More

    ಐಸಿಸಿ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಪಾಕಿಸ್ತಾನ ಪ್ರಾಬಲ್ಯ, ಭಾರತಕ್ಕೆ ನಿರಾಸೆ

    ದುಬೈ: ಪಾಕಿಸ್ತಾನದ ವೇಗಿ ಶಹೀನ್ ಷಾ ಅಫ್ರಿದಿ, ನಾಯಕ ಬಾಬರ್ ಅಜಮ್ ಮತ್ತು ಇಂಗ್ಲೆಂಡ್ ನಾಯಕ ಜೋ ರೂಟ್ ಪುರುಷರ ವಿಭಾಗದಲ್ಲಿ ಕ್ರಮವಾಗಿ ಐಸಿಸಿ ವರ್ಷದ ಕ್ರಿಕೆಟಿಗ, ವರ್ಷದ ಏಕದಿನ ಆಟಗಾರ ಮತ್ತು ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮುನ್ನ ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್, ವರ್ಷದ ಟಿ20 ಪ್ರಶಸ್ತಿ ಗೆದ್ದಿದ್ದರು. ಮಹಿಳಾ ವಿಭಾಗದಲ್ಲೂ ಪಾಕಿಸ್ತಾನದ ವೇಗಿ ಪಾತಿಮಾ ಸನಾ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಜಯಿಸಿದ್ದರು. ಇದರಿಂದ ಈ ಬಾರಿಯ ಐಸಿಸಿ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಪಾಕಿಸ್ತಾನ ಪ್ರಾಬಲ್ಯ ಸಾಧಿಸಿದಂತಾಗಿದೆ. ಭಾರತದ ಪುರುಷರ ಕ್ರಿಕೆಟಿಗರು ಈ ವರ್ಷ ಒಂದೂ ಪ್ರಶಸ್ತಿ ಬಾಚಿಕೊಳ್ಳಲು ಶಕ್ತರಾಗಿಲ್ಲ.

    2021ರಲ್ಲಿ 36 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22.20ರ ಸರಾಸರಿಯಲ್ಲಿ 78 ವಿಕೆಟ್ ಕಬಳಿಸುವ ಸಾಧನೆಗಾಗಿ ಶಹೀನ್ ಷಾ ಅಫ್ರಿದಿ ವರ್ಷದ ಕ್ರಿಕೆಟಿಗ ಗೌರವದೊಂದಿಗೆ ಪ್ರಶಸ್ತಿಗೆ ಸರ್ ಗ್ಯಾರಿ ಸೋಬರ್ಸ್‌ ಟ್ರೋಫಿ ಜಯಿಸಿದ್ದಾರೆ. 21 ವರ್ಷದ ಶಹೀನ್ ಈ ಪ್ರಶಸ್ತಿ ಜಯಿಸಿದ ಅತ್ಯಂತ ಕಿರಿಯರೆನಿಸಿದ್ದಾರೆ. ಬಾಬರ್ ಅಜಮ್ 6 ಏಕದಿನ ಪಂದ್ಯಗಳಲ್ಲಿ 2 ಶತಕ ಸಹಿತ 405 ರನ್ ಸಿಡಿಸಿದ ಸಾಧನೆಗಾಗಿ ಐಸಿಸಿ ಗೌರವ ಪಡೆದಿದ್ದರೆ, ಜೋ ರೂಟ್ 15 ಟೆಸ್ಟ್‌ಗಳಲ್ಲಿ 6 ಶತಕ ಸಹಿತ 1,708 ರನ್ ಬಾರಿಸಿದ ಸಾಧನೆಗಾಗಿ ಐಸಿಸಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ದಕ್ಷಿಣ ಆಫ್ರಿಕಾದ ಮರಾಯಿಸ್ ಎರಾಸ್ಮಸ್ ವರ್ಷದ ಅಂಪೈರ್ ಪ್ರಶಸ್ತಿ ಜಯಿಸಿದ್ದು, ಡೇವ್ ಶೆಫರ್ಡ್ ಟ್ರೋಫಿಗೆ ಪಡೆಯಲಿದ್ದಾರೆ. ಅವರು ಈ ಮುನ್ನ 2016 ಮತ್ತು 2017ರಲ್ಲೂ ಈ ಪ್ರಶಸ್ತಿ ಜಯಿಸಿದ್ದರು. ಟಿ20 ವಿಶ್ವಕಪ್ ಫೈನಲ್ ಸಹಿತ 2021ರಲ್ಲಿ ಅವರು ಒಟ್ಟು 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು.

    ಭಾರತದ ಸ್ಮತಿ ಮಂದನಾಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts