More

    ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ, ಅವರೇನು ನಿರ್ಧರಿಸುತ್ತಾರೋ ನೋಡೋಣ: ಡಿ.ಕೆ.ಶಿವಕುಮಾರ್

    ಬೆಂಗಳೂರು: ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್​ನಲ್ಲಿ ಇನ್ನೂ ತಳಮಳಗಳು ಮುಂದುವರಿದಿದ್ದು, ಒಮ್ಮತದ ನಿರ್ಧಾರಕ್ಕೆ ಬರಲು ರಾಜ್ಯ ಹಾಗೂ ಕೇಂದ್ರಮಟ್ಟದಲ್ಲೂ ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ‘ನನ್ನ ಬತ್ತಳಿಕೆಯಲ್ಲಿ ಸಾಕಷ್ಟು ವಿಚಾರಗಳಿದ್ದವು, ಆದರೆ..’ ಎಂಬುದಾಗಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ನಮ್ಮ ಫಲಿತಾಂಶದ ಬಗ್ಗೆ ಕೆಲವರು ವೈಯಕ್ತಿಕ ಅಭಿಪ್ರಾಯ ತಿಳಿಸಿರಬಹುದು. ಯಾರ ನಂಬರ್ ಬಗ್ಗೆ ಮಾತಾಡುವ ಶಕ್ತಿ ನನಗಿಲ್ಲ. ನನ್ನ ನಂಬರ್ 135, ಭ್ರಷ್ಟ ಸರ್ಕಾರದ ವಿರುದ್ಧ ಬೇಸತ್ತು ಜನ ನಮಗೆ 135 ಸ್ಥಾನ ಕೊಟ್ಟಿದ್ದಾರೆ. ನಾವು ಮಾಡಿದ ಚುನಾವಣೆ ರಣತಂತ್ರ ಎಲ್ಲವೂ ದೇಶಕ್ಕೆ ಮಾದರಿ. ನನ್ನ ಬತ್ತಳಿಕೆಯಲ್ಲಿ ಸಾಕಷ್ಟು ವಿಚಾರಗಳಿದ್ದವು, ಆದರೆ ನನಗೆ ಸಮಯ ಸಿಗಲಿಲ್ಲ, ಸಿಕ್ಕಿದ್ದರೆ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಬಹುದಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ದೆಹಲಿಗೆ ತೆರಳುವುದನ್ನು ಕೂಡ ಖಚಿತಪಡಿಸಿರು ಅವರು, ದೆಹಲಿಗೆ ಹೋಗುತ್ತೇನೆ, ಆದರೆ ಯಾವ ಸಮಯದಲ್ಲಿ ಹೋಗುತ್ತೇನೋ ಗೊತ್ತಿಲ್ಲ. ಯಾವ ವಿಮಾನ ಸಿಗುತ್ತದೋ ನೋಡಿಕೊಂಡು ಹೋಗುತ್ತೇನೆ ಎಂದರು. ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ರಾಜಸ್ಥಾನ ಕಾರ್ಯಾಗಾರದಲ್ಲಿ ಸೋನಿಯಾ ಗಾಂಧಿಯವರಿಗೆ ಮಾತು ಕೊಟ್ಟಿದ್ದೆ, ಆ ಮಾತು ಉಳಿಸಿಕೊಂಡಿದ್ದೇನೆ. ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೋ ನೋಡೋಣ ಎಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿಎಂ ಯಾರಾಗಬೇಕು ಎಂಬುದನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ತೀರ್ಮಾನಿಸುತ್ತಾರೆ, ಅದನ್ನು ಅವರಿಗೇ ಬಿಡೋಣ ಎಂದರು.

    ಇದನ್ನೂ ಓದಿ: ವಾಟ್ಸ್​ಆ್ಯಪ್ ಬಳಕೆದಾರರ ಮೈಕ್ರೋಫೋನ್ ದುರ್ಬಳಕೆ?; ವಾಟ್ಸ್​ಆ್ಯಪ್​ ವಿಶ್ವಾಸಾರ್ಹ ಜಾಲತಾಣವಲ್ಲ ಎಂದ ಮಸ್ಕ್

    ನಾನು ಏಕಾಂಗಿ ಮನುಷ್ಯ, ಧೈರ್ಯದ ಮನುಷ್ಯ, ನನ್ನ ಮೆಜಾರಿಟಿ ನಾನು ಸಾಬೀತು ಮಾಡಿದ್ದೇನೆ. ಕಳೆದ ಐದು ವರ್ಷಗಳಿಂದ ಏನಾಗಿದೆ ಎಂದು ಈಗ ನಾನು ಹೇಳುವುದಿಲ್ಲ, ಭವಿಷ್ಯದಲ್ಲಿ ಅದನ್ನು ಹೇಳುತ್ತೇನೆ. ಮೈತ್ರಿ ಸರ್ಕಾರದಲ್ಲಿ ಕಳೆದ ಬಾರಿ 15 ಶಾಸಕರು ಬಿಟ್ಟು ಹೋದರೂ ನಾನು ತಲೆಕೆಡಿಸಿಕೊಂಡಿರಲಿಲ್ಲ, ಧೈರ್ಯ ಕಳೆದುಕೊಂಡಿರಲಿಲಿಲ್ಲ ಎಂದೂ ಡಿಕೆಶಿ ಹೇಳಿದರು.

    ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು

    ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ..: ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಮ್ಮನ ಬಳಿಗೆ ತೆರಳಿ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts