More

    ದಾಳಿ ನಡೆಸಿದವರಿಗೆ ನಾನೇ ನಿರ್ಧಿಷ್ಟ ಟಾರ್ಗೆಟ್​ ಆಗಿದ್ದೆ, ಅವರಲ್ಲಿ ಕೆಲವರನ್ನು ಗುರುತಿಸಬಲ್ಲೆ ಎಂದ ಜೆಎನ್​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​

    ನವದೆಹಲಿ: ಜವಾಹರ್ ಲಾಲ್​ ವಿಶ್ವವಿದ್ಯಾಲಯಕ್ಕೆ ಭಾನುವಾರ ಸಂಜೆ ನುಗ್ಗಿದ ಮುಸುಕುಧಾರಿಗಳ ಗುಂಪು ನಡೆಸಿದ ಹಲ್ಲೆಯಲ್ಲಿ ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ತಲೆಗೆ ತೀವ್ರವಾಗಿ ಗಾಯವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

    ಇಂದು ಡಿಸ್​ಚಾರ್ಜ್​ ಆದ ಬಳಿಕ ಮಾತನಾಡಿದ ಐಷೆ ಘೋಷ್​, ದಾಳಿಕೋರರಿಗೆ ನಾನೇ ನಿರ್ಧಿಷ್ಟ ಟಾರ್ಗೆಟ್​ ಆಗಿದ್ದೆ. ನನ್ನ ಮೇಲೆ ಐರನ್​ ರಾಡ್​ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಯೂನಿವರ್ಸಿಟಿಯಲ್ಲಿ ನಡೆದ ಹಿಂಸಾಚಾರ ನಡೆಸಿದ್ದು ಆರ್​ಎಸ್​ಎಸ್​-ಎಬಿವಿಪಿ ಸದಸ್ಯರೇ ಎಂದು ಪ್ರತಿಪಾದಿಸಿರುವ ಐಷೆ ಘೋಷ್​, ನಾನು ಸ್ವಲ್ಪ ಚೇತರಿಸಿಕೊಂಡ ಕೂಡಲೇ ಪೊಲೀಸರಿಗೆ ಎಲ್ಲವನ್ನೂ ತಿಳಿಸುತ್ತೇನೆ. ನನ್ನ ಹೇಳಿಕೆಗಳನ್ನು ದಾಖಲಿಸುತ್ತೇನೆ. ಎಬಿವಿಪಿ ಸದಸ್ಯರ ವಿರುದ್ಧ ಎಫ್ಐಆರ್​ ದಾಖಲಾಗಬೇಕು ಎಂದಿದ್ದಾರೆ.
    ರಾಡ್​ನಿಂದ ಹಲ್ಲೆ ನಡೆಸಿದ ಒಂದಷ್ಟು ಜನರು ಮುಖಕ್ಕೆ ಮುಸುಕು ಧರಿಸಿ ಇರಲಿಲ್ಲ. ನಾನು ಅವರನ್ನು ಗುರುತಿಸಬಲ್ಲೆ ಎಂದು ಹೇಳಿದ್ದಾರೆ.

    ಭಾನುವಾರ ಮುಸುಕುಧಾರಿಗಳು ಕೋಲು, ರಾಡ್, ಕಲ್ಲುಗಳಿಂದ ನಡೆಸಿದ ದಾಳಿಗೆ ಸುಮಾರು ವಿದ್ಯಾರ್ಥಿಗಳು, ಉಪನ್ಯಾಸಕರು ಎಲ್ಲ ಸೇರಿ ಸುಮಾರು 34 ಮಂದಿ ಗಾಯಗೊಂಡಿದ್ದರು. ( ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts