More

    ಇದು ಕುಂಬಳಕಾಯಿಯಲ್ಲ, ಹೀರೆಕಾಯಿ!

    ಹಾನಗಲ್ಲ: ಪಟ್ಟಣದ ಹೊಸಪೇಟೆ ಓಣಿಯ ಚಂದ್ರಶೇಖರ ಹುಲಿಕಂತಿಮಠ ಅವರ ಮನೆ ಹಿತ್ತಲಿನಲ್ಲಿ ಕುಂಬಳಕಾಯಿ ಆಕಾರದಲ್ಲಿ ಹೀರೆಕಾಯಿ ಬೆಳೆದಿರುವುದು ಅಚ್ಚರಿಗೆ ಕಾರಣವಾಗಿದೆ. ನೋಡಲು ಥೇಟ್ ಕುಂಬಳಕಾಯಿಯಂತೆ ಕಾಣುವ ಈ ಹೀರೆಕಾಯಿ ಉದ್ದವಾಗಿ ಬೆಳೆಯುವ ಬದಲು ದುಂಡಗಾಗಿ ಬೆಳೆದಿದೆ. ಚಂದ್ರಶೇಖರ ಹುಲಿಕಂತಿಮಠ ಅವರು ಪೇಟೆಯಲ್ಲಿ ವಿವಿಧ ಬಗೆಯ ತರಕಾರಿ ಬೀಜಗಳನ್ನು ಖರೀದಿಸಿ ತಂದು ಬೆಳೆಸಿದ್ದರು. ಆದರೆ, ಒಂದು ಬಳ್ಳಿಯಲ್ಲಿ ಮಾತ್ರ ಹೀರೆಕಾಯಿಗಳು ಉದ್ದವಾಗುವ ಬದಲು ದುಂಡಗಿನ ಕುಂಬಳಕಾಯಿ ಆಕಾರ ಪಡೆದಿವೆ. ಯಾವುದೇ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸದಿದ್ದರೂ ಹೀರೆಕಾಯಿ ಹಿರಿ ಹಿರಿ ಹಿಗ್ಗಿರುವುದು ಆಶ್ಚರ್ಯವನ್ನುಂಟು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts