More

    ಮ್ಯಾಕ್ಸಿಗೆ ದ್ವಿಶತಕ ಬಾರಿಸಿದ್ದು ತುಂಬಾ ಬೇಜಾರಾಗಿದೆಯಂತೆ! ಕೊಟ್ಟ ಕಾರಣ ಹೀಗಿದೆ ನೋಡಿ…

    ಮುಂಬೈ: ನ. 07ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಆಲ್​ರೌಂಡರ್​​ ಗ್ಲೇನ್​ ಮ್ಯಾಕ್ಸ್​ವೆಲ್ ದ್ವಿಶತಕ (ಅಜೇಯ 201 ರನ್​ 128 ಎಸೆತ 21 ಬೌಂಡರಿ 10 ಸಿಕ್ಸರ್) ಸಿಡಿಸಿದರು. 91 ರನ್​ಗಳಿಗೆ 7 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಆಸಿಸ್​ ಸೋಲಿನ ದವಡೆಯಲ್ಲಿ ಸಿಲುಕ್ಕಿತ್ತು. ಇಂತಹ ನಿರ್ಣಾಯಕ ಪಂದ್ಯದಲ್ಲಿ​​, ಗಾಯದ ಸಮಸ್ಯೆಯನ್ನೂ ಲೆಕ್ಕಿಸದೇ ಏಕಾಂಗಿಯಾಗಿ ನಿಂತು ಆಫ್ಘಾನ್​ ಬೌಲರ್​​ಗಳ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಮ್ಯಾಕ್ಸಿ, ದ್ವಿಶತಕ ಸಾಧನೆಯ ಜತೆಗೆ ಗೆಲುವು ತಂದುಕೊಟ್ಟಿದ್ದಲ್ಲದೆ, ತಮ್ಮ ತಂಡವನ್ನು ಸೆಮೀಸ್​​ ಹಂತಕ್ಕೆ ತೆಗೆದುಕೊಂಡು ಹೋದರು.

    ಮ್ಯಾಕ್ಸಿ ಆಡಿದ ಈ ಅದ್ಭುತ ಇನ್ನಿಂಗ್ಸ್​ ಗುಂಗಿನಿಂದ ಕ್ರೀಡಾಭಿಮಾನಿಗಳು ಇನ್ನೂ ಹೊರಬಂದಿಲ್ಲ. ಕ್ರಿಕೆಟ್​ ದಿಗ್ಗಜರೇ ಮ್ಯಾಕ್ಸಿ ರನ್​ ಮಾರುತ್ತಕ್ಕೆ ಮನಸೋತಿದ್ದಾರೆ. ಒಂದೆಡೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ತಮ್ಮ ದೇಶಕ್ಕಾಗಿ ಬ್ಯಾಟ್​ ಬೀಸಿದ ಮ್ಯಾಕ್ಸಿಗೆ ಇಡೀ ಕ್ರೀಡಾ ಬಳಗವೇ ತಲೆಬಾಗಿದ್ದು, ವಿಶ್ವಕಪ್​ ಇತಿಹಾಸದಲ್ಲೇ ಇದೊಂದು ಅತ್ಯುತ್ತಮ ಇನ್ನಿಂಗ್ಸ್​ ಆಗಿ ಉಳಿಯಲಿದೆ. ಇದರ ನಡುವೆ ಮ್ಯಾಕ್ಸಿ ಆಫ್ಘಾನ್​ ವಿರುದ್ಧ ದ್ವಿಶತಕ ಬಾರಿಸಿದ್ದಕ್ಕೆ ಬೇಸರ ಹೊರಹಾಕಿದ್ದಾರೆ.

    ಮ್ಯಾಕ್ಸಿ ಅಚ್ಚರಿ ಹೇಳಿಕೆ
    ಅಫ್ಘಾನಿಸ್ತಾನ ವಿರುದ್ಧ ದ್ವಿಶತಕ ಬಾರಿಸಿದ ಇನ್ನಿಂಗ್ಸ್​ ಬಗ್ಗೆ ನನಗೆ ತುಂಬಾ ಬೇಸರವಿದೆ. ಏಕೆಂದರೆ, ಈ ಇನ್ನಿಂಗ್ಸ್​ನಿಂದ ವಿಶ್ವಕಪ್​ನಲ್ಲಿ ನನ್ನ ಸ್ಟ್ರೈಕ್​ರೇಟ್​ಗೆ ತುಂಬಾ ಹೊಡೆತಬಿದ್ದಿದೆ. ಹೀಗಾಗಿ ನನ್ನ ಸ್ಟ್ರೈಕ್​ರೇಟ್​ ಅನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ನಾನೀಗ ತುಂಬಾನೇ ಕಷ್ಟಪಡಬೇಕಾಗಿದೆ ಎಂದು ಕ್ಲಬ್ ಪ್ರೈರೀ ಫೈರ್ ಸಂದರ್ಶನದಲ್ಲಿ ಮ್ಯಾಕ್ಸಿ ಹೇಳಿಕೊಂಡಿದ್ದಾರೆ.

    ಮ್ಯಾಕ್ಸಿಯ ಈ ಹೇಳಿಕೆಯನ್ನು ಕೇಳಿ, ಮಾಜಿ ಆಟಗಾರರಾದ ಆ್ಯಡಂ ಗಿಲ್​ಕ್ರಿಸ್ಟ್ (ಆಸ್ಟ್ರೇಲಿಯಾ)​, ಮೈಕೆಲ್​ ವಾನ್​ (ಇಂಗ್ಲೆಂಡ್) ಸೇರಿದಂತೆ ಅನೇಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನ.7ರಂದು ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಫ್ಘಾನ್​ ಪಡೆ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 291 ರನ್​ಗಳನ್ನು ಕಲೆಹಾಕಿತು. ಗುರಿ ಬೆನ್ನತ್ತಿದ ಆಸಿಸ್​ ಪಡೆ ಟ್ರೆವಿಸ್​ ಹೆಡ್​ (0), ಮಿಚೆಲ್​ ಮಾರ್ಷ್​ (24) ಡೇವಿಡ್​ ವಾರ್ನರ್​ (18), ಜೋಶ್​ ಇಂಗ್ಲಿಸ್​ (0), ಮಾರ್ನಸ್​ ಲಬುಶೇನ್​ (14), ಮಾರ್ಕ್​ ಸ್ಟೋನಿಸ್​ (6) ಮತ್ತು ಮಿಚೆಲ್​ ಸ್ಟಾರ್ಕ್​ (3) ಕೇವಲ 91 ರನ್​ಗೆ ಪ್ರಮುಖ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಕ್ಷರಶಃ ಸೋಲಿನ ದವಡೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಗ್ಲೇನ್​ ಮ್ಯಾಕ್ಸ್​ವೆಲ್​ ಅಬ್ಬರಿಸಿ ಬೊಬ್ಬಿರಿದರು. ಮ್ಯಾಕ್ಸಿ ಮಾರುತಕ್ಕೆ ಆಫ್ಘಾನ್​ ಬೌಲರ್​​ಗಳು ತತ್ತರಿಸಿದರು. ಮ್ಯಾಕ್ಸಿ ತಾನು ಎದುರಿಸಿದ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್​ ನೆರವಿನೊಂದಿಗೆ 201 ರನ್​ ಗಳಿಸಿ ಅಜೇಯರಾಗಿ ಉಳಿದರು. ಗಮನಾರ್ಹ ಸಂಗತಿ ಏನೆಂದರೆ, ಮ್ಯಾಕ್ಸಿ ಆಸಿಸ್​ ಪಡೆಯ ಸಮೀಸ್​ ಪ್ರವೇಶವನ್ನು ಖಚಿತಪಡಿಸಿದರು. ಮ್ಯಾಕ್ಸಿ ಆಟಕ್ಕೆ ಸಾಥ್​ ನೀಡಿದ ನಾಯಕ ಪ್ಯಾಟ್​ ಕ್ಯುಮಿನ್ಸ್​ 68 ಎಸೆತಗಳಲ್ಲಿ ಕೇವಲ 12 ರನ್​ ಗಳಿಸುವ ಮೂಲಕ ತಾಳ್ಮೆಯ ಆಟದೊಂದಿಗೆ ವಿಕೆಟ್​ ಕಾಪಾಡಿಕೊಂಡರು. ಅವರು ಕೂಡ ಅಜೇಯರಾಗಿ ಉಳಿದರು. ಅಂತಿಮವಾಗಿ 46.5 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 293 ರನ್​ ಗಳಿಸುವ ಮೂಲಕ 3 ವಿಕೆಟ್​ಗಳ ಅಂತರದಿಂದ ವಿರೋಚಿತ ಗೆಲುವು ದಾಖಲಿಸಿತು.​ (ಏಜೆನ್ಸೀಸ್​)

    ಮ್ಯಾಕ್ಸಿ ದ್ವಿಶತಕ ಸಿಡಿಸಿಲು ಕಾಲಿನ ಗಾಯವೇ ಕಾರಣ! ಸಚಿನ್​ ಕೊಟ್ಟ ಅಚ್ಚರಿಯ ವಿವರಣೆ ಹೀಗಿದೆ…

    ಸಾಣೇಹಳ್ಳಿ ಸ್ವಾಮೀಜಿ ವಿರುದ್ಧ ದೂರು ನೀಡಿದ ಪ್ರಶಾಂತ್ ಸಂಬರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts