More

    VIDEO| ಕುಡಿಯುವ ನೀರಿನಲ್ಲಿ ಕಾಲು ತೊಳೆದವನ ಹೆಗಲೇರಿದ ಶನಿ…!

    ಹೈದರಾಬಾದ್​: ಕುಡಿಯುವ ನೀರನ್ನು ಕಲುಷಿತಗೊಳಿಸಿದ ಆರೋಪದ ಮೇಲೆ ನೀರಿನ ಟ್ಯಾಂಕರ್​ ಚಾಲಕನ ವಿರುದ್ಧ ಹೈದರಾಬಾದ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಕುಡಿಯುವ ಉದ್ದೇಶಕ್ಕಾಗಿ ಟ್ಯಾಂಕರ್​ಗೆ ತುಂಬುತ್ತಿದ್ದ ನೀರಿನಲ್ಲೇ ಕಾಲು ತೊಳೆದ ಚಾಲಕನ ವಿಡಿಯೋ ವೈರಲ್​ ಆದ ಬೆನ್ನಲ್ಲೇ ದೂರು ದಾಖಲಿಸಲಾಗಿದೆ. ಘಟನೆಯು ಗುರುವಾರ ಹೈದರಾಬಾದ್​ನ ಮೂಸ್​ಪೇಟ್ ನೀರು ತುಂಬು ಕೇಂದ್ರದಲ್ಲಿ ನಡೆದಿದೆ. ಈ ಏರಿಯಾ ಕುಕಟಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ.

    ಇದನ್ನೂ ಓದಿ: 21ಸಾವಿರವನ್ನೂ ಮೀರಿತು ರಾಜ್ಯದ ಕರೊನಾ ಸೋಂಕಿತರ ಸಂಖ್ಯೆ; ಬೆಂಗಳೂರಲ್ಲಿ ಇಂದು ಸಾವಿರಕ್ಕೂ ಹೆಚ್ಚು ಕೇಸ್​

    ವಿಡಿಯೋದಲ್ಲಿ ಏನಿದೆ?: ನೀರು ತುಂಬುವ ಕೇಂದ್ರದ ಮುಂದೆ ಟ್ಯಾಂಕರ್​ ನಿಲ್ಲಿಸಿ, ಅದಕ್ಕೆ ಪೈಪ್​ ಮೂಲಕ ಕುಡಿಯುವ ನೀರನ್ನು ಭರ್ತಿ ಮಾಡಲಾಗುತ್ತಿರುತ್ತದೆ. ಈ ವೇಳೆ ಟ್ಯಾಂಕರ್​ ಚಾಲಕ ತನ್ನ ಬಲಗಾಲನ್ನು ಮೇಲಕ್ಕೆ ಎತ್ತಿ ತನ್ನ ಪಾದಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಾನೆ.

    ಇದೀಗ ವಿಡಿಯೋ ವೈರಲ್​ ಆಗಿದ್ದು, ಕುಡಿಯುವ ಉದ್ದೇಶಕ್ಕಾಗಿ ಎಂದು ಗೊತ್ತಿದ್ದರೂ ಕಾಲು ತೊಳೆದ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚಾಲಕನನ್ನು ವಿಜಯ್​ ಎಂದು ಗುರುತಿಸಲಾಗಿದೆ. ಆತ ಗುತ್ತಿಗೆ ನೌಕರನಾಗಿದ್ದು, ಹೈದರಾಬಾದ್​ ಮೆಟ್ರೋಪಾಲಿಟನ್​ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಎಚ್​ಎಂಡಬ್ಲ್ಯುಎಸ್​ಎಸ್​​ಬಿ) ಯಲ್ಲಿ ಕೆಲಸ ಮಾಡುತ್ತಿದ್ದಾನೆ.

    ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಯುವತಿಯ ಡೆತ್​ನೋಟ್​ನಲ್ಲಿತ್ತು ಪ್ರಿಯಕರನ ಹೆಸರು

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಚ್​ಎಂಡಬ್ಲ್ಯುಎಸ್​ಎಸ್​​ಬಿ, ಚಾಲಕ ವಿಜಯ್​ ಖಾಸಗಿ ನೀರಿನ ಟ್ಯಾಂಕರ್​ಗೆ ನೀರು ತುಂಬುತ್ತಿದ್ದ. ಆ ವಾಹನ ನಮ್ಮ ಇಲಾಖೆ ಸೇರಿದ್ದಲ್ಲ ಎಂದು ಹೇಳಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್​ಎಂಡಬ್ಲ್ಯುಎಸ್​ಎಸ್​​ಬಿ ಮ್ಯಾನೇಜರ್​ ಶ್ರೀನಿವಾಸ್​ ರಾವ್​ ಕುಕಟಪಲ್ಲಿ ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ವಿಡಿಯೋ ಪರಿಶೀಲಿಸಿದ ಬಳಿಕ ವಿಜಯ್​ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 270 (ಜೀವಕ್ಕೆ ಅಪಾಯಕಾರಿಯಾದ ಸೋಂಕು ಹರಡಿಸುವ ರೀತಿಯ ಅಪಾಯಕಾರಿ ವರ್ತನೆ) ಮತ್ತು 427 (ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸುವ ಕೆಲಸ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಪೊಲೀಸ್​ ಠಾಣೆಗೇ ‘ಬೇಡಿ’ ಹಾಕಿದ್ರು! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts