More

    ಗಗನಸಖಿ ಜೊತೆ ಅನುಚಿತ ವರ್ತನೆ; ಮುಂಬೈನಲ್ಲಿ ಸ್ವೀಡಿಷ್​ ಪ್ರಜೆ ಬಂಧನ

    ಮುಂಬೈ: ಕುಡಿದ ಮತ್ತಿನಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ವೀಡಿಷ್​ ಪ್ರಜೆಯನ್ನು ಮುಂಬೈ ಪೊಲೀಸರು ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ಧಾರೆ.

    ಇಂಡಿಗೋ ವಿಮಾನ(GE-1052)ದಲ್ಲಿ ಗುರುವಾರ ಘಟನೆ ನಡೆದಿದ್ದು ಬಂಧಿತ ಆರೋಪಿಯನ್ನು ಕ್ಲಾಸ್​ ಎರಿಕ್​ ಜೊನಾಸ್​ ವೆಸ್ಟ್​​ಬರ್ಗ್​​(63) ಎಂದು ತಿಳಿದು ಬಂದಿದೆ.

    ಬ್ಯಾಂಕಾಕ್​ನಿಂದ ಪ್ರಯಾಣಿಸುವ ವೇಳೆ ಆರೋಪಿ ಸಿಬ್ಬಂದಿ ಊಟ ಬಡಿಸುವ ಸಮಯದಲ್ಲಿ ಅನುಚಿತವಾಗಿ ವರ್ತಿಸಿದ್ದು ಈ ಬಗ್ಗೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ಬಳಿಕ ಸುಮ್ಮನಾಗದ ಆರೋಪಿಯೂ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಆಗ ಗಗನ ಸಖಿಯೂ ತನ್ನ ರಕ್ಷಣೆಗಾಗಿ ಜೂಗಿಕೊಂಡಿದ್ದಾಳೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಒತ್ತುವರಿ ತೆರವು ಕಾರ್ಯಾಚರಣೆಗೆ ವಿರೋಧ; ಗುಡಿಸಿಲಿಗೆ ಬೆಂಕಿ ಹಚ್ಚಿ ಪ್ರಾಣ ಕಳೆದುಕೊಳ್ಳಲು ಮುಂದಾದ ಮಹಿಳೆ

    ಗಗನಸಖಿ ಸಹಾಯಕ್ಕೆ ದಾವಿಸಿದವರ ಜೊತೆ ಆರೋಪಿಯೂ ವಾಗ್ವಾದ ನಡೆಸಿದ್ದು ಸಹ ಪ್ಯಾಸೆಂಜರ್ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ವಿಮಾನ ಮುಂಬೈನಲ್ಲಿ ಲ್ಯಾಂಡಿಂಗ್​ ಆಗುತ್ತಿದ್ದಂತೆ ಸಿಬ್ಬಂದಿ ಆರೋಪಿಯನ್ನು ಸಹರ್​ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅಂಧೇರಿ ಮೆಟ್ರೋಪಾಲಿಟನ್​ ಕೋರ್ಟ್​ಗೆ ಹಾಜರುಪಡಿಸಿದ್ದಾರೆ ಮತ್ತು ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 20,000 ಸಾವಿರ ದಂಡವಬನ್ನು ವಿಧಿಸಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts