More

    ಲಾಕ್​ಡೌನ್ ವರದಾನವಾಯ್ತು ಈ 51 ವರ್ಷದ ವ್ಯಕ್ತಿಗೆ; 33 ವರ್ಷದಿಂದ ಸಾಧ್ಯವಾಗದ್ದು ಈಗ ಫಲಿಸಿತು

    ಹೈದರಾಬಾದ್​: ಕರೊನಾ ಲಾಕ್​ಡೌನ್​ನಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ಕೂಡ ಪ್ರಭಾವ ಬಿದ್ದಿದೆ. ವಿದ್ಯಾರ್ಥಿಗಳ ಓದು-ಪಠ್ಯಕ್ರಮಗಳು ನಡೆಯುತ್ತಿಲ್ಲ. ಆದರೆ ಈ 51 ವರ್ಷದ ವ್ಯಕ್ತಿಯ ಪಾಲಿಗೆ ಲಾಕ್​ಡೌನ್​ ವರದಾನವಾಗಿದೆ.
    ಕಳೆದ 33ವರ್ಷಗಳಿಂದಲೂ ಹತ್ತನೇ ಕ್ಲಾಸ್​ ಪರೀಕ್ಷೆ ಬರೆಯುತ್ತ, ಫೇಲ್​ ಆಗುತ್ತಿದ್ದ 51 ವರ್ಷದ ಹೈದರಾಬಾದ್​ನ ಈ ಮೊಹಮ್ಮದ್​ ನೂರುದ್ದೀನ್​ ಅವರು ಈ ಬಾರಿ ಉತ್ತೀರ್ಣರಾಗಿದ್ದಾರೆ.

    ಕಳೆದ 33 ವರ್ಷಗಳಿಂದಲೂ 10ನೇ ಕ್ಲಾಸ್​ ಪರೀಕ್ಷೆ ಬರೆಯುತ್ತಿದ್ದೆ. ಆದರೆ ಉತ್ತೀರ್ಣನಾಗುತ್ತಿರಲಿಲ್ಲ. ಆದರೆ ಈ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಇಲ್ಲಿ ಕೂಡ ಅವರು ನಿಜವಾಗಿಯೂ ಉತ್ತೀರ್ಣರಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಕೊವಿಡ್​-19ನಿಂದ ಶಿಕ್ಷಣ ವ್ಯವಸ್ಥೆ ಕೂಡ ಏರುಪೇರಾಗಿದೆ. ಹಾಗಾಗಿ ತೆಲಂಗಾಣ ಸರ್ಕಾರ ಯಾವ ಮಕ್ಕಳನ್ನೂ ಅನುತ್ತೀರ್ಣ ಮಾಡದೆ, ಸಾಮೂಹಿಕವಾಗಿ ಪಾಸ್​ ಮಾಡಿದೆ. ಇದನ್ನೂ ಓದಿ: ರಾಮಮಂದಿರ ಭೂಮಿಪೂಜೆ ವೀಕ್ಷಿಸಲು ದೆಹಲಿಯಾದ್ಯಂತ ಎಲ್​ಇಡಿ ಸ್ಕ್ರೀನ್​ಗಳ ಅಳವಡಿಕೆಗೆ ಮುಂದಾದ ಬಿಜೆಪಿ

    ನನಗೆ ಇಂಗ್ಲಿಷ್​ ಸರಿಯಾಗಿ ಬರುವುದಿಲ್ಲ. ಆದರೆ ಕಲಿಸಲು ಯಾರೂ ಇರಲಿಲ್ಲ. ಟ್ಯೂಷನ್​ಗೂ ಹೋದವನಲ್ಲ. ಆದರೆ ಈ ಬಾರಿ ನಾನು ನನ್ನ ಸಹೋದರ, ಸೋದರಿಯ ನೆರವಿನಿಂದ ಕೈಲಾದಷ್ಟು ಅಭ್ಯಾಸ ಮಾಡಿದ್ದೆ. ನಾನು ಸೆಕ್ಯೂರಿಟಿ ಗಾರ್ಡ್​ ಜಾಬ್​ಗಾಗಿ ಹಲವು ಕಡೆ ಅಪ್ಲೈ ಮಾಡಿದ್ದೆ. ಆದರೆ ಎಲ್ಲ ಕಡೆಗೂ 10ನೇ ಕ್ಲಾಸ್​ ಉತ್ತೀರ್ಣ ಆಗಿರುವ ಅಂಕಪಟ್ಟಿ ಕೇಳುತ್ತಿದ್ದರು. ಆ ಕಾರಣಕ್ಕೇ ನಾನು 33 ವರ್ಷಗಳಿಂದಲೂ ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದರು ಎಂದು ಮೊಹಮ್ಮದ್​ ತಿಳಿಸಿದ್ದಾರೆ.

    ಆದರೂ 1989ರಲ್ಲಿ ಒಂದು ಕಡೆ ಸೆಕ್ಯೂರಿಟಿ ಗಾರ್ಡ್ ಕೆಲಸ ಸಿಕ್ಕಿತು. ನನಗೆ 7000 ರೂ.ಸಂಬಳ ಬರುತ್ತದೆ. ನಾಲ್ವರು ಮಕ್ಕಳು ಇದ್ದಾರೆ. ಆದರೂ ಪರೀಕ್ಷೆ ಬರೆಯುವುದನ್ನು ಬಿಟ್ಟಿರಲಿಲ್ಲ ಎಂದು ತಿಳಿಸಿದರು.

    ಇಷ್ಟಕ್ಕೇ ಮುಗಿಯುವುದಿಲ್ಲ. ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತೇನೆ. ಗ್ರಾಜ್ಯುಯೇಶನ್​ ಮಾಡುತ್ತೇನೆ. ಕಾರಣ ಶಿಕ್ಷಣವಂತರಿಗೆ ಎಲ್ಲ ಕಡೆಯೂ ಗೌರವ ಸಿಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

    ಪಂಜಾಬ್​​ನಲ್ಲಿ ಮಾರುಕಟ್ಟೆಗೆ ಬಂತು ಹೊಸ ಇಮ್ಯೂನಿಟಿ ಬೂಸ್ಟರ್​ ಹಾಲು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts