಾರದಿದ್ದೆ ನಾನೇ ಸಕ್ಕರೆ ಕಾರ್ಖಾನೆ ಸ್ಥಾಪಿಸುವೆ

    ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಆನಂದ ಸಿಂಗ್ ಹೇಳಿಕೆ

    ಹೊಸಪೇಟೆ: ಹಂಪಿ ಶುಗರ್ಸ್ ಸ್ಥಾಪನೆ ಸಫಲವಾಗದಿದ್ದರೆ, ಸ್ಥಳೀಯ ಉದ್ಯಮಿಗಳಾರೂ ಸಕ್ಕರೆ ಕಾಖಾನೆಗೆ ಮುಂದಾಗದಿದ್ದರೆ, ಈ ಭಾಗದ ರೈತರ ಹಿತಕ್ಕಾಗಿ ನಾನೇ ಭುವನೇಶ್ವರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಮಾಜಿ ಸಚಿವ ಆನಂದ ಸಿಂಗ್ ಹೇಳಿದರು.

    ತಾಲೂಕಿನ ಕಮಲಾಪುರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಈ ಭಾಗದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಬೇಕು ಎಂಬುದು ರೈತರ ಬಹುದಿನಗಳ ಬೇಡಿಕೆಯಾಗಿದೆ. ಅದಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಂಬುನಾಥ ಹಳ್ಳಿಯಲ್ಲಿ ಹಂಪಿ ಶುರ‍್ಸ್ಗೆ ೮೪.೮೬ ಎಕರೆ ಜಮೀನು ಮಂಜೂರು ಮಾಡಿಸಲಾಗಿದೆ. ಆದರೆ, ಜಂಬುನಾಥಹಳ್ಳಿಯ ಜಾಗೆ ನೀಡುವುದನ್ನು ವಿರೋಧಿಸಿ ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆ ಜಾಗವನ್ನು ಬಡವರ ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈಗಾಗಲೇ ಮುಚ್ಚಿರುವ ಐಎಸ್‌ಆರ್ ಕಾರ್ಖಾನೆ ಪುನಾರಂಭಿಸುವುದು, ಸ್ಥಳೀಯ ಉದ್ಯಮಿಗಳ ಮೂಲಕ ಕಾರ್ಖಾನೆ ಸ್ಥಾಪನೆಗೆ ಪ್ರಯತ್ನಿಸುತ್ತೇನೆ. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂಬ ಹೇಳಿಕೆಯಲ್ಲೇ ಶಾಸಕರು ದಿನ ದೂಡುತ್ತಿದ್ದಾರೆ. ಈ ವರೆಗೆ ಎಷ್ಟು ಜನ ಸ್ಥಳೀಯ ಉದ್ಯಮಿಗಳನ್ನು ಸಂಪರ್ಕಿಸಿದ್ದಾರೆ ಎಂದು ಪ್ರಶ್ನಿಸಿದರು.

    ಹಂಪಿ ಶುರ‍್ಸ್ನಲ್ಲಿ ನಾನು ಪಾಲುದಾರನಲ್ಲ:
    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಶಕಗಳ ಹಿಂದೆಯೇ ರೋಟಿ, ಕಪಡಾ ಔರ್ ಮಖಾನ್ ಎಂಬ ಘೋಷ ವಾಕ್ಯವನ್ನು ಶಾಸಕ ಎಚ್.ಆರ್.ಗವಿಯಪ್ಪ ನೆನಪಿಸಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಯಿಂದ ಹೊಸಪೇಟೆ ಜನರ ಹೊಟ್ಟೆ ತುಂಬಿಸಿ, ನಂತರ ಮನೆ ಒದಗಿಸುವುದು ಸೂಕ್ತ. ಅದಕ್ಕಾಗಿ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಅನೇಕ ಉದ್ಯಮಿಗಳನ್ನು ಆಹ್ವಾನಿಸಿದೆ. ಅರ‍್ಯಾರೂ ಮನಸ್ಸು ಮಾಡಲಿಲ್ಲ. ಕೊನೆಗೆ ಗ್ರುಪ್ ಆಫ್ ಜಿ.ಎಂ.ಸಿದ್ದೇಶ್ವರ ಮುಂದೆ ಬಂದರು. ಆದರೆ, ಹಂಪಿ ಶುರ‍್ಸ್ನಲ್ಲಿ ನನ್ನ ಪಾಲುದಾರಿಕೆ ಇದೆ ಎಂಬ ಆರೋಪ ನಿರಾಧಾರ ಎಂದು ಸ್ಪಷ್ಟಪಡಿಸಿದರು.

    ಕಾರ್ಖಾನೆಗೆ ಕನಿಷ್ಠ ೧೨೦ ಎಕರೆ ಬೇಕು:
    ಶಾಸಕ ಎಚ್.ಆರ್.ಗವಿಯಪ್ಪ ವಾಗ್ದಾನ ಮಾಡಿರುವಂತೆ ಸರ್ಕಾರ, ಸಹಕಾರ ರಂಗ ಅಥವಾ ಸ್ಥಳೀಯ ಉದ್ಯಮಿಗಳು ಮೂಲಕ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೂ ಸ್ವಾಗತಾರ್ಹ. ಶಾಸಕರ ಎಲ್ಲ ಪ್ರಯತ್ನಗಳು ಮೀರದ ಬಳಿಕ ಸ್ಥಳೀಯರ ಆದ್ಯತೆಯಲ್ಲಿ ನಾನು ಕಾರ್ಖಾನೆ ಸ್ಥಾಪಿಸಲು ಸಿದ್ಧ. ನಾನು ಕೂಡಾ ಉದ್ಯಮಿ. ವಿವಿಧ ರಾಜ್ಯಗಳಲ್ಲಿ ಉದ್ಯಮಗಳಿವೆ. ವಿಜಯನಗರ ಕ್ಷೇತ್ರದ ಯಾವುದೇ ಮೂಲೆಯಲ್ಲಿ ಕನಿಷ್ಠ ೧೨೦ ಎಕರೆ ಒದಗಿಸಿದರೂ, ತಾಯಿ ಭುವನೇಶ್ವರಿ ಹೆಸರಲ್ಲಿ ಶುಗರ್ ಫ್ಯಾಕ್ಟರಿ ಆರಂಭಿಸಲು ಸಿದ್ಧನಿದ್ದೇನೆ. ಈಗಿರುವ ಭೂಮಿಯ ಮಾರುಕಟ್ಟೆ ಮೌಲ್ಯದಲ್ಲಿ ಖರೀದಿಸುವಷ್ಟು ಶಕ್ತಿ ನನ್ನಲ್ಲಿಲ್ಲ. ಒಂದೊಮ್ಮೆ ೭೦-೮೦ ಎಕರೆಯಲ್ಲಿ ಸಕ್ಕರೆ ಕಾರ್ಖಾನೆ ನಿರ್ವಹಿಸುವ ತಂತ್ರಜ್ಞಾನವಿದ್ದರೆ, ಅದನ್ನು ನಿರೂಪಿಸಲಿ ಎಂದು ಸವಾಲು ಹಾಕಿದರು.
    ಹಂಪಿ ಶುರ‍್ಸ್ಗೆ ನೀಡಿರುವ ಭೂಮಿ ಪಕ್ಕದಲ್ಲೇ ಆರ್‌ಬಿಎಸ್‌ಎನ್ ಗಣಿ ಕಂಪನಿಯ ೮೦ ಎಕರೆ ಗುತ್ತಿಗೆ ಮುಂದಿನ ವರ್ಷ ಪೂರ್ಣಗೊಳ್ಳುತ್ತದೆ. ಅದಕ್ಕೆ ಹೊಂದಿಕೊಂಡು ೩೦ ಎಕರೆ ಕಂದಾಯ ಜಮೀನಿದ್ದು, ಒಟ್ಟಾರೆ ೧೯೦ ಲಭ್ಯವಾಗುತ್ತದೆ. ಈ ದೂರ ದೃಷ್ಟಿಯೊಂದಿಗೆ ಹಂಪಿ ಶುರ‍್ಸ್ಗೆ ಮಂಜೂರಾತಿ ದೊರಕಿಸಲಾಗಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts