More

    ಪತ್ನಿಯ ತಲೆ ಕಡಿದು, ಟೂ ವೀಲ್ಹರ್​ನಲ್ಲಿಟ್ಟು 5 ಕಿ.ಮೀ. ದೂರ ಕೊಂಡೊಯ್ದು ಆತ ಮಾಡಿದ್ದೇನು?!

    ಹೈದರಾಬಾದ್​: ಆಘಾತಕಾರಿ ನಡವಳಿಕೆ ಇದು! ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆ ಕಡಿದು, ಆ ತಲೆಯನ್ನು ಅದನ್ನು ಟೂ ವೀಲ್ಹರ್ ಮೇಲೆ ಇಟ್ಟು 5 ಕಿ.ಮೀ. ಪ್ರಯಾಣ ಮಾಡಿದ್ದೆಲ್ಲಿಗೆ?! ಈ ಘಟನೆಯಿಂದಾಗಿ ಊರೇ ಬೆಚ್ಚಿ ಬಿದ್ದಿದೆ.

    ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ ಎಂಬ ಗ್ರಾಮದಲ್ಲಿ ಈ ದುರಂತ ಘಟನೆ ಬುಧವಾರ ರಾತ್ರಿ ನಡೆದಿತ್ತು. ಆರೋಪಿಯನ್ನು ಜುರ್ರು ಸಾಯಿಲು ಎಂದು ಗುರುತಿಸಲಾಗಿದೆ. ಆರೋಪಿಯ ಪತ್ನಿ ಅಂಶಮ್ಮಾ (35) ಮೃತ ಮಹಿಳೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸಾಯಿಲು ತನ್ನ ಪತ್ನಿಯ ಶೀಲವನ್ನು ಶಂಕಿಸಿದ್ದ. ಅನೈತಿಕ ಸಂಬಂಧದ ವಿಚಾರವಾಗಿ ಕ್ರುದ್ಧನಾಗಿದ್ದ. ಈ ವಿಚಾರವಾಗಿ ಪದೇಪದೆ ಜಗಳವೂ ಆಗುತ್ತಿತ್ತು. ಹೀಗಾಗಿ ಪತ್ನಿಯ ತಲೆ ಕಡಿದು, ಉಳಿದ ಶರೀರವನ್ನು ಮನೆಯ ಸಮೀಪವೇ ಇದ್ದ ಪೊದೆಗೆ ಎಸೆದಿದ್ದ.

    ಇದನ್ನೂ ಓದಿ: ಮನಸು ದೃಢವಾಗಿರಲಿ ಈ ರಾಶಿಯವರಿಗೆ; ಹತ್ತಿರದವರೇ ನೋವುಂಟು ಮಾಡಬಹುದು !

    ಬಳಿಕ ತಲೆಯನ್ನು ಟೂ ವೀಲ್ಹರ್ ಮೇಲೆ ಇಟ್ಟುಕೊಂಡು ಗ್ರಾಮದಿಂದ 5 ಕಿ.ಮೀ. ದೂರದ ನಾರಾಯಣಖೇಡ್​ಗೆ ಕೊಂಡೊಯ್ದ. ಅಲ್ಲಿ ತಾನು ಶಂಕಿಸಿದ್ದ ಪತ್ನಿಯ ಗುಪ್ತ ಪ್ರೇಮಿ ಎನ್ನಲಾದವನ ಮನೆಯ ಬಾಗಿಲಿನಲ್ಲಿ ಪತ್ನಿಯ ತಲೆಯನ್ನು ಇಟ್ಟ! ಈ ಘಟನೆಯಿಂದ ಆ ಊರಿನವರೂ ಬೆಚ್ಚಿಬಿದ್ದರು! ಇಷ್ಟಾದ ಬಳಿಕ ಸಮಾಧಾನ ಹೊಂದಿದ ಸಾಯಿಲು ನೇರವಾಗಿ ಹೋದದ್ದು ನಾರಾಯಣಖೇಡ್ ಪೊಲೀಸ್ ಠಾಣೆಗೆ. ಅಲ್ಲಿ ಕೊಲೆಯ ವಿಚಾರ ತಿಳಿಸಿ ಶರಣಾಗಿದ್ದಾನೆ. (ಏಜೆನ್ಸೀಸ್)

    ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚ್​ನ ನವೆಂಬರ್​ನಲ್ಲಿ ಭಾರತಕ್ಕೆ ಬರಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts