More

  ದೆಹಲಿಯಲ್ಲಿ ಬಾಂಬ್ ಪತ್ತೆ; ಆತಂಕ ಮೂಡಿಸಿದ್ದ ಅನುಮಾನಾಸ್ಪದ ಬ್ಯಾಗ್​ನಲ್ಲಿತ್ತು ಐಇಡಿ

  ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಂಜೆಯ ಸುಮಾರಿಗೆ ಪತ್ತೆಯಾಗಿದ್ದ ಅನುಮಾನಾಸ್ಪದ ಬ್ಯಾಗ್​ನಿಂದ ಮೂಡಿದ್ದ ಆತಂಕ ಇದೀಗ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ ಆ ಬ್ಯಾಗ್​ನಲ್ಲಿ ಬಾಂಬ್ ಪತ್ತೆಯಾಗಿದೆ.

  ದೆಹಲಿಯ ಹಳೇ ಸೀಮಾಪುರಿ ಪ್ರದೇಶದ ಮನೆಯೊಂದರ ಬಳಿ ಬ್ಯಾಗ್​ವೊಂದು ಅನುಮಾನಾಸ್ಪದವಾಗಿ ಕಂಡು ಬಂದಿತ್ತು. ಈ ಕುರಿತಂತೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ತೆರಳಿದ್ದರು.

  ಹೀಗೆ ಎಲ್ಲರೂ ಆ ಸ್ಥಳಕ್ಕೆ ಧಾವಿಸುತ್ತಿದ್ದಂತೆ ವಿಷಯ ಹಬ್ಬಿ ಸುತ್ತಲಿನ ಪ್ರದೇಶದಲ್ಲಿ ಆತಂಕ ಉಂಟಾಗಿತ್ತು. ಕೊನೆಗೂ ಬಾಂಬ್ ನಿಷ್ಕ್ರಿಯ ದಳದವರು ಸೂಕ್ತ ಮುಂಜಾಗರೂಕತೆಯಿಂದ ಹತ್ತಿರ ಹೋಗಿ ನೋಡಿದಾಗ ಅದರಲ್ಲಿ ಸುಧಾರಿತ ಸ್ಫೋಟಕ ಉಪಕರಣ (ಐಇಡಿ) ಇರುವುದು ಕಂಡುಬಂದಿದೆ.

  ಬ್ಯಾಗ್ ಹಾಗೂ ಐಇಡಿ ಎರಡನ್ನೂ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಜನವರಿಯಲ್ಲಿ ಘಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ಸಿಕ್ಕಂಥದ್ದೇ ಸ್ಫೋಟಕ ಇಲ್ಲಿಯೂ ಸಿಕ್ಕಿದ್ದು, ಶಂಕಿತರು ದೆಹಲಿ-ಉತ್ತರಪ್ರದೇಶ ಗಡಿಭಾಗದಲ್ಲಿ ಅಡಗಿರಬಹುದು ಎಂಬ ಅಂದಾಜಿನೊಂದಿಗೆ ಮುಂದಿನ ಕಾರ್ಯಾಚರಣೆ ನಡೆಯುತ್ತಿದೆ.

  ಸಾಲದ ಕಂತು ಕಟ್ಟದ ಮಗ, ಅಮ್ಮನ ಮೇಲೇ ವಾಹನ ಹತ್ತಿಸಿ ಕೊಂದ!

  ಹೆರಿಗೆ ಮಾಡಿಸಲಿಕ್ಕೂ ಲಂಚ ಕೇಳಿದ ವೈದ್ಯ; ದಾಳಿ ವೇಳೆ ಮನೆಯಲ್ಲಿತ್ತು ಕೋಟಿಗೂ ಅಧಿಕ ಹಣ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts