More

    ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗುತ್ತಾ? ಸರ್ಕಾರ ಏನು ಹೇಳುತ್ತೆ?

    ಬೆಂಗಳೂರು: ಜನವರಿ-ಫೆಬ್ರವರಿ ಮಧ್ಯೆ ಸೋಂಕು ಮಾರಿಯ 2ನೇ ಅಲೆ ಬರಬಹುದು. ಈ ವೇಳೆ ವಿಪರೀತ ಚಳಿಯಿರುವ ಕಾರಣ ವೇಗವಾಗಿ ಹರಡುವ ಸಾಧ್ಯತೆ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಅಲ್ಲದೆ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಕರೊನಾ ಸೋಂಕಿನ ಉಪಟಳ ಮರುಕಳಿಸಿದೆ. ಹೀಗಾಗಿ ತಜ್ಞರ ಮುನ್ಸೂಚನೆ ಪ್ರಕಾರ ಕರ್ಫ್ಯೂನಂತಹ ಬಿಗಿ ಕ್ರಮಗಳು ರಾಜ್ಯದಲ್ಲಿ ಜಾರಿಗೆ ಬರಲಿವೆ ಎಂದು ಕಳೆದ 2-3 ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಸರ್ಕಾರ ಮಂಗಳ ಹಾಡಿದೆ.

    ಕರೊನಾ ಕಟ್ಟಿ ಹಾಕುವುದಕ್ಕೆ ಕರ್ಫ್ಯೂ ಹೊರತಾಗಿ ಕಠಿಣ ಕ್ರಮಗಳಿಗೆ ಲಭ್ಯ ಬೇರೆ ಅವಕಾಶಗಳತ್ತ ಗಮನಹರಿಸಿ, ಪರ್ಯಾಯ ಕಟ್ಟುನಿಟ್ಟಿನ ಕ್ರಮಗಳಿಗೆ ಒತ್ತು ನೀಡಲು ಸರ್ಕಾರ ನಿರ್ಧರಿಸಿದೆ. ಕರೊನಾ ಸೋಂಕು ನಿಯಂತ್ರಿಸುವುದಕ್ಕಾಗಿ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿ, ಈ ಬಗೆಗಿನ ಗೊಂದಲಗಳಿಗೆ ತೆರೆ ಎಳೆದಿದೆ.

    ಲಾಕ್ ಡೌನ್ ಜತೆಗೆ ವಿವಿಧ ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕ ಉದ್ಯಮ-ವ್ಯವಹಾರಗಳ ಚಟುವಟಿಕೆಗಳು ಕ್ರಮೇಣ ಸುಧಾರಣೆಯತ್ತ ಮುಖ ಮಾಡಿವೆ. ಕರೊನಾಘಾತದಿಂದ ವೇಗವಾಗಿ ಅಲ್ಲದಿದ್ದರೂ ನಿರೀಕ್ಷೆಯಂತೆ ಚೇತರಿಸಿಕೊಳ್ಳುತ್ತಿದೆ. ಕೈಗಾರಿಕೆ, ನಿರ್ಮಾಣ, ತಯಾರಿಕೆ ಮುಂತಾದ ವಲಯಗಳಲ್ಲಿ ಸಹಜ ಸ್ಥಿತಿಗೆ ತರುವ ಪ್ರಯತ್ನ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಉದ್ಯಮ-ವ್ಯವಹಾರ ಸ್ನೇಹಿ ನೀತಿ, ಕಾಯ್ದೆಗಳಿಗೆ ತಿದ್ದುಪಡಿಗಳು, ರಿಯಾಯಿತಿ ಕೊಡಮಾಡಿ ಪ್ರೋತ್ಸಾಹ ವಾತಾವರಣವನ್ನು ನಿರ್ಮಿಸಿದೆ.

    ಇದನ್ನೂ ಓದಿ: ಬಳ್ಳಾರಿಯ ದಲಿತ ಬಾಲಕಿಯ ಮೇಲೆ ಅತ್ಯಾಚಾರ- ಕೊಲೆ: ಶವವಿಟ್ಟು ಪ್ರತಿಭಟನೆ ಮಾಡಿದ ಗ್ರಾಮಸ್ಥರು

    ಸೋಂಕಿತರ ಚಿಕಿತ್ಸೆ, ಶಂಕಿತರ ಉಪಚಾರಕ್ಕೆ ಬೇಕಾದ ಸವಲತ್ತುಗಳು ಸೃಜನೆಯಾಗಿದ್ದು, ಸರ್ಕಾರ ಮತ್ತು ಖಾಸಗಿ ಸಾಮರ್ಥ್ಯವೂ ವೃದ್ಧಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮಾರಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಪೂರ್ಣ ಅಲ್ಲದಿದ್ದರೂ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಹಾಗೊಂದು ವೇಳೆ 2ನೇ ಅಲೆ ಅಪ್ಪಳಿಸಿದರೂ ದುಷ್ಪರಿಣಾಮ ತಡೆಗೆ ಕೈಗೊಳ್ಳುವ ಕಠಿಣ ಕ್ರಮಗಳಿಗೆ ಜನರು ತ್ವರಿತವಾಗಿ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸವನ್ನು ಸರ್ಕಾರ ಹೊಂದಿದೆ.

    ಪ್ರಸಕ್ತ ಆರ್ಥಿಕ ವರ್ಷದ ಯೋಜನೆಗಳಿಗೆ ಅನುದಾನ ಕಡಿತವಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಹಾದಿಗೆ ಮರಳಿಲ್ಲ. ಲಾಕ್ ಡೌನ್ ಹಾಗೂ ಹಲವು ನಿರ್ಬಂಧಗಳಿಂದಾಗಿ ವಾಣಿಜ್ಯ, ಮೋಟಾರು ವಾಹನ, ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸೇರಿದಂತೆ ಶೇ.32.85ರಷ್ಟು ಪ್ರಗತಿ ಕುಂಠಿತವಾಗಿದೆ. ಸರ್ಕಾರಿ ನೌಕರರ ಸಂಬಳ ಸೇರಿದಂತೆ ಬದ್ಧತಾ ವೆಚ್ಚಗಳು, ತುರ್ತು ಅಗತ್ಯದ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ನಿರಂತರ ಕಸರತ್ತು ನಡೆಸಿದೆ. ಈ ಹಂತದಲ್ಲಿ ಪುನಃ ಕರ್ಫ್ಯೂ ಜಾರಿಗೊಳಿಸಿದರೆ ಆರ್ಥಿಕತೆ ಕುಸಿಯುವ ದಿಗಿಲು ಅಧಿಕಾರದ ಚುಕ್ಕಾಣಿ ಹಿಡಿದವರನ್ನು ಕಾಡುತ್ತಿದ್ದು, ಬದಲೀ ಮಾರ್ಗೋಪಾಯಗಳಿಗೆ ಸರ್ಕಾರ ಹೆಚ್ಚಿನ ಒಲವು ತೋರಿದೆ.

    ಗರ್ಭಿಣಿ ಅಂದುಕೊಂಡ ಪೊಲೀಸರು, ಆದ್ರೂ ಅನುಮಾನ ಪರಿಹರಿಸಿಕೊಳ್ಳಲು ಮುಂದಾದಾಗ ಕಾದಿತ್ತು ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts