More

    ನೀರವ್​-ಲಲಿತ್​ರನ್ನು ಟೀಕಿಸಿದರೆ ಬಿಜೆಪಿಗೆ ಯಾಕೆ ನೋವಾಗಿದೆ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಸಂಸತ್​ ಸ್ಥಾನದಿಂದ ಅನರ್ಹ ಮಾಡಿರುವುದನ್ನು ಖಂಡಿಸಿ ಎಐಸಿಸಿ ಇಂದು ದೇಶಾದ್ಯಂತ ಸಂಕಲ್ಪ ಸತ್ಯಾಗ್ರಹವನ್ನ ಹಮ್ಮಿಕೊಂಡಿದೆ.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲಲಿತ್​-ನೀರವ್​ರನ್ನು ಟೀಕಿಸಿದರೆ ಬಿಜೆಪಿಗೆ ಯಾಕಿಷ್ಟು ನೋವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

    ದೇಶಾದ್ಯಂತ ಮುಂದಿನ ದಿನಗಳಲ್ಲಿ ಇಂತಹ ಸತ್ಯಾಗ್ರಹಗಳು ತುಂಬಾ ನಡೆಯಲಿವೆ. ಸಂವಿಧಾನ, ಪ್ರಜಾಪ್ರಭುತ್ವ, ವಾಕ್​ ಸ್ವಾತಂತ್ರ್ಯವನ್ನು ಉಳಿಸಲು ನಾವು ಯಾವ ತರಹದ ತ್ಯಾಗಕ್ಕೂ ಸಿದ್ದರಿದ್ದೇವೆ. ಲಲಿತ್​, ನೀರವ್​ ಮೋದಿ, ಮೆಹುಲ್​ ಚೋಕ್ಸಿ ಹಿಂದುಳಿದ ವರ್ಗಗಳಿಗೆ(OBC)ಗೆ ಸೇರಿದವರ ಜನರ ದುಡ್ಡನ್ನುಲೂಟಿ ಮಾಡಿದವರ ಬಗ್ಗೆ ಮಾತನಾಡಿದರೆ ನಿಮಗೆ ಯಾಕಿಷ್ಟು ನೋವಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ಧಾರೆ.

    ನೀರವ್​-ಲಲಿತ್​ರನ್ನು ಟೀಕಿಸಿದರೆ ಬಿಜೆಪಿಗೆ ಯಾಕೆ ನೋವಾಗಿದೆ: ಮಲ್ಲಿಕಾರ್ಜುನ ಖರ್ಗೆ

    ಇದನ್ನೂ ಓದಿ: ಬೀದರ್​ನ ಗೋರ್ಟಾದಲ್ಲಿ ಹುತಾತ್ಮರ ಸ್ಮಾರಕ ಲೋಕಾರ್ಪಣೆಗೊಳಿಸಿದ ಅಮಿತ್ ಷಾ

    ರಾಹುಲ್​ ಗಾಂಧಿ ದೇಶದ ಜ್ವಲಂತ ಸಮಸ್ಯೆಗಳ ವಿರುದ್ದ ಹೋರಾಡುತ್ತಿದ್ದಾರೆ ನಿಮ್ಮ ಸರ್ಕಾರದ ಹಗರಣಗಳ ಬಗ್ಗೆ ಪ್ರಶ್ನಿಸಿದವರನ್ನ ನೀವು ಶಿಕ್ಷಿಸುತ್ತೀರಾ. ಆದರೆ, ಜನರ ದುಡ್ಡನ್ನ ಲೂಟಿ ಮಾಡಿದವರನ್ನು ವಿದೇಶಕ್ಕೆ ಕಳುಹಿಸುತ್ತೀರಿ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ಧಾರೆ.

    ಬಿಜೆಪಿಯವರು ನಾವು ದುರ್ಬಲರಾಗಿದ್ಧೇವೆ ಎಂದು ಅಂದುಕೊಂಡಿದ್ಧಾರೆ ದುರಹಂಕಾರದಿಂದ ನಮ್ಮನ್ನು ತುಳಿಯಲು ಪ್ರಯತ್ನಿಸಿದರೆ ಮುಂದಿನ ದಿನಗಳಲ್ಲಿ ನಾವು ತಕ್ಕ ಉತ್ತರವನ್ನ ನೀಡುತ್ತೇವೆ ಎಂದು ಹೇಳಿದ್ದಾರೆ.

    ಸಂಸತ್ತಿನಲ್ಲಿ ಅದಾನಿ ಸಮೂಹ ಸಂಸ್ಥೆಗಳು ನಡೆಸಿರುವ ಹಗರಣದ ಬಗ್ಗೆ ಎಲ್ಲಿ ರಾಹುಲ್​ ಗಾಂಧಿ ಪ್ರಶ್ನೆ ಕೇಳುತ್ತಾರೋ ಎಂಬ ಭಯದಿಂದ ನೀವು(BJP) ಅವರ(Rahul Gandhi) ವಿರುದ್ದ ಪ್ರಕರಣಗಳನ್ನ ದಾಖಲಿಸುತ್ತಿದ್ದೀರಾ. ಭಾರತ್​ ಜೋಡೋ ಯಾತ್ರೆಯ ಯಶಸ್ಸನ್ನ ಸಹಿಸಲಾರದೆ ನೀವುಗಳು ಈ ರೀತಿ ದ್ವೇಷ ರಾಜಕಾರಣ ಮಾಡುತ್ತಿದ್ದೀರಾ ಎಂದು ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts