More

    ಐಪಿಎಲ್​ ಆಡಲು ಪಾಕ್​ಗೆ ಅವಕಾಶ ನೀಡದಿದ್ರೆ… ಭಾರತಕ್ಕೆ ಇಮ್ರಾನ್​ ಖಾನ್ ಹೇಳಿದ್ದಿಷ್ಟು…

    ಇಸ್ಲಮಾಬಾದ್​: ಇಂಡಿಯನ್​ ಪ್ರೀಮಿಯರ್​​​ ಲೀಗ್​ (ಐಪಿಎಲ್​​) ಆಡಲು ನಮ್ಮವರಿಗೆ ಅವಕಾಶ ನೀಡಿದಿದ್ದರೆ ಪಾಕಿಸ್ತಾನವೇನು ಚಿಂತಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಹೇಳಿದ್ದಾರೆ.

    ಪಾಕಿಸ್ತಾನಕ್ಕೆ ಅವಕಾಶ ನೀಡದಿರುವುದು ಭಾರತ ಅಹಂ ಅನ್ನು ತೋರಿಸುತ್ತದೆ. ಪಾಕ್​ಗೆ ಅವಕಾಶ ನೀಡದಿರುವುದಕ್ಕೆ ಐಸಿಸಿಗಿಂತ ಬಿಸಿಸಿಐ ಹೆಚ್ಚು ಹಣ ಗಳಿಸುವುದು ಕಾರಣ ಎಂದು ಇಮ್ರಾನ್​ ಖಾನ್​ ಟೀಕಿಸಿದ್ದಾರೆ.

    ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಗಾಯ; IPLನಲ್ಲಿ ಕೇನ್​ ವಿಲಿಯಮ್ಸನ್​​​ ಮುಂದುವರೆಯುವುದು ಡೌಟ್​

    ಕ್ರಿಕೆಟ್​ ಜಗತ್ತಿನಲ್ಲಿ ಸೂಪರ್​ ಪವರ್​ನಂತೆ ವರ್ತಿಸುವ ಭಾರತದಲ್ಲಿ ಅಹಂ ಎನ್ನುವುದು ತುಂಬಾ ಇದೆ. ಕ್ರಿಕೆಟ್​ನಲ್ಲಿ ಇತರ ಯಾವುದೇ ದೇಶಗಳಿಗಿಂತ ಹೆಚ್ಚಿನ ಹಣವನ್ನು ಉತ್ಪಾದಿಸುವ ಅವರ ಸಾಮರ್ಥ್ಯ ಇದಕ್ಕೆ ಕಾರಣ. ಅವರು ಯಾರನ್ನು ಆಡಬೇಕು ಮತ್ತು ಯಾರನ್ನು ಆಡಬಾರದು ಎಂದು ತೀರ್ಮಾನಿಸುವ ಸೂಪರ್ ಪವರ್​ನಂತೆ ಒಂದು ರೀತಿಯ ದುರಹಂಕಾರದಲ್ಲಿ ವರ್ತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಇಮ್ರಾನ್​ ಹೇಳಿದರು.

    ಅಂದಹಾಗೆ 2008ರಲ್ಲಿ ಆರಂಭವಾದ ಮೊದಲ ಐಪಿಎಲ್​ ಪಂದ್ಯದ ವೇಳೆ ಬಿಸಿಸಿಐ ಪಾಕಿಸ್ತಾನವನ್ನು ಆಹ್ವಾನಿಸಿತ್ತು. ಆದರೆ, ಅದೇ ವರ್ಷ ಮುಂಬೈ ಮೇಲೆ ನಡೆದ ಉಗ್ರ ದಾಳಿಯ ಬಳಿಕ ಪಾಕಿಸ್ತಾನವನ್ನು ಐಪಿಎಲ್​ನಿಂದ ಬ್ಯಾನ್​ ಮಾಡಲಾಗಿದೆ. (ಏಜೆನ್ಸೀಸ್​)

    VIDEO | ಇಬ್ಬರು ಯುವತಿಯರೊಂದಿಗೆ ಬೈಕ್​ನಲ್ಲಿ ವೀಲ್ಹಿಂಗ್; ತಪ್ಪಿತಸ್ಥರ ಪತ್ತೆಗೆ ಬಲೆ ಬೀಸಿದ ಪೊಲೀಸರು!

    ಗಗನಸಖಿ ಜೊತೆ ಅನುಚಿತ ವರ್ತನೆ; ಮುಂಬೈನಲ್ಲಿ ಸ್ವೀಡಿಷ್​ ಪ್ರಜೆ ಬಂಧನ

    ಬೆಂಗಳೂರು ಪ್ರಕೃತಿಯೊಂದಿಗೆ ಬಾಂಧವ್ಯ ಹೊಂದಿದೆ; ಕನ್ನಡದಲ್ಲೇ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts