More

    IPL ಆರಂಭಕ್ಕೂ ಅಂಬಾಟಿ ರಾಯಡು ಮಹತ್ವದ ಹೇಳಿಕೆ..! ಸಿಎಸ್​ಕೆಗೆ ರೋಹಿತ್ ಶರ್ಮ ಕ್ಯಾಪ್ಟನಾ?

    ನವದೆಹಲಿ: 2024ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ 17 ನೇ ಆವೃತ್ತಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಸಿಎಸಕ್​ ಹಾಗೂ ಆರ್​ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಸಿಎಸ್​ಕೆಯ ತವರು ನೆಲ ತಮಿಳುನಾಡಿನ ಎಂ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ.

    ಇದನ್ನೂ ಓದಿ: ನನ್ನ ತಂದೆ ನಿರ್ದೇಶನದಲ್ಲಿ ನಟಿಸಲು ಇಷ್ಟವಿಲ್ಲ: ಶಾಕಿಂಗ್​ ಹೇಳಿಕೆ ನೀಡಿದ ಖ್ಯಾತ ಡೈರೆಕ್ಟರ್​ ಮಗ! ಕಾರಣ ಹೀಗಿದೆ..

    ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈಸೂಪರ್ ಕಿಂಗ್ಸ್​ ಎರಡು ತಂಡದಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದ ಅನುಭವಿ ಆಟಗಾರ ಅಂಬಾಟಿ ರಾಯುಡು ಟೀಂ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕುರಿತು ಗುಣಗಾನ ಮಾಡಿದ್ದಾರೆ. 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಕೆಲವು ದಿನಗಳಿರುವಾಗ ಸಿಎಸ್‌ಕೆ ಕ್ಯಾಪ್ಟನ್ಸಿಯ ನಾಯಕತ್ವದ ಕುರಿತು ಕೆಲವು ಮಹತ್ವ ವಿಷಯಗಳನ್ನು ನ್ಯೂಸ್​ 24ರೊಂದಿಗೆ ಹಂಚಿಕೊಂಡಿದ್ದಾರೆ.

    ಮುಂಬೈ ಇಂಡಿಯನ್ಸ್‌ ತಂಡ 2024ರ ಐಪಿಎಲ್‌ಗೆ ಅನುಭವಿ ರೋಹಿತ್‌ ಶರ್ಮ ಬದಲು, ಇತ್ತೀಚೆಗೆ ಗುಜರಾತ್‌ ಟೈಟಾನ್ಸ್‌ ತಂಡದಿಂದ ಮುಂಬೈ ತಂಡ ಕೂಡಿಕೊಂಡಿರುವ ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ ಅವರನ್ನು 2024ರ ಐಪಿಎಲ್‌ಗೆ ನಾಯಕನನ್ನಾಗಿ ಘೋಷಣೆ ಮಾಡಿತ್ತು.

    ipl

    ಹಾರ್ದಿಕ್​ಗೆ ಮುಂಬೈ ಇಂಡಿಯನ್ಸ್​ ತಂಡವನ್ನು ಮುನ್ನೆಡೆಸುವುದು ಕಷ್ಟ

    ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ವಿಭಿನ್ನವಾಗಿರುವ ಕಾರಣ ಹಾರ್ದಿಕ್​ ಮುಂಬೈ ಇಂಡಿಯನ್ಸ್ ತಂಡ ಮುನ್ನಡೆಸುವುದು ಕಷ್ಟ. ಪಾಂಡ್ಯ ಮುಂಬೈ ಇಂಡಿಯನ್ಸ್‌ಗಾಗಿ ಒಂದು ವರ್ಷ ಆಡಬೇಕಿತ್ತು ಮತ್ತು ರೋಹಿತ್ ಇನ್ನೂ ಭಾರತದ ನಾಯಕನಾಗಿರುವುದರಿಂದ ನಾಯಕತ್ವವನ್ನು ರೋಹಿತ್ ಅವರಿಗೆ ವಹಿಸಬೇಕಿತ್ತು ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.

    ರೋಹಿತ್​​ರನ್ನು ಸಿಎಸ್​ಕೆ​ ಜರ್ಸಿಯಲ್ಲಿ ನೋಡುವ ಆಸೆ 

    ಅನುಭವಿ ಆಟಗಾರ ರೋಹಿತ್‌ ಶರ್ಮ ಅವರನ್ನು ಚನ್ನೈ ಸೂಪರ್ ಕಿಂಗ್ಸ್​ ತಂಡದ ಜರ್ಸಿಯಲ್ಲಿ ನೋಡುವ ಆಸೆಯನ್ನು ಅಂಬಾಟಿ ರಾಯುಡು ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಮುಂದಿನ 5-6 ವರ್ಷಗಳವರೆಗೆ ಐಪಿಎಲ್ ಆಡಬಹುದು. ಅವರು ನಾಯಕನಾಗಲು ಬಯಸಿದರೆ, ಇಡೀ ಜಗತ್ತು ಅವರಿಗೆ ಮುಕ್ತವಾಗಿ ಅವಕಾಶ ನೀಡಲಿದೆ. ಅವರು ಎಲ್ಲಿ ಬೇಕಾದರೂ ಸುಲಭವಾಗಿ ನಾಯಕರಾಗಬಹುದು ಎಂದು ಗುಣಗಾನ ಮಾಡಿದ್ದಾರೆ.ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2025 ರಲ್ಲಿ ಚನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ. ಸಿಎಸ್​ಕೆ ತಂಡದ ನಾಯಕ ಎಂಎಸ್ ಧೋನಿ ನಿವೃತ್ತಿಯಾದರೆ ರೋಹಿತ್ ಸಿಎಸ್​ಕೆ ತಂಡವನ್ನು ಮುನ್ನಡೆಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    csk

    ರೋಹಿತ್ ಶರ್ಮಾ 243 ಪಂದ್ಯಗಳಿಂದ 6211 ರನ್ ಗಳಿಸಿರುವ ಐಪಿಎಲ್‌ನಲ್ಲಿ ಸಾರ್ವಕಾಲಿಕ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
    ಮುಂದಿನ ಐಪಿಎಲ್‌ನಲ್ಲಿ ಅನುಭವಿ ರೋಹಿತ್‌ ಶರ್ಮ ಬದಲು, ಇತ್ತೀಚೆಗೆ ಗುಜರಾತ್‌ ಟೈಟಾನ್ಸ್‌ ತಂಡದಿಂದ ಮುಂಬೈ ತಂಡ ಕೂಡಿಕೊಂಡಿರುವ ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ ಅವರನ್ನು 2024ರ ಐಪಿಎಲ್‌ಗೆ ನಾಯಕನನ್ನಾಗಿ ಘೋಷಣೆ ಮಾಡಿದೆ.

    ರೋಹಿತ್‌ ಶರ್ಮ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐದು ಬಾರಿ ಐಪಿಎಲ್‌ ಪ್ರಶಸ್ತಿ ಗೆದ್ದಿತ್ತು. 2013ರ ಐಪಿಎಲ್‌ನ ನಡುವೆಯೇ ರೋಹಿತ್‌ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ನಾಯಕರನ್ನಾಗಿ ಘೋಷಣೆ ಮಾಡಿತ್ತು.2013ರ ಋತುವಿನ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್ ಪರವಾಗಿ 92 ಪಂದ್ಯವಾಡಿದ್ದರು.

    ಆ ಬಳಿಕ ಅವರು ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ವರ್ಗಾವಣೆಯಾಗಿದ್ದರು. 2022 ಹಾಗೂ 2023ರಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಅವರು ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ತಂಡ ಎರಡೂ ಭಾರಿಯೂ ಫೈನಲ್‌ನಲ್ಲಿ ಅಡಿತ್ತು. 2022ರಲ್ಲಿ ಪಾದಾರ್ಪಣೆ ಮಾಡಿದ್ದ ಋತುವಿನಲ್ಲಿಯೇ ತಂಡ ಚಾಂಪಿಯನ್ ಆಗಿತ್ತು.

    ಬೆಂಗಳೂರಲ್ಲಿ ಜಲಕ್ಷಾಮ: ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts