More

    ‘ನಾಡು ಉಳಿಯಬೇಕಾದರೆ ನಟ ಪುನೀತ್ ರಾಜ್​ಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಲಿ’

    ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್​ಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ ಹೇಳಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿನ ಮೂರು ಪಕ್ಷಗಳು (ಬಿಜೆಪಿ-ಕಾಂಗ್ರೆಸ್-ಜೆಡಿಎಸ್) ಕನ್ನಡಿಗರ ಪರವಾಗಿಲ್ಲ. ನಾಡು ಉಳಿಯಬೇಕಾದರೆ ರಾಜ್​ಕುಮಾರ್ ಪುತ್ರ ಪುನೀತ್ ರಾಜ್​ಕುಮಾರ್ ಸಿಎಂ ಆಗಬೇಕು. ಕನ್ನಡಪರ ಹೋರಾಟಗಾರರಿಂದ ಪುನೀತ್ ಅವರಿಗೆ ಮನವಿ‌ ಮಾಡುತ್ತೇವೆ ಎಂದರು.

    ಇದನ್ನೂ ಓದಿ: VIDEO| ಯುವಕರ ಹುಚ್ಚಾಟಕ್ಕೆ ಸಾವು ಬದುಕಿನ ನಡುವೆ ಬೈಕ್​ ಸವಾರನ ಹೋರಾಟ: ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ!

    'ನಾಡು ಉಳಿಯಬೇಕಾದರೆ ನಟ ಪುನೀತ್ ರಾಜ್​ಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಲಿ'
    ಕನ್ನಡ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ

    ಪೊಲೀಸ್ ಠಾಣೆಯಿಂದ ಬಿಡುಗಡೆಯಾದ ನಂತರ ಅಗಲಗುರ್ಕಿ ಚಲಪತಿ ಮಾತನಾಡಿದರು. ಬೆಳಗ್ಗೆ ಚಲಪತಿರನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದತಿಗೆ ಆಗ್ರಹಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕತ್ತೆ-ಕುರಿಗಳ ಜತೆ ವಿಧಾನಸೌಧ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ಪ್ರತಿಭಟನೆ ನಡೆಸದಂತೆ ಬೆಳಗ್ಗೆ ಪೊಲೀಸರು ಬಂಧಿಸಿದ್ದರು.

    ಇದನ್ನೂ ಓದಿ: ಮಗನ ನಿಶ್ಚಿತಾರ್ಥ ಮುಗಿಸಿ ಹೊಸ ಕಾರು ಖರೀದಿಸಿ ಖುಷಿಯಿಂದಲೇ ಮನೆಗೆ ಹೊರಟವರು ಸೇರಿದ್ದು ಮಸಣಕ್ಕೆ!

    ಬಂಧನದಿಂದ ಬಿಡುಗಡೆಯಾಗಿ ಸಿಎಂ ಯಡಿಯೂರಪ್ಪ, ಬಸವನಗೌಡ ಯತ್ನಾಳ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿರುದ್ದ ಆಕ್ರೋಶ ಹೊರಹಾಕಿದರು. (ದಿಗ್ವಿಜಯ ನ್ಯೂಸ್​)

    ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗುತ್ತಾ? ಸರ್ಕಾರ ಏನು ಹೇಳುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts