More

    ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

    ಬೆಂಗಳೂರು: ಆಹಾರ ಕ್ಷೇತ್ರದಲ್ಲಿ ಆಗಾಗ ಹೊಸ ಹೊಸ ಆವಿಷ್ಕಾರಗಳಾಗುತ್ತಿರುತ್ತವೆ. ಆಹಾರ ತಯಾರಿ, ದಾಸ್ತಾನು, ಸರಬರಾಜು ಮುಂತಾದ ಪ್ರಕ್ರಿಯೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೀಗ ಇಡ್ಲಿ-ದೋಸೆ ಹಿಟ್ಟು ಸರಬರಾಜು ವಿಷಯದಲ್ಲೂ ಅಂಥದ್ದೇ ಒಂದು ಹೊಸ ತಂತ್ರಜ್ಞಾನ ಕಂಡುಕೊಳ್ಳಲಾಗಿದೆ.

    ಇಡ್ಲಿಯನ್ನು ಎಟಿಎಂ ಮೂಲಕ ದಿನದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ನೀಡುವಂಥ ಕೇಂದ್ರವೊಂದು ಬೆಂಗಳೂರಿನಲ್ಲಿ ಆರಂಭವಾಗಿರುವುದು ಕೆಲವು ದಿನಗಳ ಹಿಂದೆ ಕಂಡುಬಂದಿತ್ತು. ಇದೀಗ ಇಡ್ಲಿ-ದೋಸೆ ಹಿಟ್ಟನ್ನು ಪೆಟ್ರೋಲ್​-ಡೀಸೆಲ್ ಥರದ ವಿಶೇಷವಾದ ಟ್ಯಾಂಕರ್​ನಲ್ಲಿ ಸರಬರಾಜು ಮಾಡುವಂಥ ಯೋಜನೆಯೊಂದನ್ನು ಇಡ್ಲಿ-ದೋಸೆ ಹಿಟ್ಟು ಉತ್ಪಾದಿಸುವ ಸಂಸ್ಥೆಯೊಂದು ಮಾಡಿದೆ.

    ಹೋಗ್ತ ಹೋಗ್ತ ಹುದುಗುವಿಕೆ (ಫರ್ಮೆಂಟೇಷನ್ ಆನ್ ದ ಗೋ) ಎಂಬ ಕಾನ್ಸೆಪ್ಟ್​ನಲ್ಲಿ ಇಡ್ಲಿ-ದೋಸೆ ಹಿಟ್ಟು ಸರಬರಾಜು ಮಾಡುವ ಯೋಜನೆಯೊಂದನ್ನು ಬೆಂಗಳೂರು ಮೂಲದ ಐಡಿ ಫ್ರೆಷ್​ಫುಡ್ ಕಂಪನಿ ಹಾಕಿಕೊಂಡಿದೆ. ಸಾಮಾನ್ಯವಾಗಿ ಹುದುಗುವಿಕೆ ಎಂಬುದು ಒಂದು ನಿಯಂತ್ರಿತ ವಾತಾವರಣದೊಳಗೆ ನಡೆಯುತ್ತದೆ. ಹೀಗೆ ಹುದುಗಿದ ಇಡ್ಲಿ-ದೋಸೆ ಹಿಟ್ಟನ್ನು ದೂರದ ಊರುಗಳಿಗೆ ಸಾಗಿಸುವಾಗ ಅದರ ಗುಣಮಟ್ಟದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಒಂದು ದಿನ ತಡವಾಗಿ ತಲುಪುವುದರಿಂದ ಹಿಟ್ಟಿನ ಗುಣಮಟ್ಟದಲ್ಲಿ ಲೋಪ ಉಂಟಾಗಬಹುದು. ಹೀಗಾಗಿ ನಮ್ಮ ಗ್ರಾಹಕರು ಉತ್ತಮ ಇಡ್ಲಿ-ದೋಸೆ ಹಿಟ್ಟನ್ನೇ ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಐಡಿಯಾ ಕಂಡುಕೊಂಡಿದ್ದೇವೆ. ಈ ಮೂಲಕ ನಾವು ಇದೀಗ ಪ್ಯಾಕ್​ ಮಾಡಲಾದ ಇಡ್ಲಿ-ದೋಸೆ ಹಿಟ್ಟನ್ನು ಹುದುಗುವಿಕೆ ನಡೆಯುವ ಮೊದಲೇ ದೂರದ ಸ್ಥಳಗಳಿಗೆ ಕಳಿಸುವ ಉಪಾಯ ಕಂಡುಕೊಂಡಿದ್ದೇವೆ. ರೆಡಿ ಮಿಕ್ಸ್​ ಕಾಂಕ್ರೀಟ್ ಮಾಡೆಲ್​ನ ಚಿಲ್ಲರ್ ವಾಹನದಲ್ಲಿ ಕಳಿಸುವುದರಿಂದ ಹೋಗ್ತ ಹೋಗ್ತ ನಿಯಂತ್ರಿತ ವಾತಾವರಣದಲ್ಲಿ ಹುದುಗುವಿಕೆ ನಡೆಯುವುದಲ್ಲದೆ, ತಾಜಾ ಇಡ್ಲಿ-ದೋಸೆ ಹಿಟ್ಟು ಗ್ರಾಹಕರಿಗೆ ತಲುಪಿಸಬಹುದು ಎಂಬುದಾಗಿ ಈ ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ಮುಸ್ತಾಫಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಕಾನ್ಸೆಪ್ಟ್ ಹಂಚಿಕೊಂಡಿದ್ದಾರೆ.

    ಭಗತ್ ಸಿಂಗ್ ಪಾತ್ರಕ್ಕೆಂದು ರಿಹರ್ಸಲ್ ಮಾಡುತ್ತಿದ್ದ ಬಾಲಕ ನಿಜವಾಗಿಯೂ ಉರುಳಿಗೆ ಬಲಿಯಾದ!

    ನಟಿ ವಿನಯಪ್ರಸಾದ್ ಮನೆಯಲ್ಲಿ ಕಳವು; ಬೆಡ್​ರೂಮ್​ನಲ್ಲಿದ್ದ ನಗದು ಕದ್ದ ಕಳ್ಳರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts