More

    ಐಸಿಸಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ರಿಷಭ್ ಪಂತ್, ನೀವೂ ಮತ ಹಾಕಿ…

    ದುಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ನಿರ್ಣಾಯಕ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಚೇಸಿಂಗ್ ನಡೆಸಿ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್, ಐಸಿಸಿ ಹೊಸದಾಗಿ ಪರಿಚಯಿಸಿರುವ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಜನವರಿ ತಿಂಗಳ ಆಟಗಾರರ ಪ್ರಶಸ್ತಿ ರೇಸ್‌ನಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಐರ್ಲೆಂಡ್ ಆಟಗಾರ ಪೌಲ್ ಸ್ಟರ್ಲಿಂಗ್ ಕೂಡ ಇದ್ದಾರೆ.

    ವರ್ಷದುದ್ದಕ್ಕೂ ಪ್ರತಿ ತಿಂಗಳು ನೀಡಲಾಗುವ ಪುರುಷರ ಮತ್ತು ಮಹಿಳಾ ವಿಭಾಗದ ಪ್ರಶಸ್ತಿಯ ಮೊದಲ ಆವೃತ್ತಿಯಲ್ಲಿ ತಲಾ ಮೂವರು ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಹೆಸರನ್ನು ಸೂಚಿಸಲಾಗಿದೆ. ಮಹಿಳಾ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್, ಮರಿಜಾನ್ ಕಾಪ್ ಮತ್ತು ಪಾಕಿಸ್ತಾನದ ಡಯಾನಾ ಬೇಗ್ ಹೆಸರು ನಾಮ ನಿದೇರ್ರ್ಶನಗೊಂಡಿದೆ.

    ಇದನ್ನೂ ಓದಿ: ಈ ವರ್ಷ ಐಪಿಎಲ್ ಆಯೋಜನೆಗೆ ಯುಎಇಗಿಂತ ಭಾರತವೇ ಸುರಕ್ಷಿತ ತಾಣ!

    23 ವರ್ಷದ ಪಂತ್ ಆಸೀಸ್ ವಿರುದ್ಧ ಜನವರಿಯಲ್ಲಿ ನಡೆದ ಸಿಡ್ನಿ ಟೆಸ್ಟ್‌ನಲ್ಲಿ 97 ರನ್ ಬಾರಿಸಿದ್ದರೆ, ಬ್ರಿಸ್ಬೇನ್‌ನಲ್ಲಿ ಅಜೇಯ 89 ರನ್ ಬಾರಿಸಿ ಐತಿಹಾಸಿಕ ಸರಣಿ ಗೆಲುವನ್ನೂ ತಂದುಕೊಟ್ಟಿದ್ದರು. ಜೋ ರೂಟ್ ಜನವರಿಯಲ್ಲಿ ಶ್ರೀಲಂಕಾದಲ್ಲಿ ಆಡಿದ 2 ಟೆಸ್ಟ್‌ಗಳಲ್ಲಿ ಒಂದು ದ್ವಿಶತಕ (228) ಮತ್ತು ಭರ್ಜರಿ ಶತಕ (186) ಸಹಿತ 400ಕ್ಕೂ ಅಧಿಕ ರನ್ ಬಾರಿಸಿದ್ದರು. ಸ್ಟರ್ಲಿಂಗ್ ಯುಎಇ ವಿರುದ್ಧ 2 ಮತ್ತು ಅ್ಘಾನಿಸ್ತಾನ ವಿರುದ್ಧ 3 ಏಕದಿನ ಪಂದ್ಯ ಆಡಿ 3 ಶತಕಗಳನ್ನು ಸಿಡಿಸಿದ್ದರು.

    ಆಯ್ಕೆ ಪ್ರಕ್ರಿಯೆ ಹೇಗೆ?
    ವಿಶ್ವದೆಲ್ಲೆಡೆಯ ಕ್ರಿಕೆಟ್ ಪ್ರೇಮಿಗಳು ಐಸಿಸಿ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿ ಮತ ಚಲಾಯಿಸಬಹುದಾಗಿದೆ. ಅಭಿಮಾನಿಗಳ ಮತದಾನವೂ ಪ್ರಶಸ್ತಿ ವಿಜೇತರ ಆಯ್ಕೆಯಲ್ಲಿ ಶೇ. 10 ಪರಿಗಣನೆಗೆ ಬರಲಿದೆ. ಉಳಿದಂತೆ ಶೇ. 90 ಪರಿಗಣನೆಯನ್ನು ಐಸಿಸಿ ಹಾಲ್ ಆಫ್​ ಫೇಮ್ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ಪತ್ರಕರ್ತರು, ಪ್ರಸಾರಕರು ಇ-ಮೇಲ್ ಮೂಲಕ ಸಲ್ಲಿಸುವ ಮತದ ಮೂಲಕ ಮಾಡಲಾಗುವುದು. ಪ್ರಶಸ್ತಿ ವಿಜೇತರ ಹೆಸರನ್ನು ಪ್ರತಿ ತಿಂಗಳ 2ನೇ ಸೋಮವಾರದಂದು ಪ್ರಕಟಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

    ಐಸಿಸಿ ವೆಬ್‌ಸೈಟ್‌ನಲ್ಲಿ ರಿಷಭ್ ಪಂತ್ ಅವರಿಗೆ ಮತ ಚಲಾಯಿಸಲು ಈ ಕೆಳಗಿನ ಐಸಿಸಿ ಟ್ವೀಟ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ:

    ಅತ್ಯುತ್ತಮ ಮಹಿಳಾ ರೆಸ್ಲರ್ ಪ್ರಶಸ್ತಿಗೆ ಘೋಷಿಸಿದ ಬಹುಮಾನ ಏನು ಗೊತ್ತೇ..?

    ಭಾರತಕ್ಕೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts