More

    ಲಡಾಖ್​ ಗಡಿ ರಕ್ಷಣೆಗೆ ನಿಯೋಜನೆಯಾಗಲಿದೆ ರಫೇಲ್​ ಯುದ್ಧ ವಿಮಾನ? ಚೀನಾ ಎದುರಿಸಲು ಭಾರತ ಸನ್ನದ್ಧ

    ನವದೆಹಲಿ: ಭಾರತೀಯ ವಾಯುಸೇನೆಯ ಬತ್ತಳಿಕೆಯಲ್ಲಿರುವ ಅತ್ಯಂತ ಪ್ರಬಲ ಅಸ್ತ್ರ ರಫೇಲ್​ ಯುದ್ಧ ವಿಮಾಣ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಈ ಯುದ್ಧ ವಿಮಾನ ಭಾರತದ ಗಡಿ ಕಾಯಲು ಸನ್ನದ್ಧವಾಗಿದೆ.

    ಪದೇಪದೆ ಗಡಿ ತಂಟೆ ತೆಗೆದು ಸಂಘರ್ಷಕ್ಕಿಳಿಯುತ್ತಿರುವ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಲು ರಫೇಲ್​ ಫೈಟರ್​ ಜೆಟ್​ಗಳನ್ನು ನಿಯೋಜಿಸಲಾಗುತ್ತಿದೆ. ಜುಲೈ 22 ರಂದು ನವದೆಹಲಿಯಲ್ಲಿ ನಡೆಯಲಿರುವ ಭಾರತೀಯ ವಾಯು ಸೇನೆಯ ಕಮಾಂಡರ್​ಗಳ ಸಮಾವೇಶದಲ್ಲಿ ಈ ನಿರ್ಧಾರ ಹೊರಬೀಳಲಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ; ಅಂತಿಮ ಪರೀಕ್ಷೆ ಬೇಕಿಲ್ಲ; ಸುಪ್ರೀಂಕೋರ್ಟ್​ ಮೊರೆ ಹೋಗಿದ್ಯಾರು? ದೇಶಾದ್ಯಂತ ರದ್ದಾಗುತ್ತಾ ಎಕ್ಸಾಂ?

    ಫ್ರಾನ್ಸ್​ ನಿರ್ಮಿತ ರಫೇಲ್​ ಯುದ್ಧ ವಿಮಾನಗಳು ಜುಲೈ 27ರಂದು ಅಂಬಾಲಾ ವಾಯುನೆಲೆಗೆ ಆಗಮಿಸಲಿವೆ. ಈ ಮೊದಲು ನಿಗದಿಯಾಗಿದ್ದಂತೆ ಮೊದಲ ಹಂತದಲ್ಲಿ ನಾಲ್ಕು ರಫೇಲ್​ ಜೆಟ್​ಗಳು ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ, ಭಾರತದ ಕೋರಿಕೆ ಮೇರೆಗೆ ಫ್ರಾನ್ಸ್​ ಈ ಯುದ್ಧ ವಿಮಾನಗಳ ನಿರ್ಮಾಣ ಪ್ರಕ್ರಿಯೆಗೆ ಭಾರಿ ವೇಗ ನೀಡಿದೆ.

    ಯುದ್ಧ ವಿಮಾನ ಚಾಲನಾ ಹಾಗೂ ನಿರ್ವಹಣಾ ಸಿಬ್ಬಂದಿ ಕಳೆದ ಒಂದು ವರ್ಷದಿಂದ ಫ್ರಾನ್ಸ್​ನಲ್ಲಿ ಸಂಪೂರ್ಣ ತರಬೇತಿ ಪಡೆದಿದ್ದಾರೆ. ಇದಲ್ಲದೇ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆಯೂ ತಿಳಿದಿದ್ದಾರೆ ಎಂದು ವಾಯುಸೇನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ರ್ಷಾಂತ್ಯವರೆಗೆ ಶಾಲಾ- ಕಾಲೇಜು ಆರಂಭ ಅನುಮಾನ…? ಆನ್​​ಲೈನ್​ ಕ್ಲಾಸ್​ಗಳೇ ಅನಿವಾರ್ಯ

    ರಫೇಲ್​ ಯುದ್ಧ ವಿಮಾನಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಬಳಕೆಗೆ ಸನ್ನದ್ಧಗೊಳಿಸಲಾಗುವುದು. ಲಡಾಖ್​ ಸೇರಿ ಭಾರತದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಜ್ಜಾಗಲಿವೆ ಎಂದು ಅವರು ತಿಳಿಸಿದ್ದಾರೆ.

    ಅತ್ಯಂತ ತಂಪಾದ ವಾತಾವರಣ ಹಾಗೂ ಅತಿ ಎತ್ತರದ ಪ್ರದೇಶದಲ್ಲೂ ಕಾರ್ಯಾಚರಣೆ ನಡೆಸಲು ರಫೇಲ್​ ಯುದ್ಧ ವಿಮಾನಗಳು ಸಾಮರ್ಥ್ಯ ಹೊಂದಿವೆ.

    ಸೆಪ್ಟಂಬರ್​ನಲ್ಲಿ ಶುರುವಾಗುತ್ತಾ ಶಾಲೆ; ಸಚಿವ ಸುರೇಶ್‌ಕುಮಾರ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts