More

    ಐಟಿ ದಾಳಿ ಬಳಿಕ ಹೊರಬಿತ್ತು ಸ್ಪೋಟಕ ಮಾಹಿತಿ: ಬಿಗಿಲ್, ಮಾಸ್ಟರ್​ ಚಿತ್ರಕ್ಕೆ ವಿಜಯ್​ ಪಡೆದ ಸಂಭಾವನೆ ಕೇಳಿ ಶಾಕ್​!​

    ಚೆನ್ನೈ: ಇಳಯದಳಪತಿ ವಿಜಯ್​ ಕಾಲಿವುಡ್​ನ ಪ್ರಮುಖ ನಟರಲ್ಲೊಬ್ಬರು. ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ “ಬಿಗಿಲ್” ಚಿತ್ರದ ನಿರ್ಮಾಪಕ ಎಜಿಎಸ್​ ಎಂಟರ್ಟೈನ್​ಮೆಂಟ್​ ಆ್ಯಂಡ್​ ಫೈನಾನ್ಶಿಯರ್​ ಅಂಬು ಚೆಜಿಯನ್​ ಕಚೇರಿ ಹಾಗೂ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ವಿಜಯ್​ ನಿವಾಸದ ಮೇಲೂ ದಾಳಿ ನಡೆದಿತ್ತು.

    ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು ವಿಜಯ್​ ಮನೆ ಮೇಲೆ ಮತ್ತೆ ದಾಳಿ ಶೋಧ ಕಾರ್ಯಾಚರಣೆಗೆ ತಿಲಾಂಜಲಿ ಹಾಡಿದ್ದರು. ವಿಜಯ್​ ಅಕೌಂಟ್ಸ್​ಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಹಿಂದಿನ “ಬಿಗಿಲ್” ಮತ್ತು ಮುಂದಿನ “ಮಾಸ್ಟರ್​” ಚಿತ್ರಗಳ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ವಿಶೇಷವೆಂದರೆ ಎರಡು ಚಿತ್ರಗಳಿಗೆ ಪಡೆದಿರುವ ಸಂಭಾವನೆಗೆ ವಿಜಯ್​ ತೆರಿಗೆ ಕೂಡ ಸಂದಾಯ ಮಾಡಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳ ತನಿಖೆಯಿಂದ ವಿಜಯ್​ಗೆ ದೊಡ್ಡ ರಿಲೀಫ್​ ಸಿಕ್ಕಂತಾಗಿದೆ.

    ಐಟಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ ವಿಜಯ್​ ಬಿಗಿಲ್​ ಚಿತ್ರಕ್ಕೆ 50 ಕೋಟಿ ರೂ. ಮತ್ತು ಮುಂದಿನ ಮಾಸ್ಟರ್​ ಚಿತ್ರಕ್ಕೆ ಬರೋಬ್ಬರಿ 80 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

    ಮುಂದುವರಿದು ಮಾತನಾಡಿದ ಅಧಿಕಾರಿ ಸದ್ಯ ಶೋಧ ಕಾರ್ಯ ಮುಕ್ತಾಯವಾಗಿದೆ. ಮೂವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಬೇಕಿದೆ. ಈ ಹಿಂದೆ ವಿಜಯ್​ ಮತ್ತು ಅವರ ಕುಟುಂಬವರು ಹೂಡಿರುವ ಬಂಡವಾಳದ ಬಗ್ಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ನಿರ್ಮಾಪಕ ಅಂಬು ಚೆಜಿಯನ್ ನಿವಾಸದಲ್ಲಿ ಬರೋಬ್ಬರಿ 77 ಕೋಟಿ ರೂ. ಅನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಬಿಗಿಲ್​ ಬಾಕ್ಸ್​ ಆಫೀಸ್​ ಗಳಿಕೆಯ ಆಧಾರದ ಮೇಲೆ ದಾಳಿ ಮಾಡಲಾಗಿತ್ತು. ಬಿಗಿಲ್​ 300 ಕೋಟಿ ರೂ. ಗುರಿಯನ್ನು ಮುಟ್ಟಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. (ಏಜೆನ್ಸೀಸ್​)

    ನನ್ನ ಬರ್ತ್​ಡೇಗೆ ಇದೇ ಗಿಫ್ಟ್​ ಕೊಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡ ಅಪ್ಪು

    ದಿಯಾ, ಲವ್ ಮಾಕ್​ಟೇಲ್ ಅಮೇಜಾನ್​ನಲ್ಲಿ: ಆನ್​ಲೈನ್​ನಲ್ಲಿ ಭರ್ಜರಿ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts