More

    ಈಗ ನಡೆಯದಿದ್ದರೆ 12 ವರ್ಷ ನಡೆಸಲಿಕ್ಕಾಗದು ಪುರಿ ಜಗನ್ನಾಥ ರಥಯಾತ್ರೆ

    ನವದೆಹಲಿ: ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಗೆ ಸೋಮವಾರ ಸುಪ್ರೀಂ ಕೋರ್ಟ್​ ಅವಕಾಶ ನೀಡಿದೆ. ಹಿಂದಿನ ವಿಚಾರಣೆ ವೇಳೆ ರಥೋತ್ಸವಕ್ಕೆ ಅವಕಾಶ ನೀಡಿದರೆ, ಆ ಜಗನ್ನಾಥನೂ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್​, ಈಗ ಅವಕಾಶ ನೀಡಿ ಆದೇಶಿಸಲು ಕೂಡ ಅದೊಂದು ಮಹತ್ವದ ಕಾರಣವಿದೆ.

    ಹೌದು…. ಪುರಿಯ ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ದೇವಿ ರಥೋತ್ಸವ ವಿಶ್ವವಿಖ್ಯಾತ. ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಈ ರಥೋತ್ಸವಕ್ಕೆಂದೇ ಆಗಮಿಸುತ್ತಾರೆ. ಪ್ರತಿ ವರ್ಷ ನಡೆಯುವ ಈ ರಥೋತ್ಸವ ಒಮ್ಮೆ ತಪ್ಪಿದರೆ ಭಾರಿ ಅಪಶಕುನವೆಂದೇ ನಂಬಲಾಗುತ್ತದೆ.

    ಇದನ್ನೂ ಓದಿ; ಭಕ್ತರಿಲ್ಲದೆ ನಡೆಯುತ್ತೆ ಪುರಿ ಜಗನ್ನಾಥ ರಥಯಾತ್ರೆ; ಕೊನೆಗೂ ಸುಪ್ರೀಂ ಕೋರ್ಟ್​ ಅಸ್ತು 

    ಅಷ್ಟಕ್ಕೂ ಈ ವರ್ಷ ರಥಯಾತ್ರೆ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಕೂಡ ಸುಪ್ರೀಂ ಕೋಟ್​ರ್ಗೆ ಅಫಿಡವಿಟ್​ ಸಲ್ಲಿಸಿತ್ತು. ಅಲ್ಲಿ ಮಹತ್ವವಾದ ಅಂಶವನ್ನು ಪ್ರಸ್ತಾಪಿಸಿತ್ತು. ಈ ವರ್ಷ ಅಂದರೆ, ಜೂನ್​ 23ರಂದು ಜಗನ್ನಾಥ ದೇಗುಲದಿಂದ ಹೊರ ಬರದಿದ್ದರೆ ಇನ್ನು 12 ವರ್ಷ ಹೊರಗೆ ಬರುವಂತಿಲ್ಲ. ಅಂದರೆ 12 ವರ್ಷ ರಥಯಾತ್ರೆಯನ್ನೇ ನಡೆಸುವಂತಿಲ್ಲ. ಇಂಥದ್ದೊಂದು ಸಂಪ್ರದಾಯವನ್ನು ಕೇಂದ್ರ ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿದೆ. ಇದು ಕೋಟ್ಯಂತರ ಭಕ್ತರ ನಂಬಿಕೆಯ ಪ್ರಶ್ನೆಯೂ ಆಗಿದೆ. ಹೀಗಾಗಿ ರಥಯಾತ್ರೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿತ್ತು.

    ಇದನ್ನೂ ಓದಿ; ಚೀನಾ ಸಂಘರ್ಷದಲ್ಲಿ ಬಲಿಯಾದ ಯೋಧನ ಕುಟುಂಬಕ್ಕೆ ಐದು ಕೋಟಿ ರೂ., ಪತ್ನಿಗೆ ಸಹಾಯಕ ಆಯುಕ್ತೆ ಹುದ್ದೆ 

    ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಭಕ್ತರಿಲ್ಲದೆ, ಧಾರ್ಮಿಕ ವಿಧಿವಿಧಾನ ಹಾಗೂ ರಥಯಾತ್ರೆಯನ್ನು ನಡೆಸಲು ನ್ಯಾಯಾಲಯ ಸಮ್ಮತಿಸಿದೆ. ಇದಕ್ಕಾಗಿ ಪುರಿಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಕೇವಲ 500 ಜನರು ಮಾತ್ರ ಪಾಲ್ಗೊಳ್ಳಬಹುದು.
    ರಥೋತ್ಸವ ನಿಲ್ಲಬಾರದು ಎಂಬ ಕಾರಣಕ್ಕೆ ನಿಗದಿಯಂತೆ ರಥ ನಿರ್ಮಾಣ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ಹಿಂದಿನಂತೆಯೇ ನಡೆಸಿಕೊಂಡು ಬರಲಾಗಿತ್ತು. ಸದ್ಯ ಇಂಥದ್ದೊಂದು ನಿರ್ಬಂಧದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಥಯಾತ್ರೆ ನಡೆಯುತ್ತಿದೆ.

    ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts