More

    “ಬಡವರ ಸೇವೆ ಮಾಡಬೇಕೆನ್ನೋ ಸ್ವಾರ್ಥದಲ್ಲಿ ಬಿಜೆಪಿ ಸೇರಿರುವೆ” : ಮಿಥುನ್ ಚಕ್ರವರ್ತಿ

    ಕೊಲ್ಕತಾ: ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮುನ್ನ ಬಿಜೆಪಿ ಸೇರಿರುವ ನಟ ಮಿಥುನ್ ಚಕ್ರವರ್ತಿ, ಬಡವರ ಸೇವೆ ಮಾಡಬೇಕೆನ್ನುವ ತಮ್ಮ ಸುದೀರ್ಘ ಕನಸನ್ನು ನನಸಾಗಿಸಲು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. “ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ. ಪ್ರಧಾನಿ ಮೋದಿ ಹೇಳಿದ ಹಾಗೆ ‘ಶೋನಾರ್ ಬಾಂಗ್ಲಾ’ (ಚಿನ್ನದ ಬಂಗಾಳ) ನಿರ್ಮಿಸಲು ಕಂಕಣಬದ್ಧನಾಗಿದ್ದೇನೆ” ಎಂದಿದ್ದಾರೆ.

    ಭಾನುವಾರ ಕೊಲ್ಕತಾದ ಬ್ರಿಗೇಡ್​ ಪೆರೇಡ್ ಗ್ರೌಂಡ್ಸ್​ನಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಮಿಥುನ್​ ಚಕ್ರವರ್ತಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಆನಂತರ ನಡೆದ ಪ್ರಧಾನಿ ಮೋದಿ ಅವರ ಭಾಷಣವನ್ನು ಆಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಚಕ್ರವರ್ತಿ, “ನೀವು ನನ್ನನ್ನು ಸ್ವಾರ್ಥಿ ಅನ್ನಬಹುದು. ಆದರೆ ಬಡವರ ಸೇವೆ ಮಾಡಬೇಕೆಂಬುದೇ ನನ್ನ ಸ್ವಾರ್ಥವಾಗಿದೆ.. ಅದಕ್ಕಾಗೇ ಬಿಜೆಪಿ ಸೇರಿದ್ದೇನೆ” ಎಂದರು.

    ಇದನ್ನೂ ಓದಿ: ಕೋವಿಡ್​ನಿಂದಾಗಿ ಇಡೀ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ: ಸಿಎಂ ಬಿಎಸ್​ವೈ

    “ನಾನು 18 ವರ್ಷದವನಾಗಿದ್ದಾಗಿನಿಂದ ನನ್ನದೊಂದು ಕನಸಿದೆ, ನಾನು ಬಡವರೊಂದಿಗೆ ಇರತೀನಿ. ಬಡವರ ಸಹಾಯ ಮಾಡ್ತೀನಿ. ಬಡವರಿಗೆ ಗೌರವ ಸಿಗುವ ಹಾಗೆ ಮಾಡ್ತೀನಿ ಅನ್ನೋದು. ನನ್ನ ಸಿನಿಮಾಗಳು ಹಾಗೇ ಇರುತ್ತವೆ. ನಾನು 25 ವರ್ಷ ಮಜದೂರ್ ಯೂನಿಯನ್ ಜೊತೆ ಕೆಲಸ ಮಾಡಿದೀನಿ. ಎಲ್ಲಿ ಯಾರಿಗೆ ಸಮಸ್ಯೆ ಆದರೂ ನಾನು ಸ್ಪಂದಿಸಿದ್ದೀನಿ. ಆದರೆ ಪ್ರಚಾರದ ಹಿಂದೆ ಬಿದ್ದಿಲ್ಲ ಅಷ್ಟೆ. ಈಗ ನನಗೆ ಅವಕಾಶ ಸಿಕ್ಕಿದೆ. ಯಾರಿಗೆ ಇಷ್ಟವಾಗಲಿ ಬಿಡಲಿ… ಬಡವರ ಬಗ್ಗೆ ಯೋಚಿಸುತ್ತಿರುವ, ಕೆಲಸ ಮಾಡಲು ಪ್ರಯತ್ನಿಸುತ್ತಿರುವ ಪಕ್ಷವೆಂದರೆ ಬಿಜೆಪಿ. ನಾನು ಕೆಲಸ ಮಾಡಬೇಕು ಅಂದರೆ ಯಾರದ್ದಾದರೂ ಕೈ ಹಿಡಿಯಲೇಬೇಕು. ನೀವು ನನ್ನನ್ನು ಸ್ವಾರ್ಥಿ ಅನ್ನಬಹುದು. ಆದರೆ ನನ್ನ ಸ್ವಾರ್ಥದ ಹಿಂದಿರುವ ಕಾರಣ ಒಂದೇ. ನಾನು ಬಡವರ ಸೇವೆ ಮಾಡಬೇಕು. ಅವರೊಂದಿಗೆ ನಿಲ್ಲಬೇಕು ಅನ್ನೋದು” ಎಂದು ಚಕ್ರವರ್ತಿ ಮನಸ್ಸು ಬಿಚ್ಚಿ ಮಾತನಾಡಿದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ

    ಸಿನಿಮಾ ಕ್ಷೇತ್ರಕ್ಕೂ ವಿಆರ್​ಎಲ್​ ಸಂಸ್ಥೆ ಎಂಟ್ರಿ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts