More

    ಮನವೊಲಿಸುವ ಪ್ರಯತ್ನ ಒಮ್ಮೆಯೂ ಮಾಡಲಿಲ್ಲ; ಹಾರ್ದಿಕ್​ ಬಗ್ಗೆ ಜಿಟಿ ಕೋಚ್​ ಹೇಳಿದ್ದಿಷ್ಟು!

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಗ್ರ್ಯಾಂಡ್ ಓಪನಿಂಗ್ ಇದೇ ಮಾರ್ಚ್​ 22ರಂದು ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದರ ಬೆನ್ನಲ್ಲೇ ಮೊದಲ 21 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಕಿಕ್​ಸ್ಟಾರ್ಟ್​ ಪಂದ್ಯವನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಆಯೋಜಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ.

    ಇದನ್ನೂ ಓದಿ: ನೀರಿನ ಸಮಸ್ಯೆ ವಿಚಾರ: ‘ಸಿಎಂ ಕರೆದಿರುವ ಸಭೆ ಕೇವಲ ಕಾಟಾಚಾರ ಆಗದಿರಲಿ’

    ಒಂದೆಡೆ ಐಪಿಎಲ್​ನ 10 ತಂಡಗಳ 10 ಕ್ಯಾಪ್ಟನ್​ಗಳ ಮೇಲೆ ಭಾರೀ ಭರವಸೆ ಮತ್ತು ನಿರೀಕ್ಷೆಗಳ ಹೆಚ್ಚಾದರೂ ಸಹ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿರುದ್ಧ ಕೇಳಿಬರುತ್ತಿರುವ ವಿಚಾರಗಳು ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬಂತೆ ಕಾಣುತ್ತಿದೆ. ಹೌದು, ಇದಕ್ಕೆ ಕಾರಣ ಎರಡು ವರ್ಷ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಫೈನಲ್​ ಹಣಾಹಣಿಯವರೆಗೂ ತಂದಿದ್ದ ಪಾಂಡ್ಯ ಕಳೆದ ವರ್ಷ ದಿಢೀರ್​ ಟೈಟನ್​ಗೆ ಕೈಕೊಟ್ಟು ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಹಿಂತಿರುಗಿದರು. ಈ ಸಂಗತಿ ಕ್ರಿಕೆಟ್​ ಫ್ಯಾನ್ಸ್​ಗಳಲ್ಲಿ ಭಾರೀ ಆಶ್ಚರ್ಯ ಮೂಡಿಸಿತು.

    ಸದ್ಯ ಮುಂಬೈ ಇಂಡಿಯನ್ಸ್​ ತಂಡದ ನಾಯಕನಾಗಿ ಈ ಬಾರಿಯ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿರುವ ಹಾರ್ದಿಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವಿಚಾರಗಳ ಕುರಿತು ಮಾತನಾಡಿರುವ ಗುಜರಾತ್ ಟೈಟನ್ಸ್​ನ ಕೋಚ್​ ಆಶಿಶ್​ ನೆಹ್ರಾ, “ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್​ ಹೋಗಿದ್ದು ಅವರ ನಿರ್ಧಾರ, ಖಂಡಿತ ಮಿಸ್​ ಮಾಡಿಕೊಳ್ಳುತ್ತೀವಿ. ಆದರೆ, ಒಮ್ಮೆಯೂ ಪಾಂಡ್ಯ ಅವರನ್ನು ಮನವೊಲಿಸಲು ನಾವು ಪ್ರಯತ್ನಿಸಲಿಲ್ಲ” ಎಂದು ನೆಹ್ರಾ ಹೇಳಿದರು.

    ಇದನ್ನೂ ಓದಿ: ಪುನೀತ್‌ ರಾಜ್‌ಕುಮಾರ್‌ 49ನೇ ಹುಟ್ಟುಹಬ್ಬ; ಅಪ್ಪು ಹುಟ್ಟುಹಬ್ಬಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಗೈರು

    “ಮಾರ್ಚ್ 22ರಿಂದ ಪ್ರಾರಂಭವಾಗುವ ಐಪಿಎಲ್‌ನಲ್ಲಿ ಗುಜರಾತ್​ ಟೈಟನ್ಸ್​ ಪರವಾಗಿ ಖಂಡಿತ ಹಾರ್ದಿಕ್​ನ ಮಿಸ್​ ಮಾಡ್ಕೊತ್ತೀವಿ. ನೀವು ಆಡಿದಷ್ಟು, ಅನುಭವ ಹೆಚ್ಚುತ್ತದೆ. ನಾನು ಅವರನ್ನು ಹೋಗದಂತೆ ತಡೆಯಬಹುದಿತ್ತು. ಆದ್ರೆ, ಅದನ್ನು ಮಾಡಲಿಲ್ಲ. ಪಾಂಡ್ಯ ಎರಡು ವರ್ಷಗಳ ಕಾಲ ಜಿಟಿಯಲ್ಲಿ ಆಡಿದ್ದಾರೆ. ಆದರೆ ಇಂದು ಮುಂಬೈಗೆ ಮರಳಿದ್ದಾರೆ. 5-6 ವರ್ಷಗಳ ಕಾಲ ಅದೇ ತಂಡದಲ್ಲಿ ಆಡಿರುವುದು ಇದಕ್ಕೆ ಕಾರಣ” ಎಂದರು,(ಏಜೆನ್ಸೀಸ್).

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    1.4 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌, ಅಂಗಡಿಗಳಲ್ಲಿ ಹೂಡಿಕೆ….ವಿಶ್ವದ ಶ್ರೀಮಂತ ಭಿಕ್ಷುಕ ಈತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts